Gruha Lakshmi Scheme: ಅದೆಷ್ಟು ದಿನದ ಕನಸೋ: ಗೃಹಲಕ್ಷ್ಮಿ ಹಣದಿಂದ 'ಮಾಂಗಲ್ಯ' ಖರೀಸಿದಿಸಿದ ಮಹಿಳೆ
ಕೊಪ್ಪಳ, ಡಿಸೆಂಬರ್ 18: ಒಂದು ಹೊತ್ತು ಊಟಕ್ಕಾಗಿ ಬೆವರು ಸುರಿಸುವ ಮಹಿಳೆಯರಿಗೆ ಚಿನ್ನ ಖರೀದಿ ದೂರದ ಮಾತು. ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನ ನೀಡುವ ಮೂಲಕ ಅಧಿಕಾರಕ್ಕೆ ಬಂದಿದ್ದು, ಆ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಹಲವು ಯಶೋಗಾಥೆಗಳಿಗೆ ಸಾಕ್ಷಿಯಾಗಿದೆ.
ಆ ಐದು ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಯರಿಗೆ 2000 ರೂಪಾಯಿ ಹಣದಿಂದ ಹಲವರು ತಮ್ಮ ಬದುಕಿನಲ್ಲಿ ಬದಲಾವಣೆಗೆ ಕಾರಣವಾಗಿದೆ. ಗೃಹ ಲಕ್ಷ್ಮಿ ಹಣದಿಂದ ಮಕ್ಕಳ ವಿಧ್ಯಾಭ್ಯಾಸದಿಂದ ಹಿಡಿದು ಬದುಕು ಕಟ್ಟಿಕೊಳ್ಳಲು ಈ ಹಣ ಎದೆಷ್ಟೋ ಕುಟುಂಬಗಳ ಖುಷಿಗೆ ಕಾರಣವಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಇತ್ತೀಚಿಗೆ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದಂತಹ ಗ್ರಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣದಿಂದ ಅತ್ತೆ ಹಾಗೂ ಸೊಸೆ ಬೋರ್ವೆಲ್ ಕೊರೆಸಿದ್ದ ಸುದ್ದಿ, ಭಾರಿ ವೈರಲಾಗಿತ್ತು. ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮಹಿಳೆಯೊಬ್ಬರು, ಗೃಹಲಕ್ಷ್ಮಿ ಹಣ ಕೂಡಿಟ್ಟು ಮಾಂಗಲ್ಯ ಖರೀದಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಿಂದ ಬರುವಂತಹ ಪ್ರತಿ ತಿಂಗಳು 2,000 ರೂಪಾಯಿಗಳನ್ನು, ಕುಡಿಟ್ಟು 15 ಸಾವಿರ ಕೊಟ್ಟು ಮಾಂಗಲ್ಯ ಖರೀದಿ ಮಾಡಿದ್ದಾರೆ. ಇನ್ನೋರ್ವ ಬಡ ಮಹಿಳೆಯಿಂದ ಕಿವೊಯೋಲೆ( ಬೆಂಡಾಲಿ) ಖರೀದಿ ಮಾಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ತುಂಬಾ ಧನ್ಯವಾದಗಳು ಎಂದು ಶಂಕ್ರಮ್ಮ ನಾಯಕ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಗೃಹಲಕ್ಷ್ಮಿ ಹಣದಿಂದ ಮಾಂಗಲ್ಯ ಸರ ಖರೀದಿಸಿದ ಸುದ್ದಿ ತಿಳಿದು ಸಚಿವೆ, ಲಕ್ಷ್ಮಿ ಹೆಬ್ಬಾಳಕರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2 ಸಾವಿರ ರೂಪಾಯಿ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಹಾಯ
ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತಿ ತಿಂಗಳು ಸಿಗುವ 2 ಸಾವಿರ ರೂಪಾಯಿ ಲಕ್ಷಾಂತರ ಹೆಣ್ಣುಮಕ್ಕಳಿಗೆ ಸಹಾಯವಾಗಿದೆ. ಒಬ್ಬರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಗ್ರಂಥಾಲಯ ತೆರೆದರೆ, ಗದಗ ಗಜೇಂದ್ರದಢದ ಅತ್ತೆ-ಸೊಸೆ ಸೇರಿ ತಮ್ಮ ಜಮೀನಿನಲ್ಲಿ ಬೋರ್ವೆಲ್ ಕೊರೆಸಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ, ವೈದ್ಯಕೀಯ ಖರ್ಚು ವೆಚ್ಚಗಳು, ಮಕ್ಕಳಿಗೆ ಶಾಲಾ ಫೀಜು, ಮಕ್ಕಳಿಗೆ ಬೈಕ್ ಕೊಡಿಸಿರುವುದು.. ಹೀಗೆ ಅನೇಕ ರೂಪದಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಬಡ ಮಹಿಳೆಯರಿಗೆ ಸಹಾಯವಾಗುತ್ತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮೀಯರ ಜೊತೆಗೆ ತೃತೀಯ ಲಿಂಗಿಯರಿಗೂ ಗೃಹಲಕ್ಷ್ಮೀ ಯೋಜನೆಯ ಹಣ ತಲುಪಿಸುವ ಕೆಲಸ ಆಗುತ್ತಿದೆ. ಯೋಜನೆಯಿಂದ ಆದ ಲಾಭದ ಬಗ್ಗೆ ಫಲಾನುಭವಿಗಳು ಹೇಳಿಕೊಳ್ಳುವಾಗ ಯೋಜನೆ ಜಾರಿಗೆ ತಂದಿದ್ದಕ್ಕೂ ಸಾರ್ಥಕ ಎನಿಸುತ್ತದೆ. ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎಂಬುದೇ ನಮ್ಮ ಆಸೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಗೃಹಲಕ್ಷ್ಮೀ ಫಲಾನುಭವಿಗಳು ಸಂವಾದ ನಡೆಸಲಿದ್ದು, ವಿಧಾನಸಭೆ ಅಧಿವೇಶನದ ಕಲಾಪ ವೀಕ್ಷಣೆ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ ಎಂದರು.












Click it and Unblock the Notifications