ಧರ್ಮಸ್ಥಳ 'ಸಾಮೂಹಿಕ ಸಮಾಧಿ' ಶೋಧಕಾರ್ಯದಲ್ಲಿ ಈ ವರೆಗೆ ಸಿಕ್ಕಿದ್ದೇನು? ಬಹಿರಂಗಗೊಳ್ಳುವುದೇ ನಿಗೂಢ ಸತ್ಯ?
Dharmasthala Mass Burial Case: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ 'ಸಾಮೂಹಿಕ ಸಮಾಧಿ' ಪ್ರಕರಣವು ದೇಶದಾದ್ಯಂತ ತಲ್ಲಣವನ್ನೇ ಸೃಷ್ಟಿಸಿದೆ. 1995 ಮತ್ತು 2014 ರ ನಡುವೆ ಪೌರಕಾರ್ಮಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ, ತನ್ನ ಕೈಯಾರೆ ಸಾಮೂಹಿಕ ಸಮಾಧಿ ಮಾಡಿರುವುದಾಗಿ ಆರೋಪಿಸಿದ್ದಾನೆ. ನೇತ್ರಾವತಿ ನದಿ ಮತ್ತು ಪಕ್ಕದ ಅರಣ್ಯದ ಬಳಿ ಹತ್ತಾರು ಶವಗಳನ್ನು ಹೂಳಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಎಸ್‌ಐಟಿ ತಂಡವನ್ನು ರಚನೆ ಮಾಡಿದೆ.
ವ್ಯಕ್ತಿ ಆರೋಪಿಸಿದಂತೆ 13 ಸೈಟ್‌ಗಳನ್ನು ( ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಜಾಗಗಳು ) ಗುರುತಿಸಿರುವ ಪೊಲೀಸರು ಈಗಾಗಲೇ 8 ಸೈಟ್‌ಗಳಲ್ಲಿ ಶೋಧ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಮೊದಲ ಐದು ಸೈಟ್‌ಗಳಲ್ಲಿ ಮನುಷ್ಯರ ಯಾವುದೇ ಅವಶೇಷಗಳು ದೊರೆತಿರಲಿಲ್ಲ. ಆದರೆ, ಆರನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ಇದು ಪ್ರಕರಣಕ್ಕೆ ಹೊಸ ತಿರುವನ್ನು ನೀಡಿದೆ.

ಆರನೇ ಸೈಟ್‌ನಲ್ಲಿ ಸಿಕ್ಕಿದ್ದೇನು?
ಆರನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಪತ್ತೆಯಾಗಿದೆ. ಸುಮಾರು 15 ತುಣುಕುಗಳಲ್ಲಿ ಮೂಳೆಗಳು ದೊರೆತಿವೆ. ಸಂಪೂರ್ಣ ಅಸ್ಥಿಪಂಜರ ಹಾಗೂ ತಲೆಬುರುಡೆ ಸಿಕ್ಕಿಲ್ಲವೆಂಬ ಮಾಹಿತಿ ಲಭ್ಯವಾಗಿದೆ. ಈ ಅಸ್ಥಿಪಂಜರದ ಅವಶೇಷಗಳನ್ನು ಶವಪರೀಕ್ಷೆ ಹಾಗೂ ಡಿಎನ್ಎ ಪರೀಕ್ಷೆ ಸೇರಿದಂತೆ ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಪೌರಕಾರ್ಮಿಕನ ಆರೋಪಗಳೇನು?
ಧರ್ಮಸ್ಥಳದಲ್ಲಿ ಸೂಮಾರು ಎರಡು ದಶಕಗಳ ಕಾಲ ಕೆಲಸ ಮಾಡಿರುವ ಪೌರಕಾರ್ಮಿಕನು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾನು ಹೂತು ಹಾಕಿರುವ ಹೆಚ್ಚಿನ ಶವಗಳು ಮಹಿಳೆಯರು ಹಾಗೂ ಬಾಲಕಿಯರದ್ದಾಗಿವೆ ಎಂದು ಹೇಳಿದ್ದಾನೆ. ಈ ಶವಗಳು ಲೈಂಗಿಕ ಹಿಂಸೆ ಮತ್ತು ಕತ್ತು ಹಿಸುಕಿದ ಲಕ್ಷಣಗಳನ್ನು ಹೊಂದಿದ್ದವು ಎಂಬ ಸ್ಪೋಟಕ ವಿಚಾರವನ್ನು ಆತ ಬಹಿರಂಗಪಡಿಸಿದ್ದಾನೆ.
ಹೋರಾಟಗಾರರು, ಸಾರ್ವಜನಿಕರ ಆಕ್ರೋಶ
ಮಾಜಿ ಪೌರಕಾರ್ಮಿಕನ ಆರೋಪಗಳು ಬಹಿರಂಗಗೊಂಡ ಬಳಿಕ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಶಕಗಳಿಂದ ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾದ ಕೃತ್ಯಗಳ ತನಿಖೆಯಾಗಬೇಕೆಂದು ಒತ್ತಾಯಿಸಲಾಯಿತು.
ಈ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಜುಲೈ 19ರಂದು ವಿಶೇಷ ತನಿಖಾ ತಂಡವನ್ನು ರಚಿಸಿತು. ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ತನಿಖೆಯನ್ನು ಆರಂಭಿಸಿತು. ಜುಲೈ 27ರಿಂದ ತನಿಖೆಯನ್ನು ಆರಂಭಿಸಲಾಗಿದೆ. ಈ ವರೆಗೆ ( ಆಗಷ್ಟ್ 02 ) ರ ವರೆಗೆ ಎಂಟು ಸೈಟುಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆರನೇ ಸೈಟ್‌ನಲ್ಲಿ ಸಿಕ್ಕ ಮೂಳೆಗಳನ್ನು ಬಿಟ್ಟರೆ, ಉಳಿದವುಗಳಲ್ಲಿ ಯಾವುದೇ ಅವಶೇಷಗಳು ದೊರೆತಿಲ್ಲವೆಂದು ಹೇಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ಹತ್ಯೆ, ಲೈಂಗಿಕ ದೌರ್ಜನ್ಯದ ಆರೋಪ: ಹಿನ್ನೆಲೆ ಏನು?
1980 ರ ದಶಕದಿಂದ ಧರ್ಮಸ್ಥಳದ ಸುತ್ತಮುತ್ತ ಹಲವಾರು ಲೈಂಗಿಕ ದೌರ್ಜನ್ಯ, ಹತ್ಯೆ ಮತ್ತು ಸಾಮೂಹಿಕ ಸಮಾಧಿಯಂತಹ ಕೃತ್ಯಗಳು ನಡೆಯುತ್ತಲೇ ಬಂದಿವೆ ಎಂಬ ಆರೋಪಗಳು ದಶಕದಿಂದಲೂ ಕೇಳಿಬಂದಿದೆ. ಈ ಆರೋಪಗಳನ್ನು ಪ್ರಾದೇಶಿಕ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಮರೆಮಾಚುವ ಯತ್ನಗಳನ್ನು ಮಾಡಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಹೋರಾಟಗಾರರು ಪ್ರತಿಭಟನೆಗಳನ್ನು ನಡೆಸುತ್ತಲೇ ಬಂದಿದ್ದರು. ನಿಗೂಢ ಪ್ರಕರಣಗಳ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದರು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications