Lok Sabha election: ಕಡಲ ಕಿನಾರೆಯಲ್ಲಿ ಕಮಲ ಅರಳಲು ಕಾರಣ ಏನು?
ಕರ್ನಾಟಕದಲ್ಲಿ ಚುನಾವಣೆ ಬಿಸಿ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗಳು ನಡೆಯಲಿವೆ. ಈ ವೇಳೆ ಎಲ್ಲ ಪಕ್ಷಗಳು ತಮ್ಮ ಅಭ್ಯಾರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಕರವಾಳಿ ಭಾಗದಲ್ಲಿ ಮತ್ತೊಮ್ಮೆ ತನ್ನ ಜಯದ ಓಟವನ್ನು ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದೆ.
ಸತತ ಎರಡು ದಶಕಗಳ ಕಾಲ ಬಿಜೆಪಿ ಕರಾವಳಿ ಭಾಗದಲ್ಲಿ ತನ್ನ ಹಿಡಿತವನ್ನು ಸಾಧಿಸಿದೆ. ಈ ಭಾಗದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ದಕ್ಷಿಣ ಕನ್ನಡದಲ್ಲಿ ಬಿಜೆಪಿ 1991ರಿಂದ ಸೋಲನ್ನೇ ಕಂಡಿಲ್ಲ. ಉತ್ತರ ಕನ್ನಡದಲ್ಲೂ ಬಿಜೆಪಿ 2004ರಿಂದ ಸತತ ಗೆಲುವಿನ ನಗೆ ಬೀರುತ್ತಿದೆ. ಈ ಕ್ಷೇತ್ರದಿಂದ ಅನಂತ್ ಕುಮಾರ್ ಹೆಗಡೆ ಹ್ಯಾಟ್ರಿಕ್ ಜಯ ಸಾಧಿಸಿದ್ದರೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಜೆಪಿ ಹಿಡಿತ ಸಡಿಲಿಸಿಲ್ಲ. ಆದರೆ 2012ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿತ್ತು. ಲೋಕಸಭಾ ಚುನಾವಣೆಗಳು ಬಂದಾಗ ಈ ಕ್ಷೇತ್ರ ಬಿಜೆಪಿಗೆ ವರವಾಗಿದೆ. ಈ ಬಾರಿಯೂ ಇದೇ ಸಾಧನೆಯನ್ನು ಬಿಜಿಪಿ ಮಾಡುತ್ತದಾ ಎಂದು ಕಾದುನೋಡಬೇಕಿದೆ.

ಕಳೆದ ಬಾರಿ ಕ್ಲೀನ್ ಸ್ವೀಪ್ ಸಾಧನೆ
2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಅಲ್ಲದೆ ಗೆಲುವಿನ ಅಂತರ ಸಹ ಚೆನ್ನಾಗಿತ್ತು. ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಅವರು 3.5 ಲಕ್ಷ ಮತಗಳ ಅಂತರದಿಂದ ಗೆದ್ದರೆ, ಉಡುಪಿ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ 3 ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಜಯ ಸಾಧಿಸಿದ್ದರು. ಇನ್ನು ದಕ್ಷಿಣ ಕನ್ನಡದಲ್ಲಿ ನಳೀನ್ ಕುಮಾರ್ ಕಟಿಲ್ 2.5 ಲಕ್ಷ ಮತಗಳಿಂದ ಗೆದ್ದಿದ್ದರು.
2019ರಲ್ಲಿ ಜಯ ಸಾಧಿಸಿರುವ ಸಂಸದರಿಗೆ ಬಿಜೆಪಿ ಪಕ್ಷ ಈ ಬಾರಿ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ಸಹ ಉತ್ತರ ಹಾಗೂ ದಕ್ಷಿಣ ಕನ್ನಡದಲ್ಲಿ ಹೊಸಬರಿಗೆ ಅವಕಾಶ ನೀಡಿದೆ. ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಜಯಪ್ರಕಾಶ್ ಹೆಗಡೆ ಕಣಕ್ಕೆ ಇಳಿದಿದ್ದಾರೆ. ಜಯಪ್ರಕಾಶ್ ಹೆಗಡೆ ಅವರು 2009, 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಆದರೆ 2012ರ ಉಪಚುನಾವಣೆಯಲ್ಲಿ ಇವರು ಜಯ ಸಾಧಿಸಿದರು.

ದಕ್ಷಿಣದಲ್ಲಿ ಹೊಸ ಮುಖ
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಹೊಸ ಮುಖಗಳಿಗೆ ಮಣೆ ಹಾಕಿವೆ. ಬಿಜೆಪಿ ಕ್ಯಾಪ್ಟನ್ ಬ್ರಿಜೇಶ್ ಔಟಾ ಅವರನ್ನು ಕಣಕ್ಕೆ ಇಳಿಸಿದರೆ, ಕಾಂಗ್ರೆಸ್ ಪರ ಪದ್ಮರಾಜ್ ಸ್ಪರ್ಧಿಸುತ್ತಿದ್ದಾರೆ. ಉಡುಪಿ ಚಿಕ್ಕಮಗಳೂರಿನಲ್ಲೂ ಬಿಜೆಪಿ ಹೊಸ ಮುಖಕಕ್ಕೆ ಆದ್ಯತೆ ನೀಡಿದೆ. ಬಿಜೆಪಿಯ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ತೊರೆದ ಕಾರಣ ಇವರ ಸ್ಥಾನದಲ್ಲಿ, ಕೋಟಾ ಶ್ರೀನಿವಾಸ್ ಪೂಜಾರಿ ಅವರನ್ನು ಅಭ್ಯರ್ಥಿ ಎಂದು ಕಮಲ ಪಡೆ ಘೋಷಿಸಿದೆ. ಈ ಕ್ಷೇತ್ರದಿಂದ ಕಾಂಗ್ರೆಸ್ ಜಯಪ್ರಕಾಶ್ ಹೆಗಡೆ ಅವರನ್ನು ಕಣಕ್ಕೆ ಇಳಿಸಿದೆ.
ಉತ್ತರ ಕನ್ನಡದಲ್ಲೂ ಅನಂತ್ ಕುಮಾರ್ ಹೆಗಡೆ ಬಲದಿಗೆ ಮಾಜಿ ಸ್ಪೀಕರ್ ಹಾಗೂ ಆರು ಬಾರಿ ಶಾಕಸ ವಿಶ್ವೇಶ್ವರ್ ಹೆಗಡೆ ಕಾಗೆರಿಗೆ ಬಿಜೆಪಿ ಅವಕಾಶವನ್ನು ನೀಡಿದೆ. ಕಮಲ ಪಾಳಯದಿಂದ ಕಣಕ್ಕೆ ಇಳಿದಿರುವ ಮೂರು ಅಭ್ಯರ್ಥಿಗಳು ಪಕ್ಷದಲ್ಲಿ ಆಕ್ಟಿವ್ ಆಗಿದ್ದಾರೆ. ಇನ್ನು ಈ ಕ್ಷೇತ್ರವನ್ನು ಕಬ್ಜಾ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಅಂಜಲಿ ನಿಂಬಾಳ್ಕರ್ ಗೆಲುವಿನ ಕನಸು ಕಾಣುತ್ತಿದ್ದಾರೆ.

ಬಿಜೆಪಿಗೆ ಎರಡು ಅಂಶಗಳು ಪ್ಲಸ್
ಕರಾವಳಿ ಭಾಗದಲ್ಲಿ ಬಿಜೆಪಿಗೆ ಎರಡು ವಿಚಾರಗಳು ಕೆಲಸ ಮಾಡುತ್ತಿವೆ. ಮೊದಲನೆಯದಾಗಿ, ಪ್ರಧಾನಿಯ ಪ್ರಬಲ ಜನಪ್ರಿಯತೆ. ಇದನ್ನೇ ಪಕ್ಷ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ. ಏಪ್ರಿಲ್ 14 ರಂದು, ಪ್ರಧಾನ ಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಪ್ರಮುಖ ರೋಡ್ ಶೋ ನಡೆಸಿದರು. ಈ ರೋಡ್ ಶೋ ಬಿಜೆಪಿ ಈ ಭಾಗದಲ್ಲಿ ಎಷ್ಟು ಪ್ರಭಾವ ಬೀರಿದೆ ಎಂದು ಹೇಳುವಂತಿತ್ತು. ಇನ್ನು ಈ ಭಾಗದಲ್ಲಿ ಗ್ರಾಸ್ ರೂಟ್ ಕಾರ್ಯಕರ್ತರು ಉತ್ತಮವಾಗಿ ಕೆಲಸ ಮಾಡುತ್ತಾರೆ. ಇದು ಬಿಜೆಪಿ ಪಕ್ಷಕ್ಕೆ ಬೂಸ್ಟ್ ನೀಡಿದೆ.
ಕರವಾಳಿ ಭಾಗದಲ್ಲಿ ಬಿಜೆಪಿ ಈ ಬಾರಿ ಮಾಸ್ಟರ್ ಪ್ಲ್ಯಾನ್ ಮಾಡಿಯೇ ಹೊಸಬರಿಗೆ ಅವಕಾಶ ನೀಡಿದೆ. ಈ ಮೂಲಕ ಆಡಳಿತ ವಿರೋಧಿ (anti-incumbency) ಅಲೆಯನ್ನು ಹತ್ತಿಕಲ್ಲು, ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ದಕ್ಷಿಣ ಕನ್ನಡದ ಹಾಲಿ ಸಂಸದ ನಳಿನ್ ಕುಮಾರ್ ಕಟಿಲ್ ಅವರ ಕಾರ್ಯಕ್ಕೆ ಸ್ಥಳಿಯ ಮುಖಂಡರು ಹಾಗೂ ಜನರಲ್ಲಿ ತೀವ್ರ ಅಸಮಾಧಾನವಿತ್ತು. ಜುಲೈ 2022 ರಲ್ಲಿ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ, ಸ್ಥಳೀಯ ಕಾರ್ಯಕರ್ತರು ಕಟೀಲ್ ಅವರ ಕಾರನ್ನು ತಡೆದು ಪ್ರವೀಣ್ ನೆಟ್ಟಾರು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡದಂತೆ ತಡೆದರು. ಈ ಮೂಲಕ ಬಿಜೆಪಿ ಸ್ಥಳಿಯ ಕಾರ್ಯಕರ್ತರು ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದರು. ಇದು ಕಟಿಲ್ ಅವರ ಟಿಕೆಟ್ ತಪ್ಪುವ ಸನ್ನಿವೇಶಗಳಲ್ಲಿ ಒಂದಾಗಿದೆ.
ಕೈ ಎಡವುತ್ತಿರುವುದು ಎಲ್ಲಿ?
ಕಾಂಗ್ರೆಸ್ ಕರಾವಳಿ ಭಾಗದಲ್ಲಿ ಸ್ಟ್ರಾಂಗ್ ಸ್ಥಳಿಯ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ದಿನೇಶ್ ಗುಂಡುರವಾ, ಬೆಂಗಳೂರಿನಲ್ಲಿ ರಾಜಕೀಯ ನೆಲೆಯನ್ನು ಹೊಂದಿವರಾಗಿದ್ದಾರೆ. ಇನ್ನು ಉತ್ತರ ಕನ್ನಡದ ಜಿಲ್ಲೆಯ ಉಸ್ತುವಾರಿ ಆಗಿರುವ ಅಂಜಲಿ ನಿಂಬಾಳ್ಕರ್ ಸಹ ಪಕ್ಕದ ಬೆಳಗಾವಿ ಜಿಲ್ಲೆಯವರು. ಇದರಿಂದ ಸ್ಥಳೀಯವಾಗಿ ಎಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಅರ್ಥವಾಗುತ್ತದೆ.
ಸಮರ್ಥ ಅಭ್ಯರ್ಥಿಯ ಕೊರತೆ ಕಾಂಗ್ರೆಸ್ ಪಕ್ಷದ ದೊಡ್ಡ ತಲೆ ನೋವಾಗಿದೆ. ಈ ಭಾಗದ ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ವೀರಪ್ಪಾ ಮೊಯ್ಲಿ, ಜನರ್ಧನ್ ಪೂಜಾರಿ, ಮಾರ್ಗರೇಟ್ ಆಳ್ವಾ, ಇವರೆಲ್ಲಾ ತಮ್ಮ ರಾಜಕೀಯ ನೆಲೆಯನ್ನು ಇಲ್ಲಿಯೇ ಕಂಡು ಕೊಂಡಿದ್ದರು. ಇನ್ನಾದರೂ ಕಾಂಗ್ರೆಸ್ ಈ ನೆಲೆಗಳಲ್ಲಿ ತಳಮಟ್ಟದಲ್ಲಿ ಪ್ರಾಭಲ್ಯವನ್ನು ಸಾಧಿಸುವ ಅವಶ್ಯಕತೆ ಇದೆ.












Click it and Unblock the Notifications