Vande bharat express: ಮಂಗಳೂರಿನಿಂದ ಹೊರಡಲಿದೆ 'ವಿಬಿ' ರೈಲು, ಕರ್ನಾಟಕಕ್ಕೆ 5ನೇ 'ವಿಬಿ' ರೈಲು
ಬೆಂಗಳೂರು, ಡಿಸೆಂಬರ್ 26: ದೇಶದಲ್ಲಿ ವಿವಿಧ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು (Vande Bharat Express Train ) ಇದೇ ಡಿಸೆಂಬರ್ 30ರಿಂದ ಕಾರ್ಯಾಚರಣೆ ಆರಂಭಿಸಲಿವೆ. ಈ ಸಂಬಂಧ ಕ್ರಿಸ್ಮಸ್ ದಿನವೇ ಮಂಗಳೂರಿಗೆ ಆಗಮಿಸಿದ್ದು, ಇಂದಿನಿಂದ ಮೂರು ದಿನ ಪ್ರಾಯೋಗಿಕ ಸಂಚಾರ ನಡೆಸಲಿದೆ.
ಹೌದು, ಕರ್ನಾಟಕ ಕರಾವಳಿ ಭಾಗ ದೊಡ್ಡ ನಗರವಾದ ಮಂಗಳೂರು ಸೆಂಟ್ರಲ್‌ನಿಂದ ಮಡಗಾಂವ್ ಗೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಪ್ರಾಯೋಗಿಕ ಓಡಾಟ ಆರಂಭಿಸಿದೆ. ಇಂದು ಬೆಳಗ್ಗೆ ಬೆಳಗ್ಗೆ 8.30 ಗಂಟೆಗೆ ಹೊರಟ ಮಂಗಳೂರು ಸೆಂಟ್ರಲ್‌ನಿಂದ ಡಲಿದ್ದು, ಹಿಂದಿರುಗುವ ಪ್ರಯಾಣದಲ್ಲಿ ಅದು ಮಧ್ಯಾಹ್ನ 1.45 ಕ್ಕೆ ಮಡಗಾಂವ್‌ನಿಂದ ಮಂಗಳೂರಿಗೆ ಹೊರಡಲಿದೆ.

ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಐದು ಇತರ ಸೇವೆಗಳೊಂದಿಗೆ ದೂರದ ಸ್ಥಳದಿಂದ ನಿಯಮಿತ ಸೇವೆಯನ್ನು ಫ್ಲ್ಯಾಗ್ ಆಫ್ ಮಾಡುವ ನಿರೀಕ್ಷೆಯಿದೆ.
320 ಕಿಮೀ ಮಾರ್ಗದಲ್ಲಿ 'ವಿಬಿ' ಸಂಚಾರ
ರೈಲ್ವೆ ಇಲಾಖೆ ಈ ಬಗ್ಗೆ ಇನ್ನೂ ತಾತ್ಕಾಲಿಕ ವೇಳಾಪಟ್ಟಿ ದೃಢೀಕರಿಸಿಲ್ಲ. ಮೂಲಗಳ ಪ್ರಕಾರ ಈ ವಂದೇ ಭಾರತ್ ರೈಲು ಸೇವೆಯು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 8.30ಕ್ಕೆ ಹೊರಟು ಸುಮಾರು 320 ಕಿಮೀ ದೂರದಲ್ಲಿರುವ ಮಡಗಾಂವ್ ಅನ್ನು ಮಧ್ಯಾಹ್ನ 1.05ಗಂಟೆಗೆ ತಲುಪಲಿದೆ.

ಈ ಎಕ್ಸ್‌ಪ್ರೆಸ್ ರೈಲು ಉಡುಪಿ ಮತ್ತು ಕಾರವಾರದಲ್ಲಿ ವಾಣಿಜ್ಯ ನಿಲುಗಡೆಗಳನ್ನು ಹೊಂದಿದೆ. ಹಿಂದಿರುಗುವ ಪ್ರಯಾಣದಲ್ಲಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಮಡಗಾಂವ್‌ನಿಂದ ಸಂಜೆ 6.10 ಗಂಟೆಗೆ ಹೊರುಡುತ್ತದೆ. 10.45ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕಕ್ಕೆ 5ನೇ ವಂದೇ ಭಾರತ್ ರೈಲು
ಬೆಂಗಳೂರು-ಕೊಯಿಮತ್ತೂರು ಮಾರ್ಗದಲ್ಲಿ ಕರ್ನಾಟಕದಲ್ಲಿ ಐದನೇ ವಂದೇ ಭಾರತ್ ರೈಲು ಇದೇ ಡಿಸೆಂಬರ್ 30ರಿಂದ ಕಾರ್ಯಾರಂಭಗೊಳ್ಳಲಿದೆ. ಈ ಮೂಲಕ ಕರ್ನಾಟಕದಲ್ಲಿ ಒಟ್ಟು ಐದು ರೈಲುಗಳು ಸಂಚಾರ ಸೇವೆ ನೀಡಿದಂತಾಗುತ್ತದೆ.
ಕೇಂದ್ರ ಸಚಿವ ಎಲ್ ಮುರುಗನ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಕೊಯಿಮತ್ತೂರು- ಪೋಲಾಚಿ ಮಧ್ಯೆ ಕಾಯ್ದಿರಿಸಿ ರೈಲು ಸೇವೆ ಆರಂಭವಾದ ನಂತರ ಕೋಯಿಮತ್ತೂರು- ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವುದಾಗಿ ಸಚಿವರು ಮಾಹಿತಿ ನೀಡಿದರು. ಈಗಾಗಲೇ ಈ ರೈಲು ಜನವರಿ 3ರಿಂದ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ ಮೂಲಗಳೂ ತಿಳಿಸಿವೆ.












Click it and Unblock the Notifications