ನ.7 ರಿಂದ ಸಪ್ತಮಾತೃಕೆಯರ ಆದಿದೇವತೆ ಕುಂದೂರಮ್ಮನ ಜಾತ್ರಾಮಹೋತ್ಸವ
ಮಂಡ್ಯ, ನವೆಂಬರ್ 02: ಮಳವಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ದ ಕುಂದನ ಪರ್ವತದ ತಳಹದಿಯಲ್ಲಿರುವ ಸಪ್ತ ಮಾತೃಕೆಯ ಆದಿ ದೇವೆತೆ ಕುಂದೂರಮ್ಮ ದೇವಿಯ ಎರಡು ದಿನಗಳ ಜಾತ್ರಾ ಮಹೋತ್ಸವ ನ.7 ರಂದು ಮಂಗಳವಾರದಂದು ಶಕ್ತಿದೇವೆತೆಗಳೀಗೆ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಆರಂಭವಾಗಲಿದೆ.
ಪಟ್ಟಣದಿಂದ ಸುಮಾರು 8 ಕಿಲೋ ಮೀಟರ್ ಅಂತರದಲ್ಲಿರುವ ಕುಂದನ ಪರ್ವತದ ತಳಹದಿಯಲ್ಲಿ ನೆಲೆಸಿರುವ ಸರ್ವ ಭಕ್ತರ ಆರಾಧ್ಯದೇವತೆಯಾಗಿರುವ ಆದಿದೇವತೆ ಕುಂದೂರಮ್ಮನ ದೇವಿಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಕೆಯೊಂದಿಗೆ ಜಾತ್ರಾ ಮಹೋತ್ಸವ ನವೆಂಬರ್ 7 ರಿಂದ ಡಿಸೆಂಬರ್ 1ರವರೆಗೆ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ಹಲವೆಡೆಯಿಂದ ಭಕ್ತರು ಅಗಮಿಸಿ ದರ್ಶನ ಪಡೆದು ಜಾತ್ರೆ ನಡೆಯುವ ದಿನಗಳೂ ಅಲ್ಲೆ ವಾಸ್ತವ್ಯವನ್ನು ಹೂಡಿ ಸೇವೆ ಸಲ್ಲಿಸುತ್ತಿರುವುದು ದೇವಿಯ ಮಹಿಮೆಗೆ ನಿದರ್ಶನವಾಗಿದೆ.
ಭಕ್ತರಿಂದ ಮಡೆ ನೈವೇದ್ಯ ಸಲ್ಲಿಕೆ
ಕುಂದೂರಮ್ಮ ದೇವೆತೆಗೆ ಸುತ್ತಮುತ್ತಲಿನ ಗ್ರಾಮಗಳಾದ ತೆಂಕಹಳ್ಳಿ, ಬಾಚನಹಳ್ಳಿ, ಪಂಡಿತಹಳ್ಳಿ, ದಾಸನದೊಡ್ಡಿ, ಹೊಸಹಳ್ಳಿ, ಬೆಳಕವಾಡಿ, ಬಿ.ಜಿ.ಪುರ.ನಾರಯಣಪುರ, ಸೇರಿದಮತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ಬಳಿಯೇ ಬೆಲ್ಲದ ಆನ್ನ ಮತ್ತು ಅನ್ನ ಮಾಡಿಕೊಂಡು ಅದನ್ನು ದೇವತೆಗೆ (ಮಡೆಯನ್ನು) ನೈವೇದ್ಯ ಸಲ್ಲಿಸಿ ಪ್ರಸಾದ ಸ್ವೀಕರಿಸುವ ಮೂಲಕ ಎರಡು ದಿನಗಳು ಹಬ್ಬವನ್ನು ಆಚರಿಸುತ್ತಾರೆ.
ಬಾಯಿ ಬೀಗ ಹರಕೆ
ಹರಕೆ ಹೊತ್ತ ಭಕ್ತರು ಬಾಯಿ ಬೀಗ ಹಾಕಿಕೊಂಡು ಹರಕೆ ಸಲ್ಲಿಸಿದರೆ ಇತ್ತ ಹರಕೆ ಹೊತ್ತ ಭಕ್ತರು ದೇವತೆಗೆ ಕಾಣಿಕೆ ಹಾಕುವುದರೊಂದಿಗೆ, ವಿಶೇಷ ಆರ್ಚನೆ ಮಾಡಿಸುದರೊಂದಿಗೆ, ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ,ಇಡುಗಾಯಿ ಹೊಡೆಯುವುದರೊಂದಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಶಕ್ತಿ ದೇವೆತೆಯ ದರ್ಶನ ಪಡೆಯುವುದು ಸಂಪ್ರದಾಯ ಆಚರಣೆಯಾಗಿದೆ.

ಮೂಲ ದೇವೆತೆಗಳ ದರ್ಶನ
ಕುಂದೂರಮ್ಮ ದೇವತೆಯ ಮೂಲ ವಿಗ್ರಹಗಳು ದೇವಸ್ಥಾನದ ಹಿಂಬದಿಯಲ್ಲಿ ಗುಡಿಯಲ್ಲಿದ್ದು, ಈ ಗರ್ಭಗುಡಿ ವರ್ಷದಲ್ಲಿ ನಾಲ್ಕು ದಿನ ಬಾಗಿಲು ತೆರಯಲಿದೆ. ಮೂಲ ದೇವೆತಗಳ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮೂಲದೇವತೆಗಳ ಗರ್ಭ ಗುಡಿಯನ್ನು ನೋಡಲು ಅಗಮಿಸಿದ ಭಕ್ತರು ಸಪ್ತ ಮಾತೃಕೆಯರ ದರ್ಶನ ಪಡೆಯುವುದು ಇಲ್ಲಿಯ ವಿಶೇಷವಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಅರ್ಚಕ ಯೋಗೀಶ್, ಶ್ರೀಧರ್ ಮತ್ತು ತಂಡದವರು ಆದಿದೇವೆತೆಗೆ ಅಭಿಷೇಕ ಅಲಂಕರಿಸುವ ಹೂವಿನ ಅಲಂಕಾರ ನೋಡಲೆಂದೆ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ದೇವಿಯಸನ್ನಿಧಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ.
ಸಂಜೆ ಪಲ್ಲಕ್ಕಿ ಉತ್ಸವ
ನ.7 ರಂದು ಮಂಗಳವಾರ ಅರಂಭವಾಗುವ ಕುಂದೂರಮ್ಮ ಜಾತ್ರ ಮಹೋತ್ಸವದಲ್ಲಿ ಸಂಜೆ ಕುಂದೂರಮ್ಮನ ದೇವತೆಯ ಚಿನ್ನದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಗ್ರಾಮದಲ್ಲಿ ನಡೆಯುವುದು, ಅದಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರು ಅಲ್ಲೆ ವಾಸ್ತವ್ಯ ಹೂಡಿಕೊಂಡು ದೇವತೆಯ ಪಲ್ಲಕ್ಕಿ ಉತ್ಸವ ನೋಡಲು ಕಾದು ಕುಳಿತಿರುವುದು ವಿಶೇಷವಾಗಿದೆ.
ರಾಜ್ಯದ ಮೂಲೆ ಮೂಲೆಯಿಂದ ಭಕ್ತರಿಗಾಗಿ ಐತಿಹಾಸಿಕ ದರ್ಮಕ್ಷೇತ್ರವಾದ ರಷಸಿದ್ದೇಶ್ವರ ಕ್ಷೇತ್ರದಲ್ಲಿ ಶ್ರೀ ನಂಜುಂಡಸ್ವಾಮಿಗಳ ದಿವ್ಯಸಾನಿದ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ ಆಗಮಿಸುವ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥಯನ್ನು ಕಲ್ಪಿಸಲಾಗಿದೆ.












Click it and Unblock the Notifications