Get Updates
Get notified of breaking news, exclusive insights, and must-see stories!

ಕರ್ನಾಟಕದ ಯಾವುದೇ ಭಾಗದ ಕಿಂಚಿತ್ತು ಭೂಮಿಯನ್ನ ಮುಟ್ಟಲು ನಾವು ಬಿಡುವುದಿಲ್ಲ‌: ಬಿ.ಕೆ.ಹರಿಪ್ರಸಾದ್

ಬೆಳಗಾವಿ,ಡಿಸೆಂಬರ್ 27: ಬೆಳಗಾವಿ, ನಿಪ್ಪಾಣಿ ಹಾಗೂ ಕರ್ನಾಟಕದ ಯಾವುದೇ ಭಾಗದ ಕಿಂಚಿತ್ತು ಭೂಮಿಯನ್ನ ಮುಟ್ಟಲು ನಾವು ಬಿಡುವುದಿಲ್ಲ‌ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಮಂಗಳವಾರ ವಿಧಾನ ಪರಿಷತ್ ಕಲಾಪದಲ್ಲಿ ಗಡಿ ವಿವಾದದ ಚರ್ಚೆಯ ಬಗ್ಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ಪ್ರಾರಂಭವಾಗುವಾಗಲೆಲ್ಲ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿಷಯ ಹೆಚ್ಚು ಚರ್ಚೆಗೆ ಬರುತ್ತಿದೆ. ಇದಕ್ಕೆ ಮಹಾರಾಷ್ಟ್ರ ಸರ್ಕಾರದ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಮರಾಠಿ ಮೇಳಾವ್ ನಡೆಸುವುದು, ಗಡಿಗಳಲ್ಲಿ ಭಯದ ವಾತಾವರಣ ಸೃಷ್ಟಿಸುವುದು, ಜನರನ್ನ ಭಯಭೀತರನ್ನಾಗಿ ಮಾಡುವುದೇ ಕೆಲವು ಪುಂಡರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ದೇಶದಲ್ಲಿ 19 ಸಾವಿರಕ್ಕೂ ಹೆಚ್ಚು ಭಾಷೆ ಮಾತ್ನಾಡುವ ಜನರಿದ್ದಾರೆ. ಬೆಂಗಳೂರನಲ್ಲಿ 106 ಭಾಷೆ ಮಾತ್ನಾಡುವ ಜನರಿದ್ದಾರೆ. ಪೂನಾದಲ್ಲಿ 98 ಭಾಷೆ ಮಾತ್ನಾಡುತ್ತಾರೆ ಇಂತಹ ವೈವಿಧ್ಯತೆ ನಮ್ಮ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ಭಾಷೆಯ ವಿಷಯದಲ್ಲಿ ಖ್ಯಾತೆ ತೆಗೆಯುವವರು ಪುಂಡರೇ ಹೊರತು ಭಾಷಾಭಿಮಾನಿಗಳಲ್ಲ. ಇಂತಹ ಕ್ಯಾತೆ ತೆಗೆಯುವುದರ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ. ಗಡಿ ಭಾಗದಲ್ಲಿ ಪುಂಡಾಟಿಕೆ ನಡೆಸುವವರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಭಾಷೆಯನ್ನ ಬಳಸಿಕೊಂಡು ರಾಜಕೀಯ ನಡೆಸುತ್ತಿದೆ.

We Will Not Let Any Part Of Karnataka Touch Land Said B K Hariprasad

ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಗಳನ್ನ ಬಗೆ ಹರಿಸಲು 1953 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂವರು ಜನರ ಸಮಿತಿಯನ್ನ ರಚಿಸಿತ್ತು. ಈ ಸಮಿತಿಯ ವರದಿ ಪ್ರಕಾರ ಮುಂಬೈ ಪ್ರಾಂತ್ಯದ ಬೆಳಗಾವಿಯೂ ಸೇರಿದಂತೆ 865 ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರಿವೆ ಎಂದು ವರದಿ ನೀಡಿದೆ. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಆಕ್ಷೇಪ ಸಲ್ಲಿಸಿತ್ತು.

ದೇಶದ ಅಭಿವೃದ್ಧಿಗೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಯಾಗಬಾರದೆಂದು ಮತ್ತೆ 1966ರಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಮೆಹರ್ ಸಿಂಗ್ ಮಹಾಜನ್ ನೇತೃತ್ವದಲ್ಲಿ ಸಮಿತಿ ರಚಿಸಿ, ಗಡಿ ಭಾಗದ ಸಮಸ್ಯೆಗಳಿಗೆ ವಿರಾಮ ನೀಡಲು ಸಮಿತಿ ಅಸ್ತಿತ್ವಕ್ಕೆ ಬಂತು. ಆಗಿನ ಮಹಾರಾಷ್ಟ್ರ ಸಿಎಂ ವಿ.ಪಿ‌ ನಾಯಕ್ ಅವರು ಮಹಾಜನ್ ವರದಿ ಹೇಗೇ ಬಂದರೂ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದರು. ಆದ್ರೆ ಸಮಿತಿ 1967ರಲ್ಲಿ ವೈಜ್ಞಾನಿಕವಾಗಿ ಗಡಿ ಭಾಗದ ಜನರು, ಪ್ರಾದೇಶಿಕತೆ ಎಲ್ಲವನ್ನೂ ಮನಗೊಂಡು ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ವರದಿ ಸಲ್ಲಿಸಿತ್ತು. ಆಗ ಮತ್ತೆ ಮಹಾರಾಷ್ಟ್ರ ಕ್ಯಾತೆ ತೆಗಿಯಿತು ಎಂದರು.

ಮಹಾಜನ್ ವರದಿಯಿಂದ ದಕ್ಷಿಣ ಸೊಲ್ಲಾಪುರದ 65 ಹಳ್ಳಿಗಳು, ಅಕ್ಕಲಕೋಟೆ ತಾಲೂಕು, ಜತ್ತ ತಾಲೂಕಿನ 44 ಹಳ್ಳಿಗಳು, ಗಡಹಿಂಗ್ಲಜ ತಾಲೂಕಿನ 15 ಹಳ್ಳಿಗಳು, ಕೇರಳದ ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕೆಂದು ವರದಿ ನೀಡಿದೆ. ಮಹಾಜನ್ ವರದಿಯೇ ಅಂತಿಮ ಎಂದು ಕರ್ನಾಟಕ ಸರ್ಕಾರ ನಿರ್ಣಯವನ್ನೂ ತೆಗೆದುಕೊಂಡಿದೆ. ಆದರೆ ಇದನ್ನು ಒಪ್ಪದ ಮಹಾರಾಷ್ಟ್ರ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ.

We Will Not Let Any Part Of Karnataka Touch Land Said B K Hariprasad

2004 ರಲ್ಲಿ ಎಸ್ ಎಂ ಕೃಷ್ಣ ಸರ್ಕಾರ ಹೆಚ್.ಬಿ.ದಾತಾರ್ ನೇತೃತ್ವದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸಲಹಾ ಸಮಿತಿಯನ್ನ ಕೂಡ ರಚಿಸಿದೆ.ದಾತಾರ್ ನಿಧನದ ನಂತರ ನ್ಯಾಯಮೂರ್ತಿ ವಿ.ಎಸ್.ಮಳೀಮಠ ಅವರಿಗೆ ಸಮಿತಿಯ ಜವಾಬ್ದಾರಿ ನೀಡಿದೆ. ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ, ನ್ಯಾಯಮೂರ್ತಿ ಲೋಧಾ ಅವರು, ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಗಡಿ ಪ್ರದೇಶದಲ್ಲಿರುವ ಜನರ ಅಭಿಪ್ರಾಯ, ಅಹವಾಲು ಸ್ವೀಕರಿಸಲು ಹಾಗೂ ಎರಡೂ ಸರ್ಕಾರಗಳ ಬಳಿ ತಮ್ಮ ಪ್ರದೇಶವೆಂದು ಪ್ರತಿಪಾದಿಸಲು ಇರುವ ದಾಖಲೆ, ಸಾಕ್ಷ್ಯಗಳನ್ನ ಸಂಗ್ರಹಿಸಲು ನ್ಯಾ.ಮನೋಹರ್ ಸರೀನ್ ಅವರ ನೇತೃತ್ವದಲ್ಲಿ ಆಯೋಗವನ್ನ ರಚಿಸಿದೆ.

ಕಾನೂನು ಹೋರಾಟಗಳು ನಡೆಯುತ್ತಲೇ ಇದ್ದರೂ ಸಹ ಕೆಲವು ಪುಂಡರು, ಅಂಧಾಭಿಮಾನಿಗಳು ಕ್ಯಾತೆ ತೆಗೆಯುತ್ತಿದ್ದಾರೆ.‌ ಕರ್ನಾಟಕದ ಬಸ್ ಗಳಿಗೆ ಮಸಿ ಬಳಿಯುವುದು, ಜನರನ್ನ ಭಯಭೀತರನ್ನಾಗಿ ಮಾಡುವುದು ನಡೆಯುತ್ತಿದೆ. ಗಡಿಗಳಲ್ಲಿ ಉದ್ವೇಗದ ಪರಿಸ್ಥಿತಿ ಇದೆ. ಮೈಲುಗಟ್ಟಲೆ ಲಾರಿಗಳು, ಟ್ರಕ್ ಗಳು ನಿಲ್ಲುತ್ತವೆ. ಜನರ ಸಂಚಾರ ಅಸ್ತವ್ಯಸ್ತಗೊಂಡಿದೆ.

ಸರ್ಕಾರ ಇಂತಹ ಸಂದರ್ಭಗಳಲ್ಲಿ ಸರ್ವಪಕ್ಷಗಳ ಸಭೆ ನಡೆಸಿ, ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಶಿವಸೇನೆಯ ನಾಯಕರುಗಳು, ಮಹಾರಾಷ್ಟ್ರ ಸರ್ಕಾರದ ನಾಯಕರುಗಳು ಹೇಳಿಕೆಗಳು ಉದ್ಧಟತನದಿಂದ ಕೂಡಿದೆ. ಆದ್ರೆ ಬಸವರಾಜ್ ಬೊಮ್ಮಾಗಿ ಅವರು ಒಬ್ರೇ ಹೋಗಿ ಗೃಹ ಸಚಿವರನ್ನ ಭೇಟಿಯಾಗುವುದು, ಗಡಿ ವಿಷಯ ಮಾತಾಡುವುದು ಸರಿಯಲ್ಲ. ಎರಡೂ ಕಡೆ ಅವರದ್ದೇ ಸರ್ಕಾರ ಇದ್ರು ಗಡಿ ಸಮಸ್ಯೆ ಬಗೆಹರಿಸಲು ಸಮಸ್ಯೆ ಏನು? ಪ್ರಧಾನಿಗಳು ಯಾಕೆ ಮೌನವಾಗಿದ್ದಾರೆ. ಕರ್ನಾಟಕ ಕೇವಲ ಬಿಜೆಪಿಯವರ ಸ್ವತ್ತಲ್ಲ. ಆರು ಕೋಟಿ ಜನರ ಸ್ವತ್ತು. ಪ್ರತಿಪಕ್ಷಗಳನ್ನ ವಿಸ್ವಾಸಕ್ಕೆ ತೆಗೆದುಕೊಳ್ಳದೇ ನಿರ್ಧಾರ ಮಾಡುವುದು ಸರಿಯಲ್ಲ.

We Will Not Let Any Part Of Karnataka Touch Land Said B K Hariprasad

ಮಹಾರಾಷ್ಟ್ರದ ಒಬ್ಬ ಸಚಿವರು ಬೆಳಗಾವಿಯನ್ನ ಕೇಂದ್ರಾಡಳಿತ ಪ್ರದೇಶ ಆಗಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ಕೇಂದ್ರಾಡಳಿತ ಪ್ರದೇಶದ ಬಗ್ಗೆ ಮಾಹಿತಿಯೇ ಇಲ್ಲ. ಒಂದು ವೇಳೆ ನಿಜವಾಗಿಯೂ ಕೇಂದ್ರಾಡಳಿತ ಪ್ರದೇಶ ಆಗಬೇಕಿರೋದು ಮುಂಬೈ ಹೊರತು ಬೆಳಗಾವಿಯಲ್ಲ. ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿಯ ಒಂದೊಂದು ಜಿಲ್ಲೆಗಳು ಐದು ನೂರು ಕಿಲೋಮಿಟರ್ ಇದೆ. ಅದರ ಸುತ್ತಳತೆ ಬಗ್ಗೆ ತಿಳುವಳಿಕೆಯೇ ಇಲ್ಲದೆ ಹೇಳಿಕೆ ಕೊಟ್ಟಿದ್ದಾರೆ. ಮುಂಬೈ ಜಾಗತಿಕ ನಗರಿ ಕೇಂದ್ರಾಡಳಿತ ಪ್ರದೇಶಕ್ಕೆ ನಾವೆಲ್ಲ ಒತ್ತಾಯ ಮಾಡಬೇಕಿದೆ.

ಶಿವಸೇನ ಪುಂಡರಿಂದ ಮಹಾರಾಷ್ಟ್ರದಲ್ಲಿ ನಮ್ಮ ಜನರು ಸಾಕಷ್ಟು ಸಮಸ್ಯೆಗಳನ್ನ ಎದುರಿಸಿದ್ದಾರೆ. ಶಿವಸೇನೆಯ ಕಿರುಕುಳ ಅನುಭವಿಸಿದವರು ರಾಜ್ಯವನ್ನೇ ಬಿಟ್ಟು ಕರ್ನಾಟಕಕ್ಕೆ ಬಂದಿದ್ದಾರೆ. ಆಗ ನಾವೆಲ್ಲ ಅವರ ಜೊತೆಗೆ ನಿಂತಿರುವ ಕಾರಣಕ್ಕೆ ನಾನು ರಾಜಕೀಯ ಪ್ರವೇಶ ಮಾಡುವಂತಾಯಿತು. ಈಗ ಎಂಇಎಸ್ ಸಂಘಟನೆಗಳು ಪುಂಡಾಟಿಕೆ ನಡೆಸುತ್ತಿದೆ. ಗಡಿ ಭಾಗದ ಜನರನ್ನ ಕೇರಳಿಸುವಂತೆ ಮಾಡಲಾಗುತ್ತಿದೆ. ಗಡಿ ಭಾಗಗಳು ಉದ್ವಿಗ್ನ ಪರಸ್ಥಿತಿಯಲ್ಲಿದೆ.

ಮಹಾರಾಷ್ಟ್ರದ ಮಂತ್ರಿಗಳು ಜವಾಬ್ದಾರಿಯಿಂದ ಮಾತಾಡಬೇಕು. ನಮ್ಮಲ್ಲೂ ಅಂತಹ ಮಾತುಗಳು, ಶಕ್ತಿ ಇದೆ. ಆದರೆ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕಾದವರಿಗೆ ಘನತೆ, ಗೌರವದಿಂದ ವರ್ತಿಸಬೇಕು. ಬೆಳಗಾವಿ, ನಿಪ್ಪಾಣಿ ಹಾಗೂ ಕರ್ನಾಟಕದ ಯಾವುದೇ ಭಾಗದ ಕಿಂಚಿತ್ತು ಭೂಮಿಯನ್ನ ಮುಟ್ಟಲು ನಾವು ಬಿಡುವುದಿಲ್ಲ‌.ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕಿದೆ. ಭಾಷೆಗಳ ಮಧ್ಯೆ ಅಂತರಗಳನ್ನ ಸೃಷ್ಟಿಸಬಾರದು.

ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಜ್ಞಾನ ಪೀಠ ಪ್ರಶಸ್ತಿ ಪಡೆದುಕೊಂಡವರಿದ್ದಾರೆ, ತಜ್ಞರಿದ್ದಾರೆ. ಎಲ್ಲರನ್ನೂ ವಿಸ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕಿದೆ. ಇಂತಹ ವಿಷಯಗಳಲ್ಲಿ ನಾವೆಲ್ಲ ರಾಜಕೀಯ ಮರೆತು ಸಂದೇಶ ನೀಡಬೇಕಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+