ಹವಾಮಾನ ವರದಿ: ರಾಜ್ಯದಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಈ ನಡುವೆ ಅನೇಕ ಜಿಲ್ಲೆಗಳಲ್ಲಿ ಈ ವಾರದಲ್ಲಿಚದುರಿದಂತೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮೇಲ್ಮೈ ಸುಳಿಗಾಳಿ ತೀವ್ರತೆಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಾರ್ಚ್ 20 ರಿಂದ 22ರ ವರೆಗೆ ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆಯಾಗಲಿದೆ.

ಉತ್ತರ ಒಳನಾಡಿನಲ್ಲೂ ಮಳೆಯಾಗಲಿದೆ

ಉತ್ತರ ಒಳನಾಡಿನಲ್ಲೂ ಮಳೆಯಾಗಲಿದೆ

ಮುಂದಿನ 48 ಗಂಟೆಗಳಲ್ಲಿ ಉತ್ತರ ಒಳನಾಡಿನ ಬೀದರ್, ಧಾರವಾಡ, ಗದಗ, ಕೊಪ್ಪಳ, ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು ಮುಂತಾದೆಡೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಂಭವವಿದೆ.

ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ

ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ

ದಕ್ಷಿಣ ಒಳನಾಡು, ಕರಾವಳಿ ಮಳೆ ಮುನ್ಸೂಚನೆ ಇದ್ದರೂ ಭಾರಿ ಮಳೆ, ಗುಡುಗು ಸಹಿತ ಮುನ್ನೆಚ್ಚರಿಕೆ ನೀಡಿಲ್ಲ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಮಳೆ ನಂತರ ತಾಪಮಾನ ಎಂದಿನಂತೆ ಏರಲಿದೆ ಎಂದು ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ.

ಬೆಂಗಳೂರಿನ ಹವಾಮಾನ ಈ ವಾರ:

ಬೆಂಗಳೂರಿನ ಹವಾಮಾನ ಈ ವಾರ:

ಬೆಂಗಳೂರಿನಲ್ಲಿ ನಿರ್ಮಲವಾದ ಆಕಾಶ ಇರಲಿದ್ದು, ಮುಂಜಾನೆ ಕೆಲವೆಡೆ ಮಂಜು ಕವಿದಾ ವಾತವರಣ ಇರಲಿದೆ. ಮಾರ್ಚ್ 20 ರಿಂದ 22ರ ಅವಧಿಯಲ್ಲಿ ಬೆಂಗಳೂರು ನಗರದಲ್ಲಿಒಂದೆರಡು ಬಾರಿ ಮಳೆಯಾಗಲಿದೆ. ಗರಿಷ್ಠ 34ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಸರಾಸರಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Recommended Video

    ಭಾರಿ ಮಳೆ ಸೂಚನೆ ಕೊಟ್ಟ ಹವಾಮಾನ ಇಲಾಖೆ | Rain Forcast
    ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಸುರಿಯಲಿದೆ

    ರಾಜ್ಯದಲ್ಲಿ ಈ ವಾರ ಎಲ್ಲೆಲ್ಲಿ ಸುರಿಯಲಿದೆ

    ಕರ್ನಾಟಕದ ವಿವಿಧ ಪಟ್ಟಣಗಳಲ್ಲಿ ತಾಪಮಾನ ವಿವರ ಇಲ್ಲಿದೆ: (ವಿನ್ಯಾಸ: ಭರತ್ ಎಚ್.ಸಿ)
    ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತಿ ಹೆಚ್ಚು ಉಷ್ಣಾಂಶ 39.3 ಡಿ.ಸೆ ಕಲಬುರಗಿಯಲ್ಲಿ ಹಾಗೂ ಕಡಿಮೆ ಉಷ್ಣಾಂಶ 15.0 ಡಿ.ಸೆ.ದಾವಣಗೆರೆಯಲ್ಲಿ ದಾಖಲಾಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+