ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸುಮಲತಾ ಅಂಬರೀಶ್‌ ಸ್ಪರ್ಧೆ?

Recommended Video

      ಮುಂಬರುವ ಲೋಕಸಭೆ ಚುನಾವಣೆಗೆ ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧಿಸಲಿದ್ದಾರಾ? | Oneindia Kannada

      ಮಂಡ್ಯ, ಡಿಸೆಂಬರ್ 12: ಅಂಬರೀಶ್‌ ಅಗಲಿಕೆಯಿಂದ ಅನಾಥವಾಗಿರುವ ಮಂಡ್ಯ ಕಾಂಗ್ರೆಸ್ ಚಕ್ಕಾಣಿಯನ್ನು ಅವರ ಮನೆಯವರಿಗೇ ನೀಡಲು ಕರ್ನಾಟಕ ಕಾಂಗ್ರೆಸ್ ಮುಖಂಡರು ಯೋಜಿಸಿದ್ದಾರೆ.

      ಮುಂಬರುವ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಅಂಬರೀಶ್ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಮುಖಂಡರು ಯೋಚಿಸಿದ್ದಾರೆ ಹಾಗೂ ಸುಮಲತಾ ಅವರನ್ನು ಒಪ್ಪಿಸುವ ಕಾರ್ಯವೂ ನಡೆಯುತ್ತಿದೆ ಎನ್ನಲಾಗಿದೆ.

      ಮಂಡ್ಯದ ಜನ ಅಂಬರೀಶ್‌ ಮೇಲೆ ಇಟ್ಟಿದ್ದ ಪ್ರೀತಿ ಎಂತಹುದು ಎಂಬುದುಜ ಅಂಬರೀಶ್‌ ನಿಧನರಾದಾಗ ಜಗಜ್ಜಾಹೀರಾಯಿತು. ಅಂಬರೀಶ್‌ ಕಾಲವಾದ ನಂತರ ಅವರ ಅಭಿಮಾನಿಗಳು ಹಲವರು ಅಂಬಿ ಪುತ್ರ ಅಭಿಷೇಕ್ ರಾಜಕೀಯ ಪ್ರವೇಶ ಮಾಡಬೇಕು, ಅದೂ ಮಂಡ್ಯದಿಂದಲೇ ಅವರು ರಾಜಕೀಯ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದರು.

      ಸುಮಲತಾ ಜೊತೆ ಮಾತನಾಡಲಿದೆ ಕಾಂಗ್ರೆಸ್‌

      ಸುಮಲತಾ ಜೊತೆ ಮಾತನಾಡಲಿದೆ ಕಾಂಗ್ರೆಸ್‌

      ಆದರೆ ಅಭಿಷೇಕ್‌ ಇನ್ನೂ ಕಿರಿಯವರಾಗಿರುವ ಕಾರಣ ಸುಮಲತಾ ಅವರಿಗೆ ಅವಕಾಶ ಕೊಡುವ ಬಗ್ಗೆ ಕಾಂಗ್ರೆಸ್‌ ಹಿರಿಯ ಸದಸ್ಯರು ಮಾತುಕತೆ ಆಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಸುಮಲತಾ ಅವರ ಬಳಿ ಕಾಂಗ್ರೆಸ್ ಮುಖಂಡರು ಮಾತನಾಡಲಿದ್ದಾರೆ.

      ಡಿ.27 ರಂದು ಅಂಬರೀಶ್‌ ತಿಂಗಳ ತಿಥಿ

      ಡಿ.27 ರಂದು ಅಂಬರೀಶ್‌ ತಿಂಗಳ ತಿಥಿ

      ಇದೇ ತಿಂಗಳು 27 ರಂದು ಅಂಬರೀಶ್‌ ಅವರ ತಿಂಗಳ ತಿಥಿ ಕಾರ್ಯ ಇದೆ. ಅದು ಮಂಡ್ಯದಲ್ಲಿಯೇ ನಡೆಸಲು ಯೋಜನೆ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಸಹ ಅಂದು ಅಂಬರೀಶ್‌ ಅವರ ಅಭಿಮಾನಿಗಳು ಹಲವು ಕಡೆ ತಿಥಿ ಕಾರ್ಯ ಮಾಡಲಿದ್ದಾರೆ.

      ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಅಂಬಿ

      ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಅಂಬಿ

      ಅಂಬರೀಶ್‌ ಅವರು ಕೊನೆ-ಕೊನೆಗೆ ಕಾಂಗ್ರೆಸ್‌ನಿಂದ ಅಂತರ ಕಾಪಾಡಿಕೊಂಡಿದ್ದರು. ಮನೆಗೆ ಹೋಗಿ ಟಿಕೆಟ್ ಕೊಟ್ಟರೂ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹಾಗಿದ್ದ ಮೇಲೆ ಸುಮಲತಾ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರಾ. ಚುನಾವಣೆಗೆ ನಿಲ್ಲುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

      ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ

      ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ

      ಮತ್ತೊಂದು ಕೋನದ ಸುದ್ದಿಯ ಪ್ರಕಾರ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರನ್ನು ಲೋಕಸಭೆಗೆ ಮಂಡ್ಯದಿಂದ ಕಣಕ್ಕಿಳಿಸಲಾಗುತ್ತದೆ. ಇದೇ ಕಾರಣಕ್ಕೆ ಸಿಎಂ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಅಂಬರೀಶ್‌ ಅಂತಿಮ ದರ್ಶನದ ವೇಳೆ ತಾವೇ ಹತ್ತಿರವಿದ್ದು ಎಲ್ಲವನ್ನೂ ನಿಭಾಯಿಸಿ ಮಂಡ್ಯದ ಜನರಿಗೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಮೊದಲ ದಿನ ಬೆಂಗಳೂರಿನಲ್ಲಿ ಇಲ್ಲದೇ ಇದ್ದ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಬಂದದ್ದು ಸಹ ಅದೇ ಕಾರಣಕ್ಕೆ ಎನ್ನುವ ಸುದ್ದಿಯೂ ಹರಿದಾಡುತ್ತಿದೆ.

      ಚುನಾವಣೆಗೆ ನಿಂತರೆ ಗೆಲುವು ಖಚಿತ

      ಚುನಾವಣೆಗೆ ನಿಂತರೆ ಗೆಲುವು ಖಚಿತ

      ಅಂಬರೀಶ್‌ ಕಂಡರೆ ಮಂಡ್ಯದ ಜನರಿಗೆ ಬಹು ಅಕ್ಕರೆ ಅಂಬರೀಶ್‌ ಕುಟುಂಬದಲ್ಲಿ ಯಾರೇ ಚುನಾವಣೆಗೆ ನಿಂತರೆ ಗೆಲುವು ಸುಲಭ ಎನ್ನಲಾಗುತ್ತಿದೆ. ಕುಟುಂಬದವರಲ್ಲದೆ ಬೇರೆಯವರು ನಿಂತು ಕುಟುಂಬದ ಬೆಂಬಲ ಪಡೆದರೂ ಸಹ ಗೆಲುವು ಧಕ್ಕಿಸಿಕೊಳ್ಳಬಹುದು ಅಷ್ಟು ಜನಪ್ರಿಯತೆ ಅಂಬರೀಶ್‌ಗೆ ಮಂಡ್ಯದಲ್ಲಿ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+