ಡೆಂಗ್ಯೂ; ಚಿಕಿತ್ಸೆ ಫಲಿಸದೆ ಮಂಗಳೂರಿನಲ್ಲಿ ಪತ್ರಕರ್ತ ಸಾವು

ಮಂಗಳೂರು, ಜುಲೈ 22 : ಡೆಂಗ್ಯೂ ಜ್ವರದಿಂದಾಗಿ ಪತ್ರಕರ್ತರೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಜಿಲ್ಲಾ ವ್ಯಾಪ್ತಿಯ ಬಿ ಟಿವಿ ಕ್ಯಾಮೆರಾಮೆನ್ ನಾಗೇಶ್ ಪಡು ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹತ್ತು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಗೇಶ್, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

journalist died by dengue in mangaluru

ನಾಗೇಶ್ ಮಂಗಳೂರು ಹೊರವಲಯದ ನೀರುಮಾರ್ಗ ಸಮೀಪದ ಪಡು ನಿವಾಸಿ. ಸ್ಥಳೀಯವಾಗಿಯೂ ಸಾಮಾಜಿಕ ಧಾರ್ಮಿಕ ಹಾಗೂ ಸಂಘಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರೂ ಆಗಿದ್ದರು. ಉತ್ತಮ‌ ಕ್ರಿಕೆಟ್ ಆಟಗಾರ ಕೂಡ ಹೌದು. ಪತ್ರಕರ್ತರ ಬಳಗದಲ್ಲಿ ಬಹಳಷ್ಟು ಮಿತ್ರರನ್ನು ನಾಗೇಶ್ ಹೊಂದಿದ್ದರು. ಅವರಿಗೆ ಒಂದು ಮಗು, ಪತ್ನಿ, ತಂದೆ ತಾಯಿ, ಸಹೋದರ ಸಹೋದರಿಯರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+