ಅಕ್ಟೋಬರ್ 4ರಂದು ಮಂಗಳೂರಿಗೆ ಅಮಿತ್ ಶಾ

ಮಂಗಳೂರು, ಸೆಪ್ಟೆಂಬರ್ 30: ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಕೇರಳ ಬಿಜೆಪಿ ಅಕ್ಟೋಬರ್ 3, 4 ಮತ್ತು 5
ಜನರಕ್ಷಾಯಾತ್ರೆ ಹಮ್ಮಿಕೊಂಡಿದೆ. ಕೇರಳದ ಕಣ್ಣೂರಿನಿಂದ ತಿರುವನಂತಪುರಂ ವರೆಗೆ ನಡೆಯುವ ಈ ಜನರಕ್ಷಾಯಾತ್ರೆ ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸುವುದು ಖಚಿತವಾಗಿದೆ.

ಅಕ್ಟೋಬರ್ 3 ರಂದು ಆಯೋಜಿಸಿರುವ ಜನರಕ್ಷಾಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಿ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

BJP National President Amith Shah visit to mangaluru gets confirmed

ಅಮಿತ್ ಷಾ ಈ ಮೊದಲು ಅಕ್ಟೋಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಅಕ್ಟೋಬರ್ 2 ರಂದು ಮದ್ಯಾಹ್ನ ಮಂಗಳೂರು ಅಂತರಾಷ್ರ್ಟೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅಮಿತ್ ಶಾ ನಂತರ ನೆರವಾಗಿ ಕೇರಳಕ್ಕೆ ತೆರಳಲಿದ್ದಾರೆ.

ಮಂಗಳೂರಿನಲ್ಲಿ ಅಮಿತ್ ಷಾ ಅವರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾದ್ಯಕ್ಷ ಸಂಜೀವ ಮಟಂದೂರು, ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ , ಅಕ್ಟೋಬರ್ 3 ರಂದು ಕಣ್ಣೂರಿನಲ್ಲಿ ಜನರಕ್ಷಾ ಯಾತ್ರೆಯಲ್ಲಿ ಭಾಗವಹಿಸಿ ಸಂಜೆ ಮಂಗಳೂರಿಗೆ ಮರಳಿದ್ದಾರೆ.

ಅಕ್ಟೋಬರ್ 4 ರಂದು ಅಮಿತ್ ಶಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದೆ ಎಂದು ಅವರು ತಿಳಿಸಿದರು.

ಈ ಸಭೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಹಾಗು ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ನಂತರ ಸಂಜೆ ಮಂಗಳೂರಿನ ಟಿ ಎಂ ಎ ಪೈ ಸಭಾಂಗಣ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖರೊಂದಿಗೆ ಅಮಿತ್ ಶಾ ಸಂವಾದ ನಡೆಸಲಿದ್ದಾರೆ ಎಂದು ತಿಳಿಸಿದ ಅವರು ಅಕ್ಟೋಬರ್ 4 ರಂದು ಮಂಗಳೂರಿನಲ್ಲಿಯೇ ತಂಗಲಿರುವ ಅಮಿತ್ ಶಾ ಅಕ್ಟೋಬರ್ 5 ರಂದು ಮುಂಜಾನೆ ಮಂಗಳೂರಿನಿಂದ ತೆರಳಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+