ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿನಾಯಕ ಬಾಳಿಗ ಹತ್ಯೆಗೆ 6 ವರ್ಷ; ಬಾಳಿಗ ಮನೆಗೆ ಬೃಂದಾ ಕಾರಟ್ ಭೇಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 21; ಮಂಗಳೂರಿನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆಯಾಗಿ ಆರು ವರ್ಷಗಳು ಕಳೆದಿದೆ. 2016ರ ಮಾರ್ಚ್‌ 21ರ ಬೆಳಗ್ಗೆ ಮನೆಯ ಸಮೀಪದಲ್ಲೇ ವಿನಾಯಕ ಬಾಳಿಗ ಹತ್ಯೆಯಾಗಿತ್ತು. ಮಂಗಳೂರು ವೆಂಕಟರಮಣ ದೇವಸ್ಥಾನದ ಆಸ್ತಿಗೆ ಸಂಬಂಧಿಸಿದಂತೆ ವಿನಾಯಕ ಬಾಳಿಗ ಪ್ರಶ್ನೆ ಎತ್ತಿದ್ದಕ್ಕೆ ಹತ್ಯೆಯಾದ ಬಗ್ಗೆ ಆರೋಪ ವ್ಯಕ್ತವಾಗಿತ್ತು.

ಈ ಸಂಬಂಧ ಸ್ಥಳೀಯ ಮುಖಂಡನೋರ್ವ ಸಹಿತ ಹಲವರ ಬಂಧನವಾಯಿತು. ಆದರೆ ಮುಖಂಡ ಜಾಮೀನಿನ ಮೇಲೆ ಹೊರಬಂದಿದ್ದು, ಜಾಮೀನು ರದ್ದು ಕೋರಿ ಕಾನೂನು ಹೋರಾಟವೇ ನಡೆಯಿತು. ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಸರ್ಕಾರ ವಿನಾಯಕ ಬಾಳಿಗ ಹತ್ಯೆ ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸಬೇಕೆಂದು ಜನ ಒತ್ತಾಯ ಮಾಡಿದರು. ಆದರೆ ಸರ್ಕಾರ ಈ ಪ್ರಕರಣವನ್ನೂ ಇನ್ನೂ ಎಸ್‌ಐಟಿಗೆ ಒಪ್ಪಿಸದೇ ತನಿಖೆ ಮಂದಗತಿಯಲ್ಲಿ ನಡೆಯುತ್ತಿದೆ.

ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರ ಆತ್ಮಹತ್ಯೆವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿದಾರ ಆತ್ಮಹತ್ಯೆ

ವಿನಾಯಕ ಬಾಳಿಗ ಹತ್ತೆಯಾಗಿ ಆರು ವರ್ಷಗಳಾದ ಹಿನ್ನಲೆಯಲ್ಲಿ ದೇಶ ಪ್ರೇಮಿಗಳ ಸಂಘಟನೆಗಳ ಒಕ್ಕೂಟದಿಂದ 'ಬಾಳಿಗ ನಡೆದ ದಾರಿಯಲ್ಲಿ ನಡೆಯೋಣ ಬನ್ನಿ' ಅಂತಾ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ಮಾಜಿ ರಾಜ್ಯ ಸಭಾ ಸದಸ್ಯೆ ಬೃಂದಾ ಕಾರಟ್ ಆಗಮಿಸಿದ್ದಾರೆ. ಇದಕ್ಕೂ ಮೊದಲು ವಿನಾಯಕ ಬಾಳಿಗ ಮನೆಗೆ ಅವರು ಭೇಟಿ ನೀಡಿದ್ದಾರೆ.

ಪಕೋಡ ಮಾರಿ ಜೀವನ ಕಟ್ಟಿಕೊಂಡ ರಾಜೇಶ್ ಬಾಳಿಗಪಕೋಡ ಮಾರಿ ಜೀವನ ಕಟ್ಟಿಕೊಂಡ ರಾಜೇಶ್ ಬಾಳಿಗ

Brinda Karat Visits Vinayak Baliga House

ಕಳೆದ ಆರು ವರ್ಷಗಳಿಂದ ನ್ಯಾಯ ದೊರಕದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣವನ್ನು ಎಸ್ಐಟಿಗೆ ನೀಡಬೇಕೆಂದು ಮಾಜಿ ರಾಜ್ಯಸಭಾ ಸದಸ್ಯೆ ಬೃಂದಾ ಕಾರಟ್ ಒತ್ತಾಯಿಸಿದ್ದಾರೆ. ಕೊಡಿಯಾಲಬೈಲ್‌ನಲ್ಲಿರುವ ವಿನಾಯಕ ಬಾಳಿಗರ ಮನೆಗೆ ಆಗಮಿಸಿರುವ ಅವರು ಬಾಳಿಗ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

 ಇಬ್ಬರ ಬಾಳಿಗೆ ಬೆಳಕಾದ ವಿನಾಯಕ ಬಾಳಿಗ ತಾಯಿ ಕಣ್ಣು! ಇಬ್ಬರ ಬಾಳಿಗೆ ಬೆಳಕಾದ ವಿನಾಯಕ ಬಾಳಿಗ ತಾಯಿ ಕಣ್ಣು!

"ಆರ್‌ಟಿಐ ಕಾರ್ಯಕರ್ತರಾಗಿರುವ ವಿನಾಯಕ ಬಾಳಿಗ ಹತ್ಯೆಯಾಗಿ 6 ವರ್ಷಗಳು ಕಳೆದರೂ ಅವರ ಕುಟುಂಬಸ್ಥರಿಗೆ ಇನ್ನೂ ನ್ಯಾಯ ದೊರಕಿಲ್ಲ. ಆದ್ದರಿಂದ ಈ ಪ್ರಕರಣವನ್ನು ಎಸ್ಐಟಿಗೆ ನೀಡಬೇಕು" ಎಂದು ಒತ್ತಾಯಿಸಿದರು.

Brinda Karat Visits Vinayak Baliga House

"ವಿನಾಯಕ ಬಾಳಿಗ ರಥಬೀದಿ ಶ್ರೀ ವೆಂಕಟರಮಣ ದೇವಾಲಯದ ಆಡಳಿತ ಸಮಿತಿಯಲ್ಲೊಬ್ಬರಾಗಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಪ್ರಯತ್ನ ಮಾಡಿದ್ದರು. ಆದ್ದರಿಂದ ಅವರ ಹತ್ಯೆಯಾಯಿತು. ಆಡಳಿತದಲ್ಲಿರುವ ಪಕ್ಷದವರು ಹತ್ಯೆ ಮಾಡಿದವರ ಪರವಾಗಿರುವ ಕಾರಣ ಇನ್ನೂ ಈ ಹತ್ಯೆಗೆ ನ್ಯಾಯ ದೊರಕಿಲ್ಲ" ಎಂದರು.

"ಈ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಲು ಪೊಲೀಸ್ ಇಲಾಖೆಯೂ ಸಂಪೂರ್ಣ ವಿಫಲವಾಗಿದೆ. ಇದರ ಹಿಂದೆ ಅಧಿಕಾರ ಕೆಲಸ ಮಾಡುತ್ತಿದೆ. ಹತ್ಯೆ ಮಾಡಿದವರಿಗೆ ರಕ್ಷಣೆ ಕೊಡುವ ಕಾರ್ಯ ಆಗುತ್ತಿದೆ. ಶ್ರೀ ವೆಂಕಟರಮಣ ದೇವಾಲಯದ ಆಡಳಿತ ಸಮಿತಿ ಈ ಕೊಲೆಯ ಹಿಂದಿದ್ದು, ಆದ್ದರಿಂದಲೇ ಈ ಪ್ರಕರಣವನ್ನು ಅವರು ಮುಂದುವರಿಯಲು ಬಿಡುತ್ತಿಲ್ಲ" ಎಂದು ಆರೋಪಿಸಿದರು.

English summary
Communist Party of India (Marxists) leader Brinda Karat visited Vinayak Baliga house at Mangaluru on Monday. Vinayak Baliga murdered in 2016, March 21st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X