ಮಂಗಳೂರು ವಿವಿ ಮಾಜಿ ಉಪಕುಲಪತಿ ಶಿವಶಂಕರಮೂರ್ತಿ ನಿಧನ

ಮಂಗಳೂರು, ಆಗಸ್ಟ್, 19 : ಮಂಗಳೂರು ವಿಶ್ವವಿದ್ಯಾಲಯ ಉಪ ಕುಲಪತಿಯಾಗಿ ಸೇವೆ ಸಲ್ಲಿಸಿದ್ದ ಪ್ರೊ ಟಿ. ಸಿ ಶಿವಶಂಕರ ಮೂರ್ತಿ(63) ಬುಧವಾರ ಪುಣೆಯಲ್ಲಿ ನಿಧನರಾದರು.

ಶಿವಶಂಕರ ಮೂರ್ತಿ ಪುಣೆಯಲ್ಲಿ ಉಪನ್ಯಾಸ ನೀಡಲು ತೆರಳಿದ್ದ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಸ್ನೇಹಿತರು, ಕುಟುಂಬದವರು ಇವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. [ಮಂಗಳೂರಲ್ಲಿ ಮಕ್ಕಳ ರಾಷ್ಟ್ರಮಟ್ಟದ ಕೃಷ್ಣ ವೇಷ ಸ್ಪರ್ಧೆ]

Former VC of Mangaluru University Prof T C Shivashankara Murthy Passes Away

ಮೂಲತಃ ಮೈಸೂರಿನ ತಲಕಾಡಿನಲ್ಲಿನವರಾದ ಇವರು ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ತಲಕಾಡಿನಲ್ಲಿಯೇ ಪೂರೈಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ಸಸ್ಯಶಾಸ್ತ್ರ) ಪದವಿ ಗಳಿಸಿದ್ದು, ಅಲ್ಲಿಯೇ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದರು.

ಕೆನಡಾದ ಒಟ್ಟಾವ ವಿಶ್ವವಿದ್ಯಾಲಯದಲ್ಲಿ 1980 ರಲ್ಲಿ ಪಿ.ಎಚ್ ಡಿ ಪಡೆದ ಮೂರ್ತಿ ಮೈಸೂರು ವಿಶ್ವವಿದ್ಯಾಲಯದಲ್ಲಿ 37 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದು, 2010 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಯಾಗಿ ನೇಮಕ ಗೊಂಡಿದ್ದರು.

National Assessment and Accreditation Council (NAAC)ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದು, 2011 ರಲ್ಲಿ ಎನ್‌ಸಿಸಿ ನಿರ್ದೇಶಕರಿಂದ ಕರ್ನಲ್ ಕಮಾಂಡ್‌ಮೆಂಟ್ ರಾಂಕ್ ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+