Hassan JDS Ticket: ಮಾತು ಉಳಿಸಿಕೊಂಡ ಎಚ್ಡಿಕೆ; ಹಾಸನಕ್ಕೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟ ದಳಪತಿ ಯಾರು ಆ ಅಭ್ಯರ್ಥಿ?
ಬೆಂಗಳೂರು,ಏಪ್ರಿಲ್14: ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದ ದಳಪತಿಗಳು ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಹಾಸನ ಕ್ಷೇತ್ರವೇ ದೊಡ್ಡ ತಲೆನೋವಾಗಿತ್ತು.
ಮೊದಲ ಪಟ್ಟಿಯನ್ನ ಯಾವುದೇ ಗೊಂದಲವಿಲ್ಲದೆ ಬಿಡುಗಡೆ ಮಾಡಿದ್ದ ಜೆಡಿಎಸ್ ನಾಯಕರಿಗೆ ದೊಡ್ಡ ಕಗ್ಗಂಟಾಗಿದ್ದು ಹಾಸನ ವಿಧಾನಸಭಾ ಕ್ಷೇತ್ರ. ಈಗಾಗಲೇ ಹಾಸನ ವಿಧಾನಸಭಾ ಕ್ಷೇತ್ರದ ಕುರಿತು ದೇವೇಗೌಡ್ರು ಚುನಾವಣಾ ಅಖಾಡಕ್ಕೆ ಎಂಟ್ರು ಕೊಟ್ಟಿದ್ದು, ಹಾಸನ ಟಿಕೆಟ್ ಗಾಗಿ ಸ್ವರೂಪ್ ಪ್ರಕಾಶಸ್ ಹಾಗೂ ಭವಾನಿ ರೇವಣ್ಣ ರ ನಡುವೆ ಬಾರೀ ಪೈಪೋಟಿ ಏರ್ಪಟ್ಟಿತ್ತು.

ಇನ್ನೂ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಸಾಕಷ್ಟು ಚರ್ಚೆಗಳು ನಡೆದಿದ್ದು, ದೇವೇಗೌಡ ಕುಟುಂಬದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು. ಅಲ್ಲದೇ ಹಾಸನ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದು ಹಲವು ಬಾರಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನ ನೀಡಿದ್ದು, ಕುಟುಂಬದವರ ಮಾತಿಗೆ ಮಣೆ ಹಾಕದೇ ಕೊಟ್ಟ ಮಾತನ್ನ ಕುಮಾರಸ್ವಾಮಿ ಕೊನೆಗೂ ಉಳಿಸಿಕೊಂಡಿದ್ದಾರೆ.
ಹೌದು, ಹಾಸನಕ್ಕೆ ಸಾಮಾನ್ಯ ಕಾರ್ಯಕರ್ತನಿಕೆ ಟಿಕೆಟ್ ಎಂದಿದ್ದ ಕುಮಾರಸ್ವಾಮಿ ಅವರು ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಿ, ಜೆಡಿಎಸ್ ಎರಡನೇ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸ್ವರೂಪ್ ಪ್ರಕಾಶ್ ಗೆ ಟಿಕೆಟ್ ನೀಡಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿಯ ಮೂಲಕ ಘೋಷಿಸಿದ್ದಾರೆ.
ಇನ್ನೂ ಹಾಸನ ಅಭ್ಯರ್ಥಿಯಾಗಿ ಸ್ವರೂಪ್ ಗೆ ಟಿಕೆಟ್ ಕೊಟ್ಟ ಹಿನ್ನಲೆ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇತ್ತ ಹಾಸನ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಮಿಸ್ ಆಗಿದೆ.
ಜೆಡಿಎಸ್ ಎರಡನೇ ಪಟ್ಟಿಯಲ್ಲಿನ ಅಭ್ಯರ್ಥಿಗಳು.
ಹಾಸನ ಕ್ಷೇತ್ರ: ಹೆಚ್ಪಿ ಸ್ವರೂಪ್
ಕುಡಚಿ ಕ್ಷೇತ್ರ: ಆನಂದ ಮಾಳಗಿ
ಸವದತ್ತಿ ಯಲ್ಲಮ್ಮ: ಸೌರಬ್ ಆನಂದ್ ಚೋಪ್ರಾ
ಆಥಣಿ: ಶಶಿಕಾಂತ್ ಪಡಸಲಗಿ
ಯಲ್ಲಾಪುರ: ಡಾ.ನಾಗೇಶ್ ನಾಯ್ಕ್
ಗುಂಡ್ಲುಪೇಟೆ: ಕಡಬೂರು ಮಂಜುನಾಥ್
ಯಲಹಂಕ: ಮುನೇಗೌಡ
ಯಶವಂತಪುರ: ಜವರಾಯಿಗೌಡ
ತಿಪಟೂರು: ಶಾಂತಕುಮಾರ್
ಶಿರಾ: ಆರ್.ಉಗ್ರೇಶ್
ಹಾನಗಲ್: ಮನೋಹರ ತಹಶೀಲ್ದಾರ್
ಸಿಂದಗಿ: ವಿಶಾಲಾಕ್ಷಿ ಶಿವಾನಂದ್
ಗಂಗಾವತಿ: ಹೆಚ್.ಆರ್.ಚನ್ನಕೇಶವ
ಜೇವರ್ಗಿ: ದೊಡ್ಡಪ್ಪಗೌಡ
ಶಹಾಪುರ: ಗುರುಲಿಂಗಪ್ಪಗೌಡ
ಕಡೂರು: ವೈಎಸ್ವಿ ದತ್ತಾ
ಹೊಳೆನರಸೀಪುರ: ಹೆಚ್.ಡಿ.ರೇವಣ್ಣ
ಸಕಲೇಶಪುರ: ಹೆಚ್.ಕೆ.ಕುಮಾರಸ್ವಾಮಿ
ಅರಕಲಗೂಡು: ಎ.ಮಂಜು
ಶ್ರವಣಬೆಳಗೊಳ: ಬಾಲಕೃಷ್ಣ
ಮಹಾಲಕ್ಷ್ಮೀ ಲೇಔಟ್: ರಾಜಣ್ಣ
ಮಾಯಕೊಂಡ: ಆನಂದಪ್ಪ
ಹುಬ್ಬಳ್ಳಿ ಪೂರ್ವ: ವೀರಭದ್ರಪ್ಪಯ್ಯ
ಕುಮಟ: ಸೂರಜ್ ಸೋನಿ ನಾಯಕ್
ಹಳಿಯಾಳ: ಎಸ್ ಎಲ್ ಘೋಟ್ನೆಸ್ಕರ್
ಭಟ್ಕಳ: ನಾಗೇಂದ್ರ ನಾಯಕ್
ಶಿರಸಿ: ಉಪೇಂದ್ರ ಪೈ
ಕಾರವಾರ: ಚೈತ್ರಾ ಕೋಟಾಕರ್
ಪುತ್ತೂರು: ದಿವ್ಯಾ ಪ್ರಭ
ಅರಕಲಗೂಡು: ಎ ಮಂಜು
ಮಹಾಲಕ್ಷ್ಮಿ ಲೇಔಟ್: ರಾಜಣ್ಣ
ಚಿತ್ತಪುರ: ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್
ಕಲಬುರಗಿ ಉತ್ತರ: ನಾಸೀರ್ ಹುಸೇನ್
ಬಳ್ಳಾರಿ: ಅಲ್ಲಬಕ್ಸ್ ಮುನ್ನ
ಹರಪ್ಪನ ಹಳ್ಳಿ: ನೂರ್ ಅಹಮದ್
ಕೊಳ್ಳೆಗಾಲ: ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ
ಗುಂಡ್ಲುಪೇಟೆ: ಕಡಬುರು ಮಂಜುನಾಥ್
ಕಾರ್ಕಳ: ಶ್ರೀಕಾಂತ್ ಕೊಚ್ಚುರ್
ಉಡುಪಿ: ದಕ್ಷತ್ವ ಆರ್ ಶೆಟ್ಟಿ
ಕುಂದಾಪುರ: ರಮೇಶ್ ಕುಂದಾಪುರ
ಕನಕಪುರ: ನಾಗರಾಜ್
ಯಲಹಂಕ: ಮುನೇಗೌಡ
ಯಶವಂತಪುರ: ಜವರಾಯಿಗೌಡ
ತಿಪಟೂರು: ಶಾಂತ ಕುಮಾರ್
ಶಿರಾ: ಆರ್ ಉಗ್ರೇಶ್
ಹಾನಗಲ್: ನೋಹರ್ ತಹಶಿಲ್ದಾರ್
ಸಿಂದಗಿ: ವಿಶಾಲಕ್ಷಿ ಶಿವಾನಂದ್
ಹೆಚ್ ಡಿ ಕೋಟೆ: ಜಯಪ್ರಕಾಶ್











Click it and Unblock the Notifications