‘ಸಕ್ಕರೆ ನಾಡು’ ಮಂಡ್ಯ ಕ್ಷೇತ್ರದಲ್ಲಿ ಎಚ್.ಡಿ. ಕುಮಾರಸ್ವಾಮಿಗೆ ಗೆಲುವು!
ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಅದರಲ್ಲೂ ಸಕ್ಕರೆ ನಾಡು ಮಂಡ್ಯ ಕ್ಷೇತ್ರದಲ್ಲಿ ಗೆಲುವು ಗಿಟ್ಟಿಸಲು ದೊಡ್ಡ ಫೈಟ್ ಶುರುವಾಗಿದೆ. ಚುನಾವಣೆಯ ಅಸಲಿ ರಿಸಲ್ಟ್ ಏನು? ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ? ಮಂಡ್ಯ ಲೋಕಸಭೆ ಅಖಾಡ ಇತಿಹಾಸ ಏನು ಹೇಳುತ್ತೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
1951ರಲ್ಲಿ ಮೊದಲ ಬಾರಿ ಮಂಡ್ಯ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ನಡೆದಿತ್ತು ಆಗ ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಗೆದ್ದಿದ್ದರು. ಹೀಗೆ 1980ರ ತನಕ ಸತತವಾಗಿ ಕಾಂಗ್ರೆಸ್ ಪಕ್ಷ ಗೆದ್ದು ಬೀಗಿತ್ತು ಆದ್ರೆ 1984ರಲ್ಲಿ ಜನತಾ ಪಕ್ಷದ ಅಭ್ಯರ್ಥಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷಕ್ಕೆ ಸೋಲು ತೋರಿಸಿದ್ದರು. ಆ ನಂತರ 1996ರ ತನಕ ಮತ್ತೆ ಕಾಂಗ್ರೆಸ್ ಗೆದ್ದಿತ್ತು. 1998 ರಲ್ಲಿ ಮಂಡ್ಯ ಕ್ಷೇತ್ರದಲ್ಲಿ ಜನತಾ ದಳ ಗೆದ್ದು ಬೀಗಿತ್ತು. 1999 & 2004ರಲ್ಲಿ ಮಂಡ್ಯದಿಂದ ರೆಬೆಲ್ ಸ್ಟಾರ್ ಅಂಬರೀಶ್ ಅವರು ಗೆದ್ದರು. 2009 ರಲ್ಲಿ ಮತ್ತೆ ಜನತಾ ದಳ ಗೆದ್ದು ಬೀಗಿತ್ತು.

2013 ರಲ್ಲಿ ರಮ್ಯಾ ಕಾಂಗ್ರೆಸ್ ಪಕ್ಷದಿಂದ, 2014 ರಲ್ಲಿ ಸಿ.ಎಸ್. ಪುಟ್ಟರಾಜು ಜನತಾ ದಳದಿಂದ ಅಭ್ಯರ್ಥಿಯಾಗಿ ಗೆದ್ದರು. 2018 ರಲ್ಲಿ ಉಪಚುನಾವಣೆ ನಡೆದಾಗಲು ಜೆಡಿಎಸ್ ಗೆದ್ದಿತ್ತು. ಆದರೆ 2019ರಲ್ಲಿ ಸುಮಲತಾ ಅಂಬರೀಶ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದರು. ಹೀಗೆ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಎಚ್.ಡಿ. ಕುಮಾರಸ್ವಾಮಿ ಅವರು ಗೆಲ್ಲುತ್ತಾರಾ? ಅಥವಾ ಸ್ಟಾರ್ ಚಂದ್ರು ಅವರ ಸ್ಟಾರ್ ಕೈಹಿಡಿಯುತ್ತಾ? ಯಾವ ಪಕ್ಷಕ್ಕೆ ಮುನ್ನಡೆ ಸಿಕ್ಕಿದೆ? ಹಾಗೇ, ಗೆಲ್ಲುವ ಕುದುರೆ ಯಾವ ಅಭ್ಯರ್ಥಿ? ಈ ಕುರಿತು ಪ್ರತಿಕ್ಷಣದ ಮಾಹಿತಿಗೆ ಮುಂದೆ ಓದಿ.
ಜೆಡಿಎಸ್‌ಗೆ 2 ಸ್ಥಾನದಲ್ಲಿ ಗೆಲುವು!
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಿಕ್ಕಿದೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಸುಮಾರು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದಾರೆ. ಆದರೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಈ ಮೂಲಕ ಜೆಡಿಎಸ್ ಒಟ್ಟಾರೆ 2 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದಂತೆ ಆಗಿದೆ. ಹಾಗೇ ಕರ್ನಾಟಕದಲ್ಲಿ ಬಿಜೆಪಿಗೆ ಕೂಡ ಜೆಡಿಎಸ್ ಗೆದ್ದಿರುವುದು ಬಲ ನೀಡಿದೆ. ಆದರೆ ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟ ಫಲಿತಾಂಶ ಸಿಗಲು ಇನ್ನೂ ಸ್ವಲ್ಪ ಹೊತ್ತು ಕಾದು ನೋಡಬೇಕಿದೆ. ಇಂಡಿಯಾ & ಎನ್‌ಡಿಎ ನಡುವೆ ಜಿದ್ದಾಜಿದ್ದಿ ಮುಂದುವರಿದಿದೆ.












Click it and Unblock the Notifications