ಯಡಿಯೂರಪ್ಪ ಬಂಧಿಸಲು ಪೊಲೀಸರ ಸಿದ್ಧತೆಗೆ ಕಾರಣ ಏನು?
ಯಡಿಯೂರಪ್ಪ ಅವರಿಗೆ ಈಗ ಬಂಧನದ ಭೀತಿ ಎದುರಾಗಿದೆ, ಅದರಲ್ಲೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಅರೆಸ್ಟ್ ಮಾಡಲು ಇದೀಗ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ, ಯಡಿಯೂರಪ್ಪ ಅವರ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿರುವ ಹಿಂದಿನ ಕಾರಣ ಏನು? ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಯಡಿಯೂರಪ್ಪ ಕರ್ನಾಟಕ ರಾಜ್ಯಕ್ಕೆ 3 ಬಾರಿ ಸಿಎಂ ಆಗಿದ್ದವರು ಹಾಗೂ ಒಂದು ಬಾರಿ ಅವರು ಡಿಸಿಎಂ ಕೂಡ ಆಗಿದ್ದರು. ಹೀಗಿದ್ದಾಗ ಯಡಿಯೂರಪ್ಪ ಅವರನ್ನು ಅರೆಸ್ಟ್ ಮಾಡಲು ಇದೀಗ ವೇದಿಕೆ ಸಜ್ಜಾಗಿದೆ. ಅದರಲ್ಲೂ ಯಡಿಯೂರಪ್ಪ ಅವರ ವಿರುದ್ದ ಕೇಳಿಬಂದಿರುವ ಗಂಭೀರವಾದ ಪ್ರಕರಣ ಅವರನ್ನ ಮತ್ತೊಮ್ಮೆ ಜೈಲು ಕಂಬಿ ಹಿಂದೆ ತಳ್ಳುವಂತೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದ್ರೆ ಅಸಲಿಗೆ, ಯಡಿಯೂರಪ್ಪ ಅವರನ್ನ ಅರೆಸ್ಟ್ ಮಾಡಲು ಕರ್ನಾಟಕದ ಪೊಲೀಸರು ಯಾಕೆ ಸಿದ್ಧತೆ ಕೈಗೊಂಡಿದ್ದಾರೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಯಡಿಯೂರಪ್ಪ ಬಂಧನ ಗ್ಯಾರಂಟಿ?
ಮಾಜಿ ಸಿಎಂ ಯಡಿಯೂರಪ್ಪ ಅವರು 'ಪೋಕ್ಸೊ' ಅಂದ್ರೆ 'ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ' ಅಡಿಯಲ್ಲಿ ಕೇಸ್ ಎದುರಿಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ದೊಡ್ಡ ಹಿನ್ನಡೆ ಅನುಭವಿಸುತ್ತಿದ್ದಾರೆ. ಇದೀಗ ಕರ್ನಾಟಕದ ಮಾಜಿ ಸಿಎಂಗೆ ದೊಡ್ಡದಾದ ಕಂಟಕ ಎದುರಾಗಿದೆ. ಅದು ಏನೆಂದರೆ ಬೆಂಗಳೂರಿನ ಒಂದನೇ ತ್ವರಿತಗತಿ ನ್ಯಾಯಾಲಯ ಬಿಎಸ್ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಹೀಗಾಗಿ ಯಡಿಯೂರಪ್ಪ ಅವರು ಅರೆಸ್ಟ್ ಆಗುವ ಅಂದ್ರೆ ಬಂಧನ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿ ಇದೆ.
ಅರೆಸ್ಟ್ ಮಾಡಲು ಪೊಲೀಸರ ಸಿದ್ಧತೆ?
ಕೆಲವು ತಿಂಗಳ ಹಿಂದಷ್ಟೇ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಅಪ್ರಾಪ್ತಗೆ ಅಂದ್ರೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಅಡಿ, ಬೆಂಗಳೂರಿನ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೇಂದ್ರ ತನಿಖಾ ದಳ ಅಂದ್ರೆ ಸಿಐಡಿ ಪ್ರಕರಣ ಸಂಬಂಧ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಹೀಗಾಗಿ ಯಡಿಯೂರಪ್ಪ ಅವರನ್ನು ಯಾವ ಕ್ಷಣದಲ್ಲಿ ಬೇಕಾದರೂ ಬಂಧಿಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications