Karnataka Election: ಮೂರರಿಂದ ನಾಲ್ಕು ಲಕ್ಷ ಮತದಾರರು ಇರುವ ರಾಜ್ಯದ ನಾಲ್ಕು ಕ್ಷೇತ್ರಗಳು
ಬೆಂಗಳೂರು, ಮೇ 09: ಕರ್ನಾಟಕದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ಬುಧವಾರ ಮೇ 10ರಂದು ನಡೆಯಲಿರುವ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಬೆಂಗಳೂರು ವ್ಯಾಪ್ತಿಯ ಈ ನಾಲ್ಕು ಕ್ಷೇತ್ರಗಳಲ್ಲಿ ಮೂರರಿಂದ ನಾಲ್ಕು ಲಕ್ಷ ಮತದಾರರು ಇದ್ದಾರೆ. ಹಾಗಾದರೆ ಆ ನಾಲ್ಕು ಕ್ಷೇತ್ರಗಳು ಯಾವವು?. ಅಲ್ಲಿ ಎಷ್ಟು ಜನ ಮತದಾರರಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರು ನಗರ ವ್ಯಾಪ್ತಿಯೊಂದರಲ್ಲೇ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ವಿಜಯನಗರ ವಿಧಾನಸಭಾ ಕ್ಷೇತ್ರ, ಯಲಹಂಕ, ಸರ್ವಜ್ಞನಗರ ಮತ್ತು ಆನೇಕಲ್ ಕ್ಷೇತ್ರದಲ್ಲಿ ಮಹಿಳೆ, ಪುರುಷರು ಮತ್ತು ಇತರೆ ಸೇರಿ ಮೂರರಿಂದ ನಾಲ್ಕು ಲಕ್ಷ ಮತದಾರರು ಇದ್ದಾರೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,74,036 ಮತದಾರರು ಇದ್ದಾರೆ. ಇದರಲ್ಲಿ ಪುರಷರು 1,92,854 ಮತದಾರರು, 1,81, 133 ಮಂದಿ ಮಹಿಳಾ ಮತದಾರರು ಹಾಗೂ 49 ಜನ ಇತರೆ ಮಾತದಾರರು ಇದ್ದಾರೆ ಎಂದು ರಾಜ್ಯ ಚುನಾವಣೆ ಆಯೋಗ ತಿಳಿಸಿದೆ.
ಸರ್ವಜ್ಞನಗರ ಮತದಾರರ ಸಂಖ್ಯೆ
ಇನ್ನೂ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷರು 1,69,700 ಮತ್ತು ಮಹಿಳಾ ಮತದಾರರು 1,64,734 ಹಾಗೂ 39 ಮಂದಿ ಇತರೆ ಮತದಾರರು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 3,34,473 ಮತದಾರರು ಇದ್ದಾರೆ.
ಅದೇ ರೀತಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪುರಷ ಮತದಾರರು ಸಂಖ್ಯೆ 1,65,155, ಮಹಿಳಾ ಮತದಾರರ ಸಂಖ್ಯೆ 1,45,101 ಹಾಗೂ ಇತರೆ 136 ಮಂದಿ ಮತದಾರರು ಸೇರಿದಂತೆ ಒಟ್ಟು ಈ ಕ್ಷೇತ್ರದಲ್ಲಿ 3,05,392 ಮಂದಿ ಈ ಭಾರಿ ಮತದಾನ ಮಾಡುವವರಿದ್ದಾರೆ.

ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3,48,106 ಮಂದಿ ನಾಳೆ ಮತದಾನ ಮಾಡಲಿದ್ದಾರೆ. ಈ ಪೈಕಿ ಪುರುಷರ ಸಂಖ್ಯೆ 1,84,799 ಇದ್ದರೆ ಮಹಿಳಾ ಮತದಾರರು 1,63,228 ಜನ ಇದ್ದಾರೆ. ಉಳದಂತೆ 79 ಮಂದಿ ಇತರೆ ಮತದಾರರು ನಾಳೆ ಮೇ 10 ಬುಧವಾರ ಮತದಾನ ಮಾಡಲಿದ್ದಾರೆ.
ಬುಧವಾರ ಮೇ 10ರಂದು ಕರ್ನಾಟಕ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಶನಿವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ.












Click it and Unblock the Notifications