9 ವರ್ಷಗಳಿಂದ ಶಾಲೆಗೆ ಚಕ್ಕರ್, ಸಂಬಳಕ್ಕೆ ಹಾಜರ್:ನೆಲಮನೆ ಸರ್ಕಾರಿ ಶಾಲೆ ಶಿಕ್ಷಕನ ಕಳ್ಳಾಟ

ಮಂಡ್ಯ, ಆಗಸ್ಟ್‌ 28: ಶಾಲೆಗೆ ಕರ್ತವ್ಯಕ್ಕೆ ಹಾಜರಾಗದೇ ಹಾಜರಿ ಪುಸ್ತಕದಲ್ಲಿ ಸಹಿ ಹಾಕಿ ಸಂಬಳ ಪಡೆಯುತ್ತಿದ್ದ ಶಿಕ್ಷಕನ ಕಳ್ಳಾಟವನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಕಂಡುಹಿಡಿದು ತನಿಖೆಗೆ ಒತ್ತಾಯಿಸಿ ತಪ್ಪಿತಸ್ಥ ಶಿಕ್ಷಕನಿಗೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕಾಡಪ್ಪ ಗೋಳ.ಎಂ.ಬಿ ಎಂಬ ಸಹ ಶಿಕ್ಷಕ ಕಳೆದ 9 ವರ್ಷಗಳಿಂದ ಶಾಲೆಗೆ ಬಾರದೆ 2023 ಜೂನ್‌ವರೆಗೂ ಸಂಬಳ ಪಡೆದಿರುವುದು ಹಾಜರಾತಿ ಪುಸ್ತಕದಲ್ಲಿ ದಾಖಲಾಗಿದೆ ಎಂದು ಶಾಲೆಯ ಎಸ್‌ಡಿಎಂಸಿ ಅದ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

Srirangapatna Taluk Government School Teacher Not Attended School From Last 9 Years

ಈ ಶಿಕ್ಷಕ 2014ರಲ್ಲಿ ಶಾಲೆಯ ಕರ್ತವ್ಯಕ್ಕೆ ಹಾಜರಾಗಿದ್ದು, 2 ವರ್ಷಗಳಷ್ಟೆ ಕರ್ತವ್ಯ ನಿರ್ವಹಿಸಿರುತ್ತಾನೆ. ತದ ನಂದರ ಆತ ಇಲ್ಲಿವರೆಗೂ ಶಾಲೆಗೆ ಕರ್ತವ್ಯಕ್ಕೆ ಹಾಜರಾಗದಿದ್ದರೂ, ಚಾಚು ತಪ್ಪದೆ ಕಾಲ ಕಾಲಕ್ಕೆ ಸಂಬಳ ಮಾತ್ರ ಪಡೆಯುತ್ತಾ ಬಂದಿರುವುದು ಶಿಕ್ಷಣ ಇಲಾಖೆಯಲ್ಲಿನ ಲೋಪವನ್ನು ಪ್ರಶ್ನೆ ಮಾಡುವಂತಾಗಿದೆ. ಇದರ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡವಿರುವುದಾಗಿ ಗ್ರಾಮಸ್ಥರ ಆರೋಪಿಸುತ್ತಿದ್ದು, ಶಿಕ್ಷಕನ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯೇ ಇಲ್ಲ. ಈತನ ಗೈರು ಹಾಜರಾತಿಯಿಂದ ಸರಿಯಾಗಿ ಮಕ್ಕಳಿಗೆ ಕಾಲ ಕಾಲಕ್ಕೆ ಪಾಠಗಳು ನಡೆದಿಲ್ಲ.

ಹೀಗಿರುವಾಗ ವಿದ್ಯಾರ್ಥಿಗಳಿಗೆ ಈತ ಯಾವ ವಿಷಯ ತೆಗೆದುಕೊಳ್ಳುತ್ತಿದ್ದ ಎಂಬುದೇ ಗೊತ್ತಿಲ್ಲ. ಕೆಲವು ವಿದ್ಯಾರ್ಥಿಗಳು ಈ ಶಿಕ್ಷಕಕನನ್ನು ಶಾಲೆಯಲ್ಲಿ ನೋಡಿಯೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಈತ ರಾಜಕೀಯವಾಗಿ ಬೇರೆ ಶಿಕ್ಷಕರುಗಳ ವರ್ಗಾವಣೆ ಸೇರಿದಂತೆ ಇತರ ಸೇವೆಯಲ್ಲಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ತಿಳಿದು ಬಂದಿದೆ.

ಗೈರಾದರೂ ಹಾಜರಾತಿ ಶಾಲೆಯ ಸೇವೆಗೆ ಗೈರು ಹಾಜರಾದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿರುವ ಜೊತೆಗೆ ವೇತನ ಮಂಜೂರು ಪಡೆಯುತ್ತಿರುವುದು ಮಾತ್ರ ಹೇಗೆ ಎಂದು ಎಸ್‌ಡಿಎಂಸಿ ಸದಸ್ಯರು ಪ್ರಶ್ನೆ ಮಾಡಿದ್ದಾರೆ. ಈಗಿರುವ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಈ ಶಿಕ್ಷಕನನ್ನು ಶಾಲೆಯಲ್ಲಿ ನೋಡಿಯೇ ಇಲ್ಲ ಎಂದು ಹೇಳುತ್ತಿದ್ದು, ಜೊತೆಗೆ ಸಹ ಶಿಕ್ಷಕರಿಂದ ಹಾಜರಾತಿ ಪುಸ್ತಕವನ್ನು ಮನೆಗೆ ತರಿಸಿಕೊಂಡು ಹಾಜರಾತಿಗೆ ಸಹಿ ಮಾಡುತ್ತಿದ್ದ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈ ಶಿಕ್ಷಕನ ಬಗ್ಗೆ ಮಾಹಿತಿಗಳನ್ನು ನೀಡದೆ ಶಿಕ್ಷಣ ಇಲಾಖೆ ಮೌನ ವಹಿಸಿರುವುದೇಕೆ ಎಂಬ ಅನುಮಾನಗಳು ಗ್ರಾಮಸ್ಥರಲ್ಲಿ ಕಾಡುತ್ತಿದೆ. ಈ ಶಿಕ್ಷಕನ ವಿಷಯವಾಗಿ ಶುಕ್ರವಾರ ಶಾಲೆಯ ಸಭಾಂಗಣದಲ್ಲಿ ಎಸ್‌ಡಿಎಂಸಿ ಅದ್ಯಕ್ಷೆ ಜ್ಯೋತಿ ಅವರ ನೇತೃತ್ವದಲ್ಲಿ ಸಹ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರುಗಳ ಸಭೆ ನಡೆಸಿದ್ದು, ಮತ್ತೆ ಎರಡು ತಿಂಗಳು ರಜೆ ಕೋರಿರುವ ಶಿಕ್ಷಕ ಕಾಡಪ್ಪ ಗೋಳ.ಎಂ.ಬಿ ಅವರ ಅರ್ಜಿಯನ್ನು ಶಾಲೆಗೆ ಕಳುಹಿಸಿದ್ದಾರೆ. ಇರುವ ಎಲ್ಲಾ ರಜೆಗಳಳನ್ನು ಪಡೆದು ಅನಧಿಕೃತ ರಜೆಯನ್ನು ತೆಗೆದುಕೊಂಡಿರುವ ಈತನಿಗೆ ಯಾವ ರಜೆಯನ್ನು ಕೊಡಲು ಸಾಧ್ಯವಿಲ್ಲ ಎಂಬ ಬಗ್ಗೆ ಸಭೆಯಲ್ಲಿ ಸದಸ್ಯರ ತೀರ್ಮಾನ ಕೈಗೊಂಡು, ಆತನ ವಿರುದ್ಧದ ಆರೋಪ ಕುರಿತು ಕೆಲವು ನಿರ್ಣಯಗಳನ್ನು ಕೈಗೊಂಡಿದ್ದಾರೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಾಳಿಗೆ ಮಾಹಿತಿಗಳನ್ನು ರವಾನೆ ಮಾಡುವುದಾಗಿ ತಿಳಿಸಿದ್ದಾರೆ.

ಕಳೆೆದ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿದ್ದ ಮಹಿಳಾ ಶಿಕ್ಷಕಿ ಆ ಶಿಕ್ಷಕ ಗೈರು ಹಾಜರಾಗುತ್ತಿದ್ದರೂ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸುತ್ತಿದ್ದುದ್ದಾಗಿ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ್ದರಿಂದ ಆ ಮುಖ್ಯ ಶಿಕ್ಷಕಿಯನ್ನು ಅಮಾನತ್ತು ಮಾಡಿ, ನಂತರ ಬೇರೆಡೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.

ಆ ಶಿಕ್ಷಕನ ಬಗ್ಗೆ ಶಾಲೆಯಲ್ಲಿನ ಹಾಜರಾತಿ ಕುರಿತಾಗಿ ತನಿಖೆ ಮಾಡಬೇಕು. ಇಷ್ಟು ವರ್ಷ ಹಾಜರಾತಿ ಇಲ್ಲದೆ 8-10 ವರ್ಷಗಳಿಂದ ನಿರಂತರವಾಗಿ ವೇತನ ಪಡೆಯುತ್ತಿರುವ ಆ ಶಿಕ್ಷಕನ ವೇತನವನ್ನು ಶಿಕ್ಷಣ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಬೇಕು. ಜೊತೆಗೆ ಇಂತಹ ಶಿಕ್ಷಕನನ್ನು ಕೂಡಲೇ ಸೇವೆಯಿಂದ ವಜಾ ಮಾಡುವುದರ ಜೊತೆಗೆ ಈ ಶಿಕ್ಷಕನಿಗೆ ಸಾಥ್ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು ಎಸ್‌ಡಿಎಂಸಿ ಹಾಲಿ ಸದಸ್ಯರು ಹಾಗು ಮಾಜಿ ಅಧ್ಯಕ್ಷರಾದ ರಮೇಶ್, ಸುಧಾಕರ್ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+