ಏನಿಲ್ಲ.. ಏನಿಲ್ಲ ಅಲ್ಲ.. ನೀರಿಲ್ಲ.. ನೀರಿಲ್ಲ.. ಎಂದ ವಿಕಿಪೀಡಿಯ!

ಬೆಂಗಳೂರಲ್ಲಿ ನೀರಿಲ್ಲ, ಹನಿ ಹನಿ ನೀರಿಗೂ ಬೆಂಗಳೂರಿನ ಜನರು ಪರದಾಡುವ ಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಿದ್ದಾಗ 2000ರಿಂದ 3000 ರೂಪಾಯಿ ದುಡ್ಡು ಕೊಟ್ಟು ಜನಗಳು, ಟ್ಯಾಂಕರ್ ನೀರನ್ನ ತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲೇ 'ವಿಕಿಪೀಡಿಯ' ಕೂಡ ಬೆಂಗಳೂರಿನಲ್ಲಿ ನೀರಿಲ್ಲ ನೀರಿಲ್ಲ ಎನ್ನುತ್ತಿದೆ! ಯಾಕೆ ಗೊತ್ತಾ?

ಹೌದು, ಸೋಷಿಯಲ್ ಮೀಡಿಯಾದಲ್ಲಿ 'ವಿಕಿಪೀಡಿಯ' ಅಂತಲೇ ಫೇಮಸ್ ಆಗಿರುವ ವಿಕ್ಕಿ & ಟೀಂ ಇದೀಗ ಹೊಸ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ ಕುರಿತು ವಿವರಣೆ ನೀಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇಷ್ಟು ದಿನಗಳ ಕಾಲ 'ಏನಿಲ್ಲ ಏನಿಲ್ಲ.. ಕರಿಮಣಿ ಮಾಲೀಕ ನೀನಲ್ಲ' ಅಂತಿದ್ದ ಸೋಷಿಯಲ್ ಮೀಡಿಯಾ ಮಂದಿ, ಇದೀಗ 'ನೀರಿಲ್ಲ ನೀರಿಲ್ಲ ಬೆಂಗಳೂರಿನಲ್ಲಿ ನೀರಿಲ್ಲ' ಅಂತಿದ್ದಾರೆ. ಅದೇ ರೀತಿ, ಇದೀಗ ವಿಕಿಪೀಡಿಯ ಕೂಡ ಬೆಂಗಳೂರಿನಲ್ಲಿ ನೀರಿಲ್ಲ ಅಂತಿದೆ.

VickyPedia Team Created New Video About Bengaluru Water Problem

ನೀರಿನ ಹಾಡು ಫುಲ್ ವೈರಲ್!

ಈಗ ವಿಕ್ಕಿ & ತಂಡ ಮಾಡಿರುವ ನೀರಿಲ್ಲ.. ನೀರಿಲ್ಲ.. ಹಾಡು ಸೋಷಿಯಲ್ ಮೀಡಿಯಾ ತುಂಬಾ ವೈರಲ್ ಆಗುತ್ತಿದೆ. ಈ ಮೊದಲು ಕೂಡ ಕರಿಮಣಿ ಮಾಲೀಕ ಹಾಡಿಗೆ ಹೆಜ್ಜೆಯನ್ನ ಹಾಕಿದ್ದ ವಿಕ್ಕಿ & ಟೀಂ, ಇದೀಗ ಹೊಸ ವಿಡಿಯೋ ಮಾಡಿದೆ. ಈ ವಿಡಿಯೋ ಈಗ ಭಾರಿ ಸದ್ದು ಮಾಡುತ್ತಿದ್ದು. ಇನ್ನೂ ಮುಂದೆ ಹೋಗಿ ಬೆಂಗಳೂರಿನ ನೀರಿನ ಸಮಸ್ಯೆಯ ಕುರಿತು ಈ ಹಾಡಿನಲ್ಲಿ ವಿವರಣೆ ನೀಡಲಾಗಿದೆ. ಹಾಗೇ ಜನರ ಬವಣೆ ಏನು? ಅನ್ನೋದನ್ನ ಕೂಡ ಇಲ್ಲಿ ವಿವರಿಸಲಾಗಿದೆ.

ಕರ್ನಾಟಕ ಈ ಬಾರಿ ಭೀಕರ ನೀರಿನ ಬರ ಎದುರಿಸಿದೆ. ಅದ್ರಲ್ಲೂ ಕನ್ನಡಿಗರ ರಾಜಧಾನಿಯಾದ ಬೆಂಗಳೂರಲ್ಲಿ ಹನಿ ಹನಿ ನೀರಿಗೂ ಬರ ಎದುರಾಗಿದೆ. ಹೀಗಿದ್ದಾಗ ಜನರು ಪ್ರತಿನಿತ್ಯವೂ ನೀರು ಹಿಡಿಯಲು ಪರದಾಡ್ತಿದ್ದಾರೆ. ಬಹುತೇಕ ಪ್ರದೇಶದಲ್ಲಿ ಟ್ಯಾಂಕರ್ ನೀರಿಗೆ ಜನ, ಮುಗಿಬೀಳುವ ಪರಿಸ್ಥಿತಿ ಇದೆ. ಸರ್ಕಾರ ಕೂಡ ಮಧ್ಯಪ್ರವೇಶ ಮಾಡಿ ಟ್ಯಾಂಕರ್ ಮಾಫಿಯಾಗೆ ಬ್ರೇಕ್ ಅನ್ನ ಹಾಕಿದೆ. ಆದರೂ ಇನ್ನೂ ನೀರಿನ ಟ್ಯಾಂಕರ್ ಮಾಲೀಕರು ದಾರಿಗೆ ಬಂದಂತೆ ಕಾಣ್ತಿಲ್ಲ.

ಏನಿದು ಮನುಷ್ಯನ ಪರಿಸ್ಥಿತಿ?

ಮನುಷ್ಯನ ಅತಿಯಾದ ದುರಾಸೆ & ಪ್ರಕೃತಿ ಮೇಲೆ ಅತಿಯಾದ ಒತ್ತಡ ಹಾಕುತ್ತಿರುವ ಪರಿಣಾಮ ವಾತಾವರಣದಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಗಿದೆ. ಅದ್ರಲ್ಲೂ ಮಳೆ ವಿಚಾರ ಗೊಂದಲ ಸೃಷ್ಟಿ ಮಾಡುತ್ತಿದ್ದು ಮಳೆ ಬರಬೇಕಾದ ವೇಳೆ ಸರಿಯಾಗಿ ಮಳೆಯೇ ಬರ್ತಿಲ್ಲ. ಮಳೆಗಾಲದ ಹೊರತು ಬೇರೆ ಸಮಯದಲ್ಲಿ ಹೆಚ್ಚು ಮಳೆ ಬೀಳುತ್ತಿದೆ. ಆದರೂ ಕರ್ನಾಟಕದಲ್ಲಿ ಈವರೆಗೂ ಮಳೆಯ ಮುನ್ಸೂಚನೆ ಸಿಕ್ಕಿದೆ.

VickyPedia Team Created New Video About Bengaluru Water Problem

ಕುಡಿಯುವ ನೀರಿಗೂ ತೀವ್ರ ಬರ

ಈಗಿನ ಪರಿಸ್ಥಿತಿ ನೋಡಿದರೆ ಕೆಲವು ದಿನಗಳಲ್ಲಿ ಉತ್ತಮವಾಗಿ ಮಳೆ ಆಗದೇ ಇದರೆ, ರಾಜ್ಯದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕು ಅಂಥ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಅದ್ರಲ್ಲೂ ರಾಜಧಾನಿ ಬೆಂಗಳೂರಲ್ಲಿ ಈ ಬಾರಿ ಕುಡಿಯುವ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಈ ಕಾರಣಕ್ಕೆ ಮಂಡ್ಯ ಮತ್ತು ಮೈಸೂರು ಭಾಗದ ರೈತರು ಚಿಂತೆ ಮಾಡ್ತಿದ್ದಾರೆ. ಮತ್ತೆ ಕಾವೇರಿ ನೀರಿಗೆ ಕಿತ್ತಾಟ ಶುರುವಾಗುವ ಆತಂಕ ಕೂಡ ಆವರಿಸಿದೆ. ಇದು ಕೆಆರ್‌ಎಸ್ ಪರಿಸ್ಥಿತಿ ಮಾತ್ರವಲ್ಲ ರಾಜ್ಯದ ಬಹುತೇಕ ಡ್ಯಾಂಗಳಲ್ಲಿ ಸ್ಥಿತಿಯೂ ಇದೇ ರೀತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+