Malavalli Constituency: ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ವಿಜಯಿ ಯಾರು?
ಮಳವಳ್ಳಿಯಲ್ಲಿ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಎರಡು ಪಕ್ಷಗಳ ಅಭ್ಯರ್ಥಿಗೆ ಹೆಚ್ಷಿನ ಒಲವಿದೆ. ಆದರೆ ಬಿಜೆಪಿ ಪಡೆಯುವ ಮತಗಳಿಂದ ಈ ಎರಡು ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ.
ಮಂಡ್ಯ, ಮಾರ್ಚ್ 14: ಮಂಡ್ಯ ಜಿಲ್ಲೆಯಲ್ಲಿ ಮೀಸಲು ವಿಧಾನಸಭಾ ಕ್ಷೇತ್ರವಾದ ಮಳವಳ್ಳಿ ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪ್ರಖರ ಪೈಪೋಟಿಗೆ ಸಾಕ್ಷಿಯಾಗುವ ಕ್ಷೇತ್ರವಾಗಿದೆ. ಸದ್ಯ ಇಲ್ಲಿ ಅನ್ನದಾನಿಯವರು ಶಾಸಕರಾಗಿದ್ದಾರೆ. ಈ ಬಾರಿ ಬಿಜೆಪಿಯು ಕ್ಷೇತ್ರದಲ್ಲಿ ಹೊಸ ಅಲೆ ಹುಟ್ಟುಹಾಕಲು ಮುಂದಾಗಿದೆ.
ಮಳವಳ್ಳಿ ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕಾಗಿದ್ದು, ಜಿಲ್ಲೆಯ ಆಗ್ನೇಯ್ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ, ಪೂರ್ವದಲ್ಲಿ ಕನಕಪುರ, ಆಗ್ನೇಯದಲ್ಲಿ ಕೊಳ್ಳೇಗಾಲ, ವಾಯುವ್ಯದಲ್ಲಿ ಮಂಡ್ಯ, ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ ಈ ತಾಲ್ಲೂಕುಗಳು ಸುತ್ತುವರಿದಿವೆ. ಮಳವಳ್ಳಿ ವ್ಯಾಪ್ತಿಯಲ್ಲಿ ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು ಇವೆ.
ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. ಬಳಿಕ ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು 762 ಮೀಟರ್‌ನಿಂದ 914 ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು 3೦ ಕಿಮೀ ದೂರದಲ್ಲಿದೆ. ಮೈಸೂರಿನಿಂದ 42 ಕಿಮೀ ಮತ್ತು ಬೆಂಗಳೂರಿನಿಂದ 100 ಕಿಮೀ ದೂರದಲ್ಲಿದೆ. ಮದ್ದೂರಿನಿಂದ 25 ಕಿಲೋ ಮೀಟರ್ ದೂರದಲ್ಲಿದೆ.
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್‌ನಿಂದ ಮಾಜಿ ಸಚಿವರಾಗಿದ್ದ ಪಿ.ಎಂ. ನರೇಂದ್ರಸ್ವಾಮಿ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲೂ ಈ ಅಂಶ ಮೇಲ್ನೋಟಕ್ಕೆ ಎದ್ದು ಕಾಣುತ್ತಿತ್ತು. ಇಲ್ಲಿ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವ ಕೆ. ಅನ್ನದಾನಿಯವರು ಮತ್ತೆ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಬಿ. ಮುನಿರಾಜು ಅವರು ಟಿಕೆಟ್ ಆಕಾಂಕ್ಷಿಯಾಗಿ ಕ್ಷೇತ್ರದಲ್ಲಿ ಸಂಚಾರ ಆರಂಭಿಸಿದ್ದಾರೆ. ಇವರಲ್ಲದೆ ಬಿಎಸ್‌ಪಿಯಿಂದ ಕಳೆದ ಬಾರಿಯೂ ಸ್ಪರ್ಧೆ ಮಾಡಿದ್ದ ಎಂ. ಕೃಷ್ಣಮೂರ್ತಿ, ಎಎಪಿಯುಂದ ಬೆಂಡರವಾಡಿಯ ಪ್ರೊ. ಮಹದೇವಸ್ವಾಮಿ ಅವರು ಸ್ಪರ್ಧೆ ಮಾಡಲು ಮುಂದಾಗಿದ್ದಾರೆ.

ಕಾಂಗ್ರೆಸ್‌ನಿಂದ ಬಹುದೊಡ್ಡ ಲಾಭಿ
ಇಲ್ಲಿ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಎರಡು ಪಕ್ಷಗಳ ಅಭ್ಯರ್ಥಿಗೆ ಹೆಚ್ಷಿನ ಒಲವಿದೆ. ಆದರೆ ಬಿಜೆಪಿ ಪಡೆಯುವ ಮತಗಳಿಂದ ಈ ಎರಡು ಪಕ್ಷಗಳ ಅಭ್ಯರ್ಥಿಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ. ಕ್ಷೇತ್ರದ ಟಿಕೆಟ್‌ಗಾಗಿ ಕಾಂಗ್ರೆಸ್‌ನಿಂದ ಬಹುದೊಡ್ಡ ಲಾಭಿಯನ್ನು ಆಕಾಂಕ್ಷಿಗಳು ನಡೆಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಪರಿಚಿತರಾಗಿರುವ ಪಿಎಂ ನರೇಂದ್ರಸ್ವಾಮಿ ಅವರಿಗೆ ಟಿಕೆಟ್ ಪಕ್ಕ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಆದರೂ ಕ್ಷೇತ್ರದಿಂದ ಟಿಕೆಟ್ ಬಯಸಿ ಡಾ. ಮೂರ್ತಿ, ಮಾಜಿ ಶಾಸಕಿಯಾಗಿರುವ ಮಲ್ಲಾಜಮ್ಮ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮಹಿಳಾ ಕೋಟದಡಿ ಮಲ್ಲಜಮ್ಮ ಟಿಕೆಟ್ ಆಕಾಂಕ್ಷಿ
ಇಲ್ಲಿ ಮಹಿಳಾ ಕೋಟದಡಿ ಟಿಕೆಟ್ ಆಕಾಂಕ್ಷಿಯಾಗಿ ಮಲ್ಲಜಮ್ಮ ಇದ್ದರೆ, ನಾನೂ ಕೂಡ ಟಿಕೆಟ್ ಆಕಾಂಕ್ಷಿ ಎಂದು ಡಾ. ಮೂರ್ತಿ ಹೇಳಿಕೊಂಡಿದ್ದಾರೆ. ಆದರೆ ಇಲ್ಲಿ ಕ್ಷೇತ್ರದಲ್ಲಿ ವೇಗವಾಗಿ ಸಂಚರಿಸುತ್ತಿರುವ ನರೇಂದ್ರಸ್ವಾಮಿ ನೇರವಾಗಿ ಜನರೊಡನೆ ಸಂಪರ್ಕದಲ್ಲಿದ್ದು ಟಿಕೆಟ್‌ಗೆ ತಮ್ಮಗೆ ಸಿಗುವಂತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಸ್ಥಳೀಯ ನಾಯಕರ ಸಭೆ ನಡೆಸಿರುವ ನರೇಂದ್ರ ಸ್ವಾಮಿ ಅವರು ಮುಂದಡಿ ಇಟ್ಟಿದ್ದರೂ, ಇತರ ಮುಖಂಡರು ಅವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ನಲ್ಲಿ ಅಸಮಾಧಾನದ ಹೊಗೆ
ಜೆಡಿಎಸ್‌ನಲ್ಲಿ ಕೆ, ಅನ್ನದಾನಿಯವರಿಗೆ ಟಿಕೆಟ್ ಪಕ್ಕ ಎನ್ನಲಾಗಿದೆ. ಆದರೆ ಅಸಮಾಧಾನದ ಹೊಗೆ ಇದ್ದೇ ಇದೆ. ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ವಿಶ್ವನಾಥ್ ಅವರನ್ನು ಕೆಎಂಎಫ್‌ಗೆ ಅಧ್ಯಕ್ಷರನ್ನಾಗಿ ಕಂಸಾಗರ ರವಿ ಅವರನ್ನು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿ ನೇಮಕವನ್ನು ಎಚ್‌ಡಿ ಕುಮಾರಸ್ವಾಮಿ ನೇಮಿಸಿದ್ದಾರೆ. ಆದರೂ ಅಸಮಾಧಾನದ ಹೊಗೆ ಆಡುತ್ತಲೇ ಇದೆ. ಇದು ಚುನಾವಣೆಯಲ್ಲಿ ಕಂಡುಬಂದರೂ ಅಚ್ಚರಿ ಇಲ್ಲ.

ಬಿ.ಸೋಮಶೇಖರ್ ಟಿಕೆಟ್ ಸಿಗುವುದು ಅನುಮಾನ
ಇನ್ನೂ ಬಿಜೆಪಿಯಲ್ಲಿ ಬಿ. ಮುನಿರಾಜು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇಲ್ಲಿ ಕಳೆದ ಎರಡು ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಸೋಮಶೇಖರ್ ಅವರಿಗೆ ಮತ್ತೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಇವರೊಂದಿಗೆ ಟಿಕೆಟ್ ಆಕಾಂಕ್ಷಿಗಳಾಗಿ ಯಮದೂರು ಸಿದ್ದರಾಜು, ದ್ವಾರನಹಳ್ಳಿ ಕುಮಾರಸ್ವಾಮಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಇದಲ್ಲದೆ ಮೊದಲಿನಿಂದಲೂ ಇಲ್ಲಿ ಆಕ್ಟೀವ್ ಆಗಿರುವ ಬಿಎಸ್‌ಪಿಯಿಂದ ಎಂ. ಕೃಷ್ಣಮೂರ್ತಿ ಹಾಗೂ ಎಎಪಿಯಿಂದ ಮಹದೇವಸ್ವಾಮಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲಿದ್ದಾರೆ ಎನ್ನಲಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications