Get Updates
Get notified of breaking news, exclusive insights, and must-see stories!

ವಾಹನ ಸವಾರರ ಉಸಿರುಗಟ್ಟಿಸುವ ವಿರಾಜಪೇಟೆ-ಮೈಸೂರು ಹೆದ್ದಾರಿ: ಯಾಕೆ ಗೊತ್ತಾ?

ಮಡಿಕೇರಿ, ಜನವರಿ 17: ಕೊಡಗಿನಲ್ಲಿ ಮನುಷ್ಯ ಮತ್ತು ವನ್ಯಪ್ರಾಣಿಗಳ ಸಂಘರ್ಷ ತಾರಕಕ್ಕೇರುತ್ತಿದೆ. ಹುಲಿ, ಚಿರತೆ, ಕಾಡಾನೆಗಳ ಹಾವಳಿ ಮಿತಿಮೀರುತ್ತಿದ್ದು, ಜನ ಭಯಪಡುವಂತಾಗಿದೆ. ಅದರಲ್ಲೂ ಇತ್ತೀಚೆಗೆ ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿರುವ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಈ ಹೆದ್ದಾರಿಯಲ್ಲಿ ವಾಹನದಲ್ಲಿ ತೆರಳುವವರಿಗೆ ಭಯ ಕಾಡುತ್ತಿದೆ. ಏಕೆಂದರೆ ಅರಣ್ಯದೊಳಗೆ ಅಲ್ಲಲ್ಲಿ ಉಬ್ಬುಗಳನ್ನು ಹಾಕಲಾಗಿದ್ದು, ವಾಹನಗಳು ನಿಧಾನವಾಗಿ ಚಲಿಸುವ ವೇಳೆ ಕಾಡಾನೆಗಳು ದಾಳಿ ಮಾಡುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಮೊದಲಿಗೆ ಹೋಲಿಸಿದರೆ ಈ ಮಾರ್ಗದಲ್ಲಿ ವೀರಾಜಪೇಟೆಯಿಂದ ತಿತಿಮತಿ ಮೂಲಕ ಮೈಸೂರು ಕಡೆಗೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತವೆ. ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ. ಕೆಲವು ಕಾಡಾನೆಗಳು ವಾಹನಗಳಿಗೆ ಯಾವುದೇ ತೊಂದರೆ ನೀಡದೆ ಮುನ್ನಡೆದರೆ ಮತ್ತೆ ಕೆಲವು ಕಾಡಾನೆಗಳು ದಾಳಿ ಮಾಡುತ್ತಿವೆ. ಇದಕ್ಕೆ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಕಾರು ಸಂಪೂರ್ಣ ಜಖಂ ಆಗಿರುವ ಘಟನೆ ಸಾಕ್ಷಿಯಾಗಿದೆ.

Wildlife Conflicts On Virajpet-Mysore Highway Safety Concerns

ಬಿಳುಗುಂದ ಗ್ರಾಮದ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಅಶ್ವಕ್ ಕುಟುಂಬ ಮೈಸೂರಿಗೆ ತೆರಳುತ್ತಿದ್ದ ಸಂದರ್ಭ ಮಜ್ಜಿಗೆ ಹಳ್ಳ ಸಮೀಪ ಚಾಲಕ ಅರ್ಫತ್ ರಸ್ತೆಗೆ ಹಾಕಿರುವ ಉಬ್ಬು ಬಳಿ ವಾಹನದ ವೇಗವನ್ನು ಸಂಪೂರ್ಣವಾಗಿ ತಗ್ಗಿಸಿದಾಗ ಕಾಡಾನೆ ದಿಢೀರನೆ ದಾಳಿ ನಡೆಸಿದೆ. ವಾಹನಕ್ಕೆ ಕಾಲಿಂದ ಗುದ್ದಿ, ಸೊಂಡಿಲಿನಿಂದ ಜಜ್ಜಿ ಜಖಂಗಳಿಸಿದೆ. ಘಟನೆಯಿಂದ ಅಶ್ವಕ್ ಕುಟುಂಬದ ಆರು ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಾಹನಗಳ ಮೇಲೆ ಕಾಡಾನೆಗಳ ದಾಳಿಗೆ ಕಾರಣವೇನು?

ಈ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ. ಹಾಗೆಯೇ ಮಾಧ್ಯಮಗಳ ಮುಂದೆ ಕೆಲವೊಂದು ಮಾಹಿತಿಯನ್ನು ಹೇಳಿದ್ದಾರೆ. ಅದರಂತೆ ಗೋಣಿಕೊಪ್ಪ ಹುಣಸೂರು ರಸ್ತೆಯಲ್ಲಿ ಕೊಡಗು, ಕೇರಳದವರು ಸಾವಿರಾರು ಸಂಖ್ಯೆಯಲ್ಲಿ ಪ್ರತಿದಿನ ಪ್ರಯಾಣಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ರಸ್ತೆಯಲ್ಲಿ 16ಕ್ಕೂ ಹೆಚ್ಚು ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ವಾಹನಗಳು ರಸ್ತೆಯಲ್ಲಿ ಹಾಕಿರುವ ಉಬ್ಬುಗಳಿಂದ ವಾಹನದ ವೇಗ ಕಡಿಮೆ ಮಾಡಿದಾಗ ಕಾಡಾನೆ ಸೇರಿದಂತೆ ವನ್ಯಜೀವಿಗಳು ವಾಹನಗಳ ಮೇಲೆ ದಾಳಿ ಮಾಡುತ್ತಿವೆ. ಇದು ಆಗಾಗ್ಗೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Wildlife Conflicts On Virajpet-Mysore Highway Safety Concerns

ವನ್ಯ ಜೀವಿಗಳ ಸಂರಕ್ಷಣೆ ನಿಟ್ಟಿನಲ್ಲಿ ನ್ಯಾಯಾಲಯ ಈ ಹಿಂದೆ ರಸ್ತೆ ಉಬ್ಬುಗಳನ್ನು ನಿರ್ಮಿಸಲು ಆದೇಶ ನೀಡಿರುವುದು ಸರಿಯಷ್ಟೇ. ಆದರೆ ಮಾನವನ ಜೀವಕ್ಕೂ ಹೆಚ್ಚು ಬೆಲೆಯನ್ನು ನೀಡಬೇಕಾಗಿದೆ. ತಿತಿಮತಿಯಿಂದ ಅಳ್ಳೂರು ತನಕ ಪ್ರತಿ ಒಂದು ಕಿಲೋಮೀಟರ್ ಗೆ ಉಬ್ಬುಗಳನ್ನು ನಿರ್ಮಿಸಲು ನ್ಯಾಯಾಲಯ ಆದೇಶ ಹೊರಡಿಸಿದಂತೆ ರಸ್ತೆ ಉಬ್ಬುಗಳ ನಿರ್ಮಾಣವಾಗಿದೆ. ಆದರೆ ಆನೆಚೌಕೂರ್ ಗೇಟಿನಿಂದ ಪಿರಿಯಾಪಟ್ಟಣಕ್ಕೆ ಹೋಗುವ ಮಾರ್ಗದ ಎರಡು ಕಡೆಯ ಅರಣ್ಯ ವ್ಯಾಪ್ತಿಯಲ್ಲಿ ಉಬ್ಬಗಳನ್ನು ನಿರ್ಮಿಸಿಲ್ಲ. ಅಲ್ಲಿ ಯಾವುದೇ ರೀತಿಯ ಅಪಘಾತಗಳು ಆಗುತ್ತಿಲ್ಲ ಎಂದು ತಿಳಿಸಿದರು.

ರಸ್ತೆ ನಡುವಿನ ಉಬ್ಬು ತೆರವಿಗೆ ಸಲಹೆ

ವನ್ಯಜೀವಿಗಳಿಗೆ ವಾಹನ ಸಂಚಾರದಿಂದ ತೊಂದರೆ ಆಗಿರುವ ಪ್ರಸಂಗಗಳು ಇದುವರೆಗೆ ವರದಿಯಾಗಿಲ್ಲ. ಆದ್ದರಿಂದ ಸಂಬಂಧಿಸಿದವರು ತಿತಿಮತಿ ಭಾಗದಲ್ಲೂ ಕೂಡ ಉಬ್ಬುಗಳನ್ನು ತೆರವುಗೊಳಿಸಲು ನ್ಯಾಯಾಲಯಕ್ಕೆ ಸಮರ್ಪಕ ದಾಖಲಾತಿಯೊಂದಿಗೆ ಮನವರಿಕೆ ಮಾಡಿಕೊಟ್ಟು ನೂತನ ತಂತ್ರಜ್ಞಾನದ ಅಳವಡಿಕೆ ಮಾಡಿ, ವಾಹನಗಳ ವೇಗವನ್ನು ಈ ಭಾಗದಲ್ಲಿ ಕಡಿತಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ.

ಅರಣ್ಯ ಪ್ರಾರಂಭವಾಗುವ ಪ್ರದೇಶದಲ್ಲಿ ಹಾಗೂ ಮುಕ್ತಾಯವಾಗುವ ಪ್ರದೇಶಗಳಲ್ಲಿ ಸ್ಪೀಡ್ ಕಂಟ್ರೋಲ್ ಕ್ಯಾಮರಾಗಳನ್ನು ಇಟ್ಟು ವೇಗದ ಮಿತಿಯ ಅರಿವಿನ ಫಲಕಗಳನ್ನು ಹಾಕಿ ನಿಯಮ ಉಲ್ಲಂಘಿಸಿದವರಿಗೆ ನೇರವಾಗಿ ದಂಡ ವಿಧಿಸಬಹುದಾದ ನೂತನ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಅವರು ಸಲಹೆ ನೀಡಿದ್ದಾರೆ.

Wildlife Conflicts On Virajpet-Mysore Highway Safety Concerns

ಈ ಬಗೆ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುವುದಾಗಿ ಹೇಳಿರುವ ಅವರು, ವನ್ಯಜೀವಿಗಳ ರಕ್ಷಣೆಯೊಂದಿಗೆ ಮಾನವನ ಜೀವದ ರಕ್ಷಣೆಯನ್ನು ಮಾಡಬೇಕಾಗಿರುವುದು ಮೊದಲ ಕರ್ತವ್ಯವಾಗಿದೆ. ಪ್ರಥಮ ಆದ್ಯತೆ ಮನುಷ್ಯನ ಜೀವಕ್ಕೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟು ರಸ್ತೆ ಉಬ್ಬುಗಳ ಬದಲು, ಕ್ಯಾಮರಾ ಅಳವಡಿಕೆ, ದಂಡ ವಿಧಿಸುವಿಕೆ, ಉಬ್ಬನ್ನು ತೆರವುಗೊಳಿಸಿ ಅಲ್ಲಿ ಬಿಳಿ ಬಣ್ಣದ ವೈಟ್ ಲೇನ್ ಮಾರ್ಕಿಂಗ್ ಮಾಡಿ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಲ್ಲದೆ, ಇತ್ತೀಚಿಗೆ ಈ ರಸ್ತೆಯಲ್ಲಿ ಕಾಡು ಪ್ರಾಣಿಗಳಿಂದ ರಾತ್ರಿ ಸಮಯದಲ್ಲಿ ತೊಂದರೆ ಆಗುತ್ತಿದ್ದು ಇದನ್ನು ತಪ್ಪಿಸಲು ನೂತನ ತಂತ್ರಜ್ಞಾನದ ವ್ಯವಸ್ಥೆಯ ಅಗತ್ಯವಿರುವುದನ್ನು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+