ರಾಜ್ಯದಲ್ಲಿ ಮಾಜಿ ಸಿಎಂಗಳ ಕೈ ಹಿಡಿದ ಮತದಾರ
ಕರ್ನಾಟಕದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೂರು ಜನ ಮಾಜಿ ಮುಖ್ಯಮಂತ್ರಿಗಳು ಅದೃಷ್ಟ ಪರೀಕ್ಷೆಯನ್ನು ನಡೆಸಿದ್ದರು. ಆರಂಭಿಕ ಟ್ರೆಂಡ್ ನೋಡಿದಾಗ ರಾಜ್ಯದ ಜನ ಮೂರು ಮುಖ್ಯಮಂತ್ರಿಗಳಿಗೆ ಮತ ಹಾಕಿದ್ದಾರೆ. ಈ ಮೂಲಕ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಈ ನಾಯಕರು ಸಫಲರಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎಚ್‌ಡಿ ಕುಮಾರ್‌ಸ್ವಾಮಿ ಅವರು ಭರ್ಜರಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಸನಿಹಕ್ಕೆ ಬಂದು ನಿಂತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ನಿರೀಕ್ಷೆಯಂತೆ ಭಾರಿ ಮುನ್ನಡೆ ಸಾಧಿಸಿದ್ದಾರೆ. ಸದ್ಯದ ಟ್ರೆಂಡ್ ನೋಡಿದರೆ ಕುಮಾರಸ್ವಾಮಿ ಗೆಲುವು ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಕುಮಾರಸ್ವಾಮಿ 158559 ಮತಗಳ ಅಂತರದಿಂದ ಸ್ಟಾರ್ ಚಂದ್ರು ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.

ಬೆಳಗಾವಿಯಲ್ಲಿ ಮುನ್ನಡೆ
ಇನ್ನು ಕಾಂಗ್ರೆಸ್ ಪಕ್ಷದಿಂದ ಮತ್ತೆ ಮನೆಗೆ ವಾಪಸ್ ಆಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿತು. ಸ್ಥಳಿಯರು ಹೊರಗಿನ ಕ್ಷೇತ್ರದ ಅಭ್ಯರ್ಥಿ ಎಂದು ಶೆಟ್ಟರ್ ಅವರನ್ನು ಆರಂಭದಲ್ಲಿ ಬಿಂಬಿಸಾಲಗಿತ್ತು. ಆದರೆ ಅವರ ಮೇಲಿನ ಟೀಕೆಗಳನ್ನೇಲ್ಲಾ ಶೆಟ್ಟರ್ ಮೆಟ್ಟಿನಿಂತು ಗ್ರೌಂಡ್ ಲೆವೆಲ್ ವರ್ಕ್ ಮಾಡಿದ್ದಾರೆ.
ಗೆಲುವಿನ ವಿಶ್ವಾಸವೇ ಕುಂದಿ ಹೋಗಿದ್ದ ಕ್ಷೇತ್ರದಲ್ಲಿ ಶೆಟ್ಟರ್ ಹಾಗೂ ಬಿಜೆಪಿ ಮಾಸ್ಟರ್ ಪ್ಲ್ಯಾನ್ ವರ್ಕ್ ಔಟ್ ಆಗಿದೆ. ಅಲ್ಲದೆ ಬೆಳಗಾವಿ ಲೋಕಸಭಾ ಕ್ಷೇತ್ರದ ಜನ ಶೆಟ್ಟರ್ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸದ್ಯದ ಮತಗಳಿಕೆಯಲ್ಲಿ ಜಗದೀಶ್ ಶೆಟ್ಟರ್ 43001 ಮತಗಳಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ವಿರುದ್ಧ ಕಾಯ್ದುಕೊಂಡಿದ್ದಾರೆ.
ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇವರು ಕಾಂಗ್ರೆಸ್‌ನ ಆನಂದ್‌ಸ್ವಾಮಿ ಗಡ್ಡದೇವರ್ ಮಠ ವಿರುದ್ಧ 17947 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಇದೇ ಟ್ರೆಂಡ್ ಮುಂದು ವರೆದಿದ್ದೇ ಆದಲ್ಲಿ ಬೊಮ್ಮಾಯಿ ಗೆಲ್ಲಬಹುದು.












Click it and Unblock the Notifications