ಕರ್ನಾಟಕದಲ್ಲಿ ಬಿಜೆಪಿಗೆ ಎಷ್ಟು ಸ್ಥಾನ; ಪ್ರಹ್ಲಾದ ಜೋಶಿ ಕೊಟ್ಟ ಅಂಕಿ ಅಂಶಗಳು ಇಲ್ಲಿವೆ?
ಹುಬ್ಬಳ್ಳಿ, ಜೂನ್ 02: ಎಕ್ಸಿಟ್ ಪೂಲ್ ಬರುವುಕ್ಕಿಂತ ಮುಂಚೆನೆ ನಾವು ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಚಂಡ ಬಹುಮತ ಪಡೆಯುತ್ತೇವೆ ಅಂತಾ ಎಲ್ಲಾ ಕಡೆ ವಿಶ್ವಾಸ ವಿದೆ. ಈಗ ಎಕ್ಸಿಟ್ ಪೋಲ್ ಫಲಿತಾಂಶ ಬಂದಿದೆ. ನರೇಂದ್ರ ಮೋದಿಯವರ ನೇತೃತ್ವದ ಎನ್ ಡಿಎ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲಿ ಸರಾಸರಿ ತೆಗೆದರೂ ಸಹಿತ 340-350 ಸ್ಥಾನ ಕನಿಷ್ಠ ಗೆಲ್ಲುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‌ಡಿಎ ಹಾಗೂ ನರೇಂದ್ರ ಮೋದಿ ಅವರು ಕರೆ ಕೊಟ್ಟ ಹಾಗೇ 400 ಅಂತಾ ಹೇಳಿದ್ದರು. ಅದೇ ರೀತಿ 400 ಸ್ಥಾನಗಳ ಸಮೀಪ ಹಾಗೂ ಅದನ್ನ ಪಾರು ಮಾಡಿ ಎನ್ ಡಿಎ ಮುಂದಕ್ಕೆ ಹೋಗುತ್ತದೆ ಎಂದು ಹೇಳಿದರು. ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ವಿ, ಈ ಬಾರಿಯೂ ನಾವು 25 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶದ ಎಕ್ಸಿಟ್ ಪೂಲ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಪಾರ್ಟಿ ಆರಂಭದಿಂದ ನಕಾರಾತ್ಮಕ ಧೋರಣೆ ಅನುಸರಿಸಿತ್ತು. ಲೋಕಸಭೆ ಚುನಾವಣೆ ಅಂದ್ರೆ ಪ್ರಧಾನ ಮಂತ್ರಿ ಹಾಗೂ ಭಾರತ ಸರಕಾರ ಆರಿಸುವ ಚುನಾವಣೆ.ಇವರೆಲ್ಲರೂ ಸಹಿತ ಪ್ರತಿ ಹಂತದಲ್ಲೂ ನಾವು ಪ್ರೀ ಕೊಟ್ಟಿದ್ದೇವೆ ಭಾಗ್ಯ ಕೊಟ್ಟಿದ್ದೇವೆ ಅಂತಾ ಹೇಳಿದ್ರು. ಅದನ್ನೆಲ್ಲ ಜನರು ಅತ್ಯಂತ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ದೇಶದ ಸುಭದ್ರತೆ,ದೇಶದ ರಕ್ಷಣೆ,ಬಡವರ ಹಿತದೃಷ್ಟಿಯಿಂದ ನರೇಂದ್ರ ಮೋದಿ ಅವರಿಗೆ ಜನರು ಮತವನ್ನ ಹಾಕಿದ್ದಾರೆ.
ಕಾಂಗ್ರೆಸ್ ನವರು ಮೊದಲಿನಿಂದಲೂ ವಿಶ್ವಾಸ ಇದೆ ಅಂತಾ ಹೇಳುತ್ತಿದ್ದಾರೆ. ಆದರೆ, ವಿಶ್ವಾಸದ ಹಣೆಬರಹ ಏನಾಗಿದೆ ಅಂತಾ ಎಲ್ಲರಿಗೂ ಗೊತ್ತಾಗುತ್ತಿದೆ. ರಿಸಲ್ಟ್ ಬಂದ ಮೇಲೆ ನಿಚ್ಛಳವಾಗಿ ಗೊತ್ತಾಗುತ್ತದೆ. ನರೇಂದ್ರ ಮೋದಿ ನೇತೃತ್ವ vs ರಾಹುಲ್ ಗಾಂಧಿ ನೇತೃತ್ವ ಮಾಡಲಿಕೆ ಹೋಗಿದ್ದಾರೆ. ಜನ ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ ಅಧಿಕೃತ ರಿಸಲ್ಟ್ ಬರಬೇಕು ಎಂದು ಹೇಳಿದರು.
ನಮ್ಮ ಸರಕಾರ ರಚನೆ ಆಗಿ ಅಧಿಕಾರಕ್ಕೆ ಬಂದ ತಕ್ಷಣ ಟಕಾಟಕ್ ಹಣ ಹಾಕುತ್ತೇವೆ ಎನ್ನುವ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಟಕಾಟಕ್ ಆಗಿ ವಿರೋಧ ಪಕ್ಷ ಆಗಲಿ ಮೊದಲು ಎಂದು ರಾಗುಲ್ ಗಾಂಧಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪತನವಾಗುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀಡಿದ ಗ್ಯಾರಂಟಿ ಬೋಗಸ್ ಗ್ಯಾರಂಟಿ ಜನರಿಗೂ ಗೊತ್ತಿದೆ ಸರಕಾರವೇ ಗ್ಯಾರಂಟಿ ಇಲ್ಲ. ನಾನು ಜವಾಬ್ದಾರಿ ಮಂತ್ರಿ ಆಗಿ ಹೆಳೋದು ಸರಕಾರ ಪತನ ಆಗಬಾರದು. ಬಿಜೆಪಿ ಹಾಗೂ ನಮ್ಮ ಯಾವುದೇ ನಾಯಕರು ಪತನಕ್ಕೆ ಪ್ರಯತ್ನಿಸುವುದಿಲ್ಲ. ಪ್ರಯತ್ನ ಮಾಡಬಾರದು ಎಂದು ನನ್ನ ಸ್ಪಷ್ಟನೆ.ಕಾಂಗ್ರೆಸನಲ್ಲಿ ಮೇಲ್ನೋಟಕ್ಕೆ ಅವರಲ್ಲಿ ಎನೋ ಸರಿಯಿಲ್ಲ. ಅವರ ಆಂತರಿಕವಾದಂತಹ ಒಳಜಗಳದಿಂದ ಬಿಳಬಹುದು ಅಂತ ಇದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ ಬಿಜಪಿ ನಿರ್ಧಾರ ಏನು ಎನ್ನುವ ಮಾಧ್ಯಮಗಳ ಪ್ರಶ್ನೆ ವಿಚಾರ.ಬಿಜೆಪಿ ನಿರ್ಧಾರ ಏನು ಕೋರ್ಟ್ ನಿರ್ಧಾರ ಮಾಡಬೇಕು. ಕೋರ್ಟ್ ಎರಡು ವರ್ಷ ಶಿಕ್ಷೆ ಕೊಟ್ಟರೆ ಸದಸ್ಯತ್ವ ಸ್ಥಾನ ರದ್ದಾಗುತ್ತದೆ. ಪ್ರಜ್ವಲ್ ಅವರಿಗೆ ಕಠೋರವಾದ ಶಿಕ್ಷೆ ಆಗಬೇಕು. ನಾನು ಮೊದಲು ಹೇಳಿದ್ದು ಪ್ರಜ್ವಲ್ ಅವರನ್ನ ಅರೆಸ್ಟ್ ಮಾಡ್ರಿ ಕ್ರಮ ಕೈಗೊಳ್ಳಿ ಅಂತಾ. ಅವರು ಕ್ರಮ ತೆಗೆದುಕ್ಕೊಳ್ಳಲಿಲ್ಲ, ಈಗ 35 ದಿವಸದ ನಂತರ ಕೇಂದ್ರ ಸರಕಾರಕ್ಕೆ ಅವರ ಪಾಸಪೋರ್ಟ್ ರದ್ದು ಮಾಡಬೇಕು ಅಂತಾ ಕೇಳಿದರು. ಅಧಿಕೃತವಾಗಿ ಮಾಹಿತಿ ಕೊಟ್ಟ ತಕ್ಷಣ ಕೇಂದ್ರ ಸರ್ಕಾರ ಕೆಲಸ ಮಾಡಿದೆ ಎಂದು ಹೇಳಿದರು.












Click it and Unblock the Notifications