ರಾಜಭವನ ತಲುಪಿದ ವಕ್ಫ್ ಮಂಡಳಿ ಆಸ್ತಿ ವಿವಾದ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 09 : ವಕ್ಫ್ ಮಂಡಳಿ ಆಸ್ತಿ ಕಬಳಿಕೆ ಆರೋಪ ರಾಜಭವನ ತಲುಪಿದೆ. ಅನ್ವರ್ ಮಾಣಿಪ್ಪಾಡಿ ವರದಿ ತಿರಸ್ಕರಿಸುವ ಸರ್ಕಾರ ನಿರ್ಧಾರದ ವಿರುದ್ಧ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ. ಆಸ್ತಿ ಕಬಳಿಕೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಮನವಿ ಮಾಡಿದೆ.

ಬುಧವಾರ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಈ ಕುರಿತು ದೂರು ನೀಡಿದೆ. 2 ಲಕ್ಷ ಕೋಟಿ ರೂ. ಮೊತ್ತದ ಆಸ್ತಿ ಕಬಳಿಕೆ ಆಗಿದೆ ಎಂಬ ಆರೋಪವಿದೆ. ಆದರೂ ಸರ್ಕಾರ ಸದನದಲ್ಲಿ ಪೂರ್ಣ ವರದಿಯನ್ನು ಮಂಡಿಸಿಲ್ಲ ಎಂದು ಬಿಜೆಪಿ ಆರೋಪಿಸಿದೆ. [ಭೂ ಹಗರಣ : ಸಚಿವ ಖಮರುಲ್ ಇಸ್ಲಾಂ ವಿರುದ್ಧ ತನಿಖೆ]

ks eshwarappa

ಕಳೆದ ವಾರ ನಡೆದ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ವರದಿಯನ್ನು ಸರ್ಕಾರ ಮಂಡಿಸಿತ್ತು. ವರದಿ ಮಂಡಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ ಇಸ್ಲಾಂ ಅವರು, 'ವರದಿಯ ವಿವರವಾದ ಪರಿಶೀಲನೆ ಬಳಿಕ ಅಂದಿನ ಅಧ್ಯಕ್ಷರು ಸಲ್ಲಿಸಿದ್ದ ವರದಿಯ ಶಿಫಾರಸುಗಳನ್ನು ಅಂಗೀಕರಿಸದಿರಲು ನಿರ್ಣಯಿಸಲಾಗಿದೆ' ಎಂದು ಘೋಷಿಸಿದ್ದರು. [ವಕ್ಫ್ ಆಸ್ತಿ 2.5 ಲಕ್ಷ ಕೋಟಿ ಹಂಚಲು ಆಗ್ರಹ]

ಏನಿದು ವಿವಾದ? : ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅನ್ವರ್ ಮಾಣಿಪ್ಪಾಡಿ ಅವರು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಒತ್ತುವರಿಯಾಗಿದೆ ಎಂದು 2012ರ ಮಾರ್ಚ್‌ 26ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಸುಮಾರು 2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಒತ್ತುವರಿಯಾಗಿದೆ. ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಕಾಂಗ್ರೆಸ್ ನಾಯಕರಾದ ಸಿ.ಕೆ.ಜಾಫರ್ ಷರೀಫ್, ರೋಷನ್ ಬೇಗ್, ಸಿ.ಎಂ.ಇಬ್ರಾಹಿಂ ಮುಂತಾದವರು ಹೆಸರು ಆಸ್ತಿ ಒತ್ತುವರಿ ಮಾಡಿಕೊಂಡವರ ಪಟ್ಟಿಯಲ್ಲಿತ್ತು.

ಆದರೆ, ಕಾಂಗ್ರೆಸ್ ಬಿಜೆಪಿ ಸರ್ಕಾರ ದುರುದ್ದೇಶದಿಂದ ಈ ವರದಿ ತಯಾರಿಸಿದೆ ಎಂದು ಹೇಳಿತ್ತು. ಕಾಂಗ್ರೆಸ್ ನಾಯಕರ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆಗಳಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿ ವರದಿಯನ್ನು ಸದನದಲ್ಲಿ ಮಂಡನೆ ಮಾಡಬೇಕು ಎಂದು ಒತ್ತಾಯಿಸಿತ್ತು.

ಶಿಫಾರಸು ತಿರಸ್ಕಾರ : ಸದನದಲ್ಲಿ ವರದಿ ಮಂಡನೆ ಮಾಡಿರುವ ಸರ್ಕಾರ ಅನ್ವರ್ ಮಾಣಿಪ್ಪಾಡಿ ಅವರು ಮಾಡಿರುವ ಶಿಫಾರಸುಗಳನ್ನು ತಿರಸ್ಕರಿಸಿದೆ. ವಕ್ಫ್ ಮಂಡಳಿ ಅಮಾನತ್ತಿನಲ್ಲಿಟ್ಟು ನ್ಯಾಯಮೂರ್ತಿಗಳಿಂದ ಹಗರಣದ ಬಗ್ಗೆ ತನಿಖೆ ನಡೆಸುವುದು, ವಕ್ಫ್ ಆಸ್ತಿಯ ಭೂಮಿ ಪರಿಶೋಧನೆ ಮಾಡಬೇಕು ಎಂಬುದು ಸೇರಿದಂತೆ ಹಲವು ಶಿಫಾರಸುಗಳನ್ನು ತಿರಸ್ಕಾರ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP on Wednesday complained to Governor Vajubhai Rudabhai Vala against the Wakf board land scam. BJP demanded for action against leaders who encroached Wakf board land. Karnataka government rejected recommendations of Anwar Manippady report on land scam.
Please Wait while comments are loading...