ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ಸ್ವೀಕಾರ: ಸಿಬ್ಬಂದಿಗೆ ನೀಡಿದ ಸಂದೇಶವೇನು?
ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಕುಲದೀಪ್ ಕುಮಾರ್ ಜೈನ್ ಅಧಿಕಾರ ಸ್ವೀಕಾರ ಮಾಡಿದ್ದು, ಪೊಲೀಸ್ ಸಿಬ್ಬಂದಿಗೆ ಕೆಲವೊಂದು ಸಂದೇಶವನ್ನು ನೀಡಿದ್ದಾರೆ. ಆ ಸಂದೇಶ ಏನು ಅಂತಾ ಇಲ್ಲಿ ತಳಿಯಿರಿ.
ಮಂಗಳೂರು, ಫೆಬ್ರವರಿ, 24: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನೂತನ ಕಮಿಷನರ್ ಆಗಿ ಕುಲದೀಪ್ ಕುಮಾರ್ ಆರ್. ಜೈನ್ ಅಧಿಕಾರ ಸ್ವೀಕರಿಸಿದ್ದಾರೆ. ನಿರ್ಗಮಿತ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಹಾಗಾದರೆ ಕುಲದೀಪ್ ಕುಮಾರ್ ಆರ್. ಜೈನ್ ಅವರು ಮೂಲತಃ ಎಲ್ಲಿಯವರು, ಈ ಹಿಂದೆ ಎಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನುವ ವಿವರ ಇಲ್ಲಿದೆ ಗಮನಿಸಿ.
ಕುಲದೀಪ್ ಕುಮಾರ್ ಆರ್. ಜೈನ್ ಹುಟ್ಟಿದ್ದು ರಾಜಸ್ತಾನದಲ್ಲಿ. ಆದರೆ ಚೆನ್ನೈನಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಇವರು 2011ನೇ ಸಾಲಿನ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಕುಲದೀಪ್ ಕುಮಾರ್ ಅವರ ಪ್ರೊಬೆಷನರಿ ಅವಧಿ ಮಂಗಳೂರು ಆಗಿತ್ತು. ಬಳಿಕ ಚೆನ್ನಪಟ್ಟಣದಲ್ಲಿ ಎಎಸ್ಪಿ, ಚಾಮರಾಜನಗರ, ಬಿಜಾಪುರದಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಹಾಗೆಯೇ ನಂತರ ಬೆಂಗಳೂರು ಸಿಟಿಯಲ್ಲಿ ಡಿಸಿಪಿ ಕ್ರೈಂ ಹಾಗೂ ಡಿಸಿಪಿ ಟ್ರಾಫಿಕ್ ಆಗಿದ್ದು, ಕೆಎಸ್ಆರ್‌ಪಿ ಹಾಗೂ ಎಸಿಬಿಯಲ್ಲೂ ಕೂಡ ಕಾರ್ಯನಿರ್ವಹಿಸಿದ್ದರು.

ಕುಲದೀಪ್ ಕುಮಾರ್ ವೃತ್ತಿ ಜೀವನದ ವಿವರ
ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, 10ವರ್ಷಗಳ ಹಿಂದೆ ಪ್ರೊಬೆಷನರಿ ಅವಧಿಯಲ್ಲಿ ಮಂಗಳೂರಿನಲ್ಲಿಯೇ ಇದ್ದೆ. ಈಗ ಮಂಗಳೂರು ಬಹಳಷ್ಟು ಬದಲಾವಣೆ ಆಗಿದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಇದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತಾದೆ. ಯಾರು ಅದಕ್ಕೆ ಹೊಣೆಗಾರರು ಇರುತ್ತಾರೆಯೋ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ನಿಯಮಗಳ ಬಗ್ಗೆ ವಿವರಿಸಿದ ಕುಲದೀಪ್ ಕುಮಾರ್
ಮಂಗಳೂರು ಸೂಕ್ಷ್ಮ ಪ್ರದೇಶವಾಗಿದ್ದರೆ, ನಾನೂ ಅಷ್ಟೇ ಸೂಕ್ಷ್ಮವಾಗಿ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನ ಪಡುತ್ತೇನೆ. ಹಾಗೆಯೇ ಯಾವ ರೀತಿಯಲ್ಲಿ ಕ್ರಮಗಳು ಆಗಬೇಕೋ ಅದು ಆಗುತ್ತದೆ. ನನ್ನ ಅವಧಿಯಲ್ಲಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶ ಇರುವುದಿಲ್ಲ. ಭ್ರಷ್ಟಾಚಾರಕ್ಕೆ ಅವಕಾಶ ನೀಡದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನೂ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿದರು.

ಜನಸಾಮಾನ್ಯರಿಗೆ ಎಷ್ಟು ಅನುಕೂಲ ಕೆಲಸಗಳು ಆಗುತ್ತದೆಯೋ ಅಷ್ಟು ಮಾಡಬೇಕು. ಈ ಬಗ್ಗೆ ಅಧಿಕಾರಿ, ಸಿಬ್ಬಂದಿಯ ಕಾರ್ಯಚಟುವಟಿಕೆಗಳನ್ನು ನಾನೇ ವೀಕ್ಷಿಸುತ್ತೇನೆ. ಟ್ರಾಫಿಕ್ ನಿಯಗಳನ್ನು ಉಲ್ಲಂಘಿಸುತ್ತಿರುವವರ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.












Click it and Unblock the Notifications