ಮಂಡ್ಯ : ನವವಿವಾಹಿತೆಯನ್ನು ಕೊಂದ ಆಪ್ತ ಗೆಳತಿ
ಮಂಡ್ಯ, ಏ. 3 : ಕೆಲವು ದಿನಗಳ ಹಿಂದೆ ಮದುವೆಯಾದ ಸ್ನೇಹಿತೆಯನ್ನು ಗೆಳತಿಯೇ ಕೊಲೆ ಮಾಡಿದ ವಿಚಿತ್ರ ಘಟನೆ ಮಂಡ್ಯದಲ್ಲಿ ನಡೆದಿದೆ. ಮಾ. 31ರಂದು ನಡೆದ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು, ಆಪ್ತ ಗೆಳತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗೆಳತಿಯನ್ನು ಕೊಲೆ ಮಾಡಿದವಳನ್ನು ಮಂಡ್ಯದ ಹಾಲಹಳ್ಳಿ ಬಡಾವಣೆ ನಿವಾಸಿ ಅನುಷಾ (20) ಎಂದು ಗುರುತಿಸಲಾಗಿದೆ. ಮಾ.8ರಂದು ವಿವಾಹವಾಗಿದ್ದ ಗೆಳತಿ ದಿವ್ಯಶ್ರೀ (24)ಯನ್ನು ಅನುಷಾ ಕೊಲೆ ಮಾಡಿದ್ದಳು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. [ಕಾವೇರಿ ನದಿ ಮೇಲೆ ಹಾರಾಡಿದ ಹೆಲಿಕಾಪ್ಟರ್ ಯಾರದ್ದು?]
ದಿವ್ಯಶ್ರೀ ಶವ ಮಂಡ್ಯದ ಕೃಷಿ ಕಚೇರಿ ಬಳಿಯ ನಿರ್ಜನ ಪ್ರದೇಶದಲ್ಲಿ ಮಾ.31ರಂದು ಪತ್ತೆಯಾಗಿತ್ತು. ಗೆಳತಿಯನ್ನು ತನ್ನ ಬೈಕ್‌ನಲ್ಲಿಯೇ ಕರೆದುಕೊಂಡು ಹೋದ ಅನುಷಾ ಆಕೆಯ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದ್ದಳು. ಅನುಷಾಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ : ಮಂಡ್ಯದ ಹಾಲಹಳ್ಳಿ ಕೆರೆಯ ನಿವಾಸಿಗಳಾದ ದಿವ್ಯಶ್ರೀ ಮತ್ತು ಅನುಷಾ ಸ್ನೇಹಿತೆಯರು. ಬೆಂಗಳೂರಿನ ನಾಗರಬಾವಿ ನಿವಾಸಿ ಸಾಗರ್ ಎಂಬುವವರ ಜತೆ ದಿವ್ಯಶ್ರೀಗೆ ಮಾ. 8ರಂದು ಮದುವೆಯಾಗಿತ್ತು. [ಮಂಡ್ಯ : ಕಾವೇರಿ ತೀರದಲ್ಲಿ ಕಾಮುಕನಿಗೆ ಚಪ್ಪಲಿ ಸೇವೆ]
ದಿವ್ಯಶ್ರೀಗೆ ಮದುವೆ ಆಗಬೇಡ ಎಂದು ಅನುಷಾ ಒತ್ತಡ ಹೇರಿದ್ದಳು. ದಿವ್ಯಾಳನ್ನು ಸಾಫ್ಟ್‌ವೇರ್ ಇಂಜಿನಿಯರ್‌ಗೆ ಮದುವೆ ಮಾಡಿ ಕೊಡಬೇಡಿ, ಸರ್ಕಾರಿ ಕೆಲಸದಲ್ಲಿರುವವರಿಗೆ ಮದುವೆ ಮಾಡಿಕೊಡಿ ಎಂದು ಅನುಷಾ ದಿವ್ಯಶ್ರೀ ಪೋಷಕರ ಬಳಿಯೂ ಹೇಳಿದ್ದಳು. ಆದರೆ, ದಿವ್ಯಶ್ರೀ ಪೋಷಕರು ಈ ಬಗ್ಗ ಗಮನಕೊಡದೇ ಮದುವೆ ಮಾಡಿಕೊಟ್ಟಿದ್ದರು.
ಆಪ್ತ ಗೆಳತಿ ಮದುವೆ ಸುದ್ದಿಕೇಳಿ ಖಿನ್ನತೆಗೆ ಒಳಗಾಗಿದ್ದ ಅನುಷಾ ಬಳಿಕ ಚೇತರಿಸಿಕೊಂಡಿದ್ದಳು. ನಂತರ ಮದುವೆಯಲ್ಲಿ ಪಾಲ್ಗೊಂಡಿದ್ದಳು. ಗಂಡನ ಮನೆಗೆ ಹೋಗಿದ್ದ ದಿವ್ಯಶ್ರೀ ಯುಗಾದಿ ಹಬ್ಬದ ನಂತರ ತವರಿಗೆ ವಾಪಸ್ ಬಂದಿದ್ದಳು. ಆಗ ಅವಳಿಗೆ ಕರೆ ಮಾಡಿದ ಅನುಷಾ ತನ್ನ ಮನೆಗೆ ಬರುವಂತೆ ಹೇಳಿದ್ದಳು.
ಮಾ.31ರಂದು ಭೇಟಿಯಾದ ದಿವ್ಯಶ್ರೀಯನ್ನು ಅನುಷಾ ತನ್ನ ಬೈಕ್‌ನಲ್ಲಿಯೇ ಕೂರಿಸಿಕೊಂಡು ಕೃಷಿ ಕಚೇರಿ ಬಳಿಯ ನಿರ್ಜನ ಪ್ರದೇಶಕ್ಕೆ ಹೋಗಿದ್ದಳು. ನಂತರ ತಾನು ತಂದಿದ್ದ ವೈರ್ಅನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಮನೆಗೆ ಮರಳಿದ್ದಳು.












Click it and Unblock the Notifications