Prajwal Revanna BJP Letter:ಪೆನ್‌ಡ್ರೈವ್ ವಿಷಯವಾಗೇ 2023ರಲ್ಲೇ ಮೈತ್ರಿಗೆ ಅಪಸ್ವರ; ಕಾಮಣ್ಣನ ಆಟ ತಿಳಿದರೂ ಟಿಕೆಟ್ ಏಕೆ?
ಬೆಂಗಳೂರು, ಏಪ್ರಿಲ್ 29: ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅನೇಕ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ನನ್ನ ಬಳಿ ಇದ್ದು, ದಯಮಾಡಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳದಂತೆ ಬಿಜೆಪಿಗೆ 2003ರಲ್ಲೆ 'ತುರ್ತು ರಹಸ್ಯ ಪತ್ರ' ಬರೆಯಲಾಗಿತ್ತು. ಹೀಗಿದ್ದರೂ ಮೈತ್ರಿ ಮಾಡಿಕೊಂಡಿದ್ದೇಕೆ ಬಿಜೆಪಿ. ಪ್ರಜ್ವಲ್ ಜೊತೆಗೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡಿದ್ದೇಕೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.
ಹೌದು, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ಬಿಜೆಪಿಗೆ 2003ರಲ್ಲೇ ಮಾಹಿತಿಯನ್ನು ತುರ್ತು ರಹಸ್ಯ ಪತ್ರದ ಮುಖೇನ ಹೊಳೇ ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಜಿ.ದೇವರಾಜೇಗೌಡ (G Devarajegowda) ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಪತ್ರ ಬರೆದಿದ್ದರು.

ಹೀಗಿದ್ದರು ಅಧಿಕಾರದಾಸೆಗೆ ಮೈತ್ರಿ ಮಾಡಿಕೊಂಡರೇ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿಯ ಜಿ.ದೇವರಾಜೇಗೌಡ ಅವರು ಜೆಡಿಎಸ್ ಪ್ರಜ್ವಲ್ ರೇವಣ್ಣ ವಿರುದ್ಧ ಪತ್ರ ಬರೆದಿದ್ದನ್ನು ಟ್ವೀಟ್ (ಎಕ್ಸ್) ಮಾಡಿದ್ದಾರೆ. ಪವನ್ ಖೇರಾ ಹೇಳಿದ್ದೇನು, ತುರ್ತು ರಹಸ್ಯ ಪತ್ರದಲ್ಲೇನಿದೆ ಎಂದು ಮುಂದೆ ಓದಿ.
ಪ್ರಜ್ವಲ್ ಬಗ್ಗೆ ತಿಳಿದೂ ಮೈತ್ರಿ ಮಾಡಿಕೊಂಡಿದ್ದೇಕೆ: ಪವನ್ ಖೇರಾ
ಟ್ವೀಟ್‌ನಲ್ಲಿ ಕಾಂಗ್ರೆಸ್‌ನ ಪವನ್ ಖೇರಾ ಅವರು, ಅಶ್ಲೀಲ ವಿಡಿಯೋಗಳಿಂದ ತುಂಬಿರುವ ಪೆನ್ ಡ್ರೈವ್ ಇರುವುದರ ಬಗ್ಗೆ 2023 ರ ಡಿಸೆಂಬರ್ 8 ರಂದು ಬಿಜೆಪಿ ನಾಯಕ ದೇವರಾಜೇಗೌಡ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಬರೆದಿದ್ದರು ಎಂದು ತಿಳಿಸಿದ್ದಾರೆ.

ಪ್ರಜ್ವಲ್ ಮತ್ತು ಪೆನ್‌ಡ್ರೈವ್ ಬಗ್ಗೆ ಗೊತ್ತಿದ್ದರೂ ಸಹ '' ಬಿಜೆಪಿ ಏಕೆ ಮೈತ್ರಿಯೊಂದಿಗೆ ಮಾಡಿಕೊಂಡಿದೆ?. ಸರಣಿ ಅತ್ಯಾಚಾರದ ವೀಡಿಯೊವನ್ನು ರೆಕಾರ್ಡ್ ಮಾಡಿ ಪೆನ್-ಡ್ರೈವ್‌ನಲ್ಲಿ ಇರಿಸಿರುವ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ. ಮೊದಲೇ ಗೊತ್ತಿದ್ದ ಕ್ರಮ ಕೈಗೊಂಡಿಲ್ಲ ಏಕೆ?
Here is the letter written by BJP leader Devaraj Gowda to the state president of BJP on December 8, 2023 exposing the presence of the pen drive full of sleaze videos of #PrajwalRevanna.
— Pawan Khera 🇮🇳 (@Pawankhera) April 29, 2024
▪️why did the bjp still go ahead with the alliance?
▪️why no action was taken on the serial… pic.twitter.com/qPzB7wCH6I
ಪ್ರಧಾನಿ ವೇದಿಕೆ ಹಂಚಿಕೊಂಡಿದ್ದೇಕೆ?
ಪ್ರಜ್ವಲ್ ರೇವಣ್ಣ ಪ್ರಪಂಚದ ಅತಿ ದೊಡ್ಡ ಮತ್ತು ಮರ್ಕಿಯೆಸ್ಟ್ ಲೈಂಗಿಕ ದೌರ್ಜನ್ಯದ ಕಿಂಗ್‌ಪಿನ್ ಎಂದು ತಿಳಿದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ಅವರ ಪರವಾಗಿ ಏಕೆ ಪ್ರಚಾರ ಮಾಡಿದರು? ಮತ್ತು ಪ್ರಜ್ವಲ್ ಜತೆ ವೇದಿಕೆ ಹಂಚಿಕೊಂಡರು?
ಪ್ರಜ್ವಲ್ ರೇವಣ್ಣ ಜರ್ಮನಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದವರು ಯಾರು?. ಮೈತ್ರಿ ಪಕ್ಷದ ಅಭ್ಯರ್ಥಿಯಿಂದ ಇಷ್ಟೆಲ್ಲ ನಡೆದಿರುವುದು ಬಹಿರಂಗವಾದರೂ ಪ್ರಧಾನಿ ಮೋದಿ ಮೌನವಾಗಿರುವುದು ಏಕೆ? ಎಂದು ಪವನ್ ಖೇರಾ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಬಿಜೆಪಿ ನಾಯಕ ಬರೆದ ಪತ್ರದಲ್ಲಿ ಏನಿದೆ?
ಜಿ. ದೇವರಾಜೇಗೌಡ ಅವರು ವಿವಿಧ ಕಾರಣಗಳಿಂದ ಹೊಳೇನರಸೀಪುರ ಕ್ಷೇತ್ರದಿಂದ ಕೆಲವು ಭಾರಿ ಸೋತಿದ್ದರು. ಅವರು ಲೋಸಕಭಾ ಚುನಾವಣೆ ಹಿನ್ನೆಲೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಗೂ ಮೊದಲೇ ಬಿಜೆಪಿಗೆ ಪ್ರಜ್ವಲ್ ರೇವಣ್ಣ ಬಗ್ಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನ ರಾಷ್ಟ್ರೀಯ ಪಕ್ಷವಾದ ಬಿಜೆಪಿಯು ಧರ್ಮ ಮತ್ತು ಸಂಸ್ಕೃತಿ ಮತ್ತು ಸ್ತ್ರೀಕುಲವನ್ನು ಪೂಜ್ಯ ಭಾವನೆಯಿಂದ ನೋಡಿ ದೇಶದ ಮಹಿಳೆಯರ ಹೃದಯದಲ್ಲಿ ನೆಲೆಸಿದೆ. ಆದರೆ ಹಾಸನದ ಜೆಡಿಎಸ್ ಕುಟುಂಬದ ಸದಸ್ಯರು ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.
ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಹೆಣ್ಣುಮಕ್ಕಳ 2976 ನೀಲಿ ಚಿತ್ರಗಳಲ್ಲಿ ಮಹಿಳೆಯರನ್ನು ಬಳಸಿಕೊಂಡು, ಅವರೇ ಸ್ವತಃ ವಿಡಿಯೋ ಚಿತ್ರೀಕರಿಸಿದ್ದಾರೆ. ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಕುರಿತ ಪೆನ್‌ಡ್ರೈವ್ ಗಳು ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಕೈಗೆ ಸೇರಿವೆ.
ನೀವು ಮೈತ್ರಿ ಮಾಡಿಕೊಂಡರೆ ವಿಪಕ್ಷಗಳು ಈ ಪೆನ್‌ಡ್ರೈವ್ ಅನ್ನೇ ಚುನಾವಣಾ ಬ್ರಹ್ಮಾಸ್ತ್ರವಾಗಿ ಮಾಡಿಕೊಳ್ಳಲಿವೆ. ಪಕ್ಷಕ್ಕೆ ಮುಜುಗರ ಉಂಟು ಮಾಡಲಿವೆ ಎಂದೆಲ್ಲ ಅವರು ಪತ್ರದಲ್ಲಿ ವಿವರಿಸಿದ್ದಾರೆ. ಹೀಗಿದ್ದರೂ ಮೈತ್ರಿ ಮಾಡಿಕೊಳ್ಳಲಾಗಿದೆ. ಇದೀಗ ಪ್ರಕರಣ ಬೆಳಕಿಗೆ ಬಂದ ಬಳಿಕ ಕಾಂಗ್ರೆಸ್‌ನ ಪವನ್ ಖೆರಾ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಪ್ರಶ್ನೆ ಮಾಡಿದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications