ಲೋಕಸಮರಕ್ಕೆ ಕೈ ಪಡೆ ತಯಾರಿ; ಮತ್ತಷ್ಟು ಡಿಸಿಎಂಗಳ ನೇಮಕಕ್ಕೆ ಹೈಕಮಾಂಡ್‌ ಚಿಂತನೆ?: ಪರಮೇಶ್ವರ್‌ ಹೇಳಿದ್ದೇನು?

ಬೆಂಗಳೂರು, ಸೆಪ್ಟೆಂಬರ್‌ 01: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನವನ್ನ ಗೆಲ್ಲುವ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್‌, ಇದೀಗ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದ್ದು, ಮತ್ತಷ್ಟು ಡಿಸಿಎಂ ಗಳ ನೇಮಕಕ್ಕೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಈ ಕುರಿತು ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಮಾತನಾಡಿ, ನನಗೆ ಯಾವುದೂ ಗೊತ್ತಿಲ್ಲ, ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾಗಿದ್ದೇವೆ.
ಈಗ ಬಿಜೆಪಿಯವರೂ ನಮ್ಮಂತೆ ಆಗಿದ್ದಾರೆ, ದೆಹಲಿ ಕಡೆ ನೋಡುತ್ತಿದ್ದಾರೆ. ಉಪಮುಖ್ಯಮಂತ್ರಿಗಳ ನೇಮಕ ವಿಚಾರದಲ್ಲಿ ಹೈಕಮಾಂಡ್ ಆದೇಶಕ್ಕೆ ಬದ್ದ. ಪಕ್ಷದೊಳಗೆ ಈ ಬಗ್ಗೆ ಯಾವ ರೀತಿ ಚರ್ಚೆ ನಡೆದಿದೆ ಎಂದು ನನಗೆ ಗೊತ್ತಿಲ್ಲ ಎಂದು ಡಾ.ಜಿ ಪರಮೇಶ್ವರ್ ಹೇಳಿದರು.

We Are Bound By The Decision Of The High Command Says Dr G Parameshwara

ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರವಾಗಿ ಮಾತನಾಡಿ, ಗೊತ್ತಾಗುತ್ತದೆ ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಎಂದು ಸ್ವಲ್ಪ ದಿನದಲ್ಲಿ ಗೊತ್ತಾಗಲಿದೆ. ಸಂವಿಧಾನಾತ್ಮಕವಾಗಿ ವಿರೋಧ ಪಕ್ಷದ ನಾಯಕ ಇರಬೇಕು, ಅವರ ಪಕ್ಷದಲ್ಲಿ ಆಂತರಿಕ ವಿಚಾರ ಹೇಗಿದೆ ಎಂದು ಗೊತ್ತಾಗುತ್ತದೆ. ಕರ್ನಾಟಕದ ಇತಿಹಾಸದಲ್ಲಿ ಎಂದೂ ಈ ರೀತಿ ಆಗಿರಲಿಲ್ಲ ಎಂದು ಬಿಎಲ್ ಸಂತೋಷ್ ಗೆ ತಿರುಗೇಟು ನೀಡಿದರು.

ಒಂದು ನೇಷನ್, ಒನ್ ಎಲೆಕ್ಷನ್ ಚರ್ಚೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮೆಜಾರಿಟಿ ಇದೆ ಎಂದು ಏನೇನೋ ತೀರ್ಮಾನ ಮಾಡ್ತಿದ್ದಾರೆ. ಒಕ್ಕೂಟದ ವ್ಯವಸ್ಥೆಯನ್ನ ನೋಡಬೇಕಾಗುತ್ತದೆ. ಸ್ಟೇಟ್ ಹಾಗೂ ಸೆಂಟ್ರಲ್ ರಿಲೇಸನ್‌ಶಿಪ್ ಚೆನ್ನಾಗಿರಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಹಲವು ರಾಜ್ಯಗಳಲ್ಲಿ ಟೆಸ್ಟ್ ಕೂಡ ಆಗಿದೆ, ದೇಶ ಒಂದು ರಾಷ್ಟ್ರವಾಗಿ ಉಳಿಯಲು, ಚರ್ಚೆ ಮಾಡಿ, ಎಲ್ಲಾ ರಾಜ್ಯಗಳ ಸಲಹೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.

ಕಾವೇರಿ ನೀರಿನ ವಿಚಾರವಾಗಿ ಪ್ರತಿಭಟನೆ ಹಿನ್ನೆಲೆ ಹೆಚ್ಚು ಪೋಲೀಸ್ ನಿಯೋಜಿಸಲಾಗಿದೆ. ಅಹಿತಕರ ಘಟನೆ ನಡೆಯಂದಂತೆ ಸೂಚನೆ ಕೊಟ್ಟಿದ್ದೇನೆ, ಏನು ಕ್ರಮ ಬೇಕೋ ಅದನ್ನ ಇಲಾಖೆ ತಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಹ್ಯಾಕರ್ ಶ್ರೀಕಿ ವಿಚಾರಣೆ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾರನ್ನ ಕರೆಸಿ ವಿಚಾರಣೆ ಮಾಡಬೇಕು ಎಂಬುದು ತನಿಖಾಧಿಕಾರಿಗಳಿಗೆ ಬಿಟ್ಟದ್ದು, ಬೇಕಾದಾಗ ವಿಚಾರಣೆಗೆ ಕರೆಸಿ ಮಾಹಿತಿ ಪಡೆಯಲಾಗುತ್ತದೆ.

ಕೇಂದ್ರ ಸರ್ಕಾರದ ಸಿಲಿಂದರ್ ದರ ಇಳಿಕೆ ವಿಚಾರವಾಗಿ ಮಾತನಾಡಿ, ನಮ್ಮ ಭರವಸೆಗಳು ಸಕ್ಸಸ್ ಆಗ್ತಿದಂತೆ ನಮ್ಮ ದಾರಿಯನ್ನೇ ಅವರೂ ಹಿಡಿಯುತ್ತಿದ್ದಾರೆ. ನಮ್ಮ ಗ್ಯಾರಂಟಿಗಳು ಫೇಲ್ ಆಗುತ್ತವೆ ಅಂತ ಅಂದುಕೊಂಡಿದ್ದರು. ನಾವು ಮೊದಲೇ ಆಲೋಚನೆ ಮಾಡಿದ್ವಿ, ಯಾವ ಗ್ಯಾರಂಟಿಗಳಿಗೆ ಏನೇನು ಖರ್ಚು ವೆಚ್ಚಗಳು ಆಗುತ್ತವೆ ಎಂದು ಮೊದಲೇ ತಿಳಿದಿತ್ತು. ನಮ್ಮ ಹೈಕಮಾಂಡ್ ಗೂ ಮಾಹಿತಿ ಗೊತ್ತಿದೆ, ಹೀಗಾಗಿ ಗ್ಯಾರಂಟಿಗಳನ್ನ ಘೋಷಣೆ ಜಾರಿಗೊಳಿಸ್ತಿದ್ದೇ. ಈಗ ನಮ್ಮ ಗ್ಯಾರಂಟಿಗಳ ಸಕ್ಸಸ್ ನೋಡಿದ್ದಾರೆ, ಮುಂದೆ ನಾಲ್ಕು ರಾಜ್ಯಗಳ ಚುನಾವಣೆ ಇದೆ ಮುಂದೆ ಲೋಕಸಭೆ ಚುನಾವಣೆ ಕೂಡ ನಡೆಯಲಿದೆ, ಹೀಗಾಗಿ ನಮ್ಮ ದಾರಿಯನ್ನೇ ಅವರೂ ಹಿಡಿದಿದ್ದಾರೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+