Government Employee: ಸರ್ಕಾರಿ ನೌಕರರ ವಿರುದ್ಧ ದೂರು, ಮೂರು ಹಂತಗಳೇನು?

ಬೆಂಗಳೂರು, ಅಕ್ಟೋಬರ್ 09: ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸಲ್ಲಿಕೆಯಾಗುವ ದೂರುಗಳನ್ನು ಇತ್ಯರ್ಥಪಡಿಸಲು ಕಾಲಮಿತಿ ನಿಗದಿ ಮಾಡಲಾಗಿದೆ. ಒಟ್ಟು 90 ದಿನಗಳಲ್ಲಿ ಈ ದೂರುಗಳು ಇತ್ಯರ್ಥವಾಗಬೇಕಿದೆ. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ಅನ್ವಯ ದೂರುಗಳನ್ನು ಪರಿಶೀಲಿಸಿ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಅಪರ ಆಯುಕ್ತರಾದ ಡಾ. ಆಕಾಶ್ ಎಸ್. ಸುತ್ತೋಲೆಯನ್ನು ಹೊರಡಿಸಿದ್ದಾರೆ. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ಅನ್ವಯ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿದ್ದಾರೆ. ಇವುಗಳಲ್ಲಿ ಮೊದಲ ಮೂರು ಹಂತಗಳ ಮಾಹಿತಿ ಇಲ್ಲಿದೆ.

Three Steps To Effectively Resolve Complaints Against Government Officials

ಸಾರ್ವಜನಿಕರಿಂದ, ಜನಪ್ರತಿನಿಧಿಗಳಿಂದ ಅಥವಾ ಸಂಘ-ಸಂಸ್ಥೆಗಳಿಂದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ನಿಯಮಗಳಡಿಯಲ್ಲಿ ಸ್ಪಷ್ಟಪಡಿಸಲಾಗಿರುತ್ತದೆ. ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯುಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಾಗ್ರಹ ಪೀಡಿತವಾಗಿರುತ್ತವೆ. ಅಲ್ಲದೆ ದೂರುಗಳಿಗೆ ಪೂರಕವಾದ ಮಾಹಿತಿ/ ದಾಖಲೆಗಳನ್ನು ಸಾಮಾನ್ಯವಾಗಿ ಲಭ್ಯಪಡಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.

ಈ ದೂರುಗಳನ್ನು ಸಮಂಜಸವಾಗಿ ನಿರ್ವಹಿಸದೇ ಇರುವುದರಿಂದ, ಸರ್ಕಾರಿ ನೌಕರರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾರಣ, ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ಧ ಸ್ವೀಕೃತಗೊಂಡ ದೂರುಗಳ ಮೇಲೆ ಹಂತವಾರು ಕ್ರಮ ಕೈಗೊಳ್ಳಲು ಈ ಮೂಲಕ ತಿಳಿಸಿದೆ ಎಂದು ಹೇಳಿದ್ದಾರೆ.

ಹಂತ-1: ದೂರು ಸ್ವೀಕಾರವಾಗುವ ವಿವಿಧ ವಿಧಗಳು. ಈ ಕೆಳಕಂಡ ವಿವಿಧ ವಿಧಗಳಲ್ಲಿ ಅಧಿಕಾರಿಗಳು ದೂರುಗಳನ್ನು ಸ್ವೀಕರಿಸಿರುತ್ತಾರೆ.

* ಮೌಖಿಕವಾಗಿ ಬಂದ ದೂರುಗಳು.

* ಲಿಖಿತವಾಗಿ ಬಂದ ದೂರಗಳು. ಲಿಖಿತವಾಗಿ ಬಂದಲ್ಲಿ, ದೂರುದಾರರ ಹೆಸರು ಹಾಗೂ ಸಂಪರ್ಕ ಮಾಹಿತಿ ಕೂಡಿದ ದೂರುಗಳನ್ನು ಪರಿಶೀಲಿಸಿತಕ್ಕದ್ದು.

* ಪತ್ರಿಕೆಗಳಲ್ಲಿ ಹಾಗೂ ದೃಶ್ಯ ಮಾಧ್ಯಮದಲ್ಲಿ ಬಂದಂತಹ ದೂರುಗಳು.

* ಸಾರ್ವಜನಿಕರಾಗಿರಬಹುದು ಅಥವಾ ಸರ್ಕಾರಿ ಅಧಿಕಾರಿ/ ನೌಕರರಾಗಿರಬಹುದು ವಾಟ್ಸಪ್/ ಇ-ಮೇಲ್ ಮುಖಾಂತರ ನೀಡಿದ ದೂರುಗಳು.

* ಸಕ್ಷಮ ಪ್ರಾಧಿಕಾರಿಗಳು ಅಧೀನ ಕಛೇರಿಗಳಿಗೆ ಖುದ್ದಾಗಿ ಭೇಟಿ ನೀಡಿದಾಗ, ನ್ಯೂನತೆಗಳನ್ನು ಗಮನಿಸಿದಂತಹ ಪ್ರಕರಣಗಳಲ್ಲಿ ತಕ್ಷಣವೇ ಕರ್ತವ್ಯ ಲೋಪವೆಂದು ಪರಿಗಣಿಸಬಹುದಾಗಿದೆ.

ಮೇಲ್ಕಂಡಂತೆ ಸ್ವೀಕಾರವಾದಂತಹ ದೂರಿನ ಅಂಶವನ್ನು ನಿಯಮಾನುಸಾರ ಮುಂಬರುವ ಹಂತಗಳನ್ನು ಪಾಲಿಸುತ್ತಾ ಪರಿಶೀಲಿಸುವುದು. ಹಾಗೂ ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಮರೆಯದೆ, ಸದರಿ ದೂರಿನಾಂಶವನ್ನು ಕೂಡಲೇ ಪರಿಶೀಲನೆಗೆ ಒಳಪಡಿಸತಕ್ಕದ್ದು.

ಹಂತ-2: ದೂರಿನಲ್ಲಿನ ಅಂಶಗಳಲ್ಲಿ ನಿಯಮಗಳ ಉಲ್ಲಂಘನೆಯಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳತಕ್ಕದ್ದು. ದೂರಿನಲ್ಲಿರುವಂತೆ ಸದರಿ ಲೋಪದಿಂದ ಯಾವ ನಿಯಮವು ಉಲ್ಲಂಘನೆಯಾಗಿದೆ? ಎಂಬುವುದನ್ನು ಪರಿಶೀಲಿಸತಕ್ಕದ್ದು.

ಉದಾರಹಣೆ: (ಕಾಲ್ಪನಿಕ ಸನ್ನಿವೇಶ) ದಿನಾಂಕ 16/08/2023 ರಂದು ಬಂಡೂರು ಗ್ರಾಮಸ್ಥರು ಉಪ ನಿರ್ದೇಶಕರು, ಯಾದಗಿರಿ ರವರ ಕಛೇರಿ ತಲುಪಿ ತಮ್ಮ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲೀಲಾವತಿ ರವರ ಮೇಲೆ ದೂರೊಂದನ್ನು ನೀಡುತ್ತಾರೆ. ದೂರಿನ ವಿಷಯವೆಂದರೆ ಸದರಿ ಮುಖ್ಯ ಶಿಕ್ಷಕರು ದಿನಾಂಕ: 15/08/2023ರ ಸ್ವಾತಂತ್ರ್ಯ ದಿನಾಚರಣೆಯಂದು ನೇತಾಜಿ ಸುಭಾಸ್ ಚಂದ್ರ ಬೋಸ್ ರವರ ಭಾವಚಿತ್ರವನ್ನು ಇಟ್ಟು ಪೂಜಿಸದೇ ಅವರಿಗೆ ಅಗೌರವ ತೋರಿರುತ್ತಾರೆ ಎಂಬುವುದಾಗಿರುತ್ತದೆ.

ಭಾವನಾತ್ಮಕವಾಗಿ ಪ್ರಚೋದನೆಗೊಂಡಿರುವ ಈ ಗುಂಪಿಗೆ ಅಂಜಿ ಆ ಉಪ ನಿರ್ದೇಶಕರು, ಸದರಿ ಮುಖ್ಯ ಶಿಕ್ಷಕರನ್ನು ಗ್ರಾಮಸ್ಥರ ಬೇಡಿಕೆಯಂತೆ ತಕ್ಷಣವೇ ಅಮಾನತ್ತುಗೊಳಿಸುತ್ತಾರೆ. ಆದರೆ, ವಿಷಯವನ್ನರಿತ ಮೇಲಾಧಿಕಾರಿಗಳು ಸದರಿ ಲೋಪವೆಂಬಂಥಹ ಘಟನೆಯಿಂದ ಯಾವ ನಿಯಮದ/ ಸುತ್ತೋಲೆ/ ಜ್ಞಾಪನದ ನಿರ್ದೇಶನಗಳ ಉಲ್ಲಂಘನೆಯಾಗಿದೆ? ಎಂದು ಕೇಳಲಾಗಿ ಉಪ ನಿರ್ದೇಶಕರಿಗೆ ಇದಕ್ಕೆ ಉತ್ತರ ದೊರೆಯದೆ ಆತುರದ ನಿರ್ಧಾರದ ಅರಿವಾಗುತ್ತದೆ.

ಹಂತ-3: ಸಕ್ಷಮ ಪ್ರಾಧಿಕಾರವನ್ನು ಗುರುತಿಸುವುದು. ಬಂದಂತಹ ದೂರಿಗೆ ಸಕ್ಷಮ ಪ್ರಾಧಿಕಾರಿಗಳು ಯಾರು? ಎಂಬುದನ್ನು ಖಚಿತ ಪಡಿಸಿಕೊಂಡು ಅವರ ಹಂತದಲ್ಲಿಯೇ ಇತ್ಯರ್ಥ ಪಡಿಸಲು ಕ್ರಮವಹಿಸಬೇಕು. ಆದ್ದರಿಂದ ವಿನಾಕಾರಣ ಉದ್ದೇಶಪೂರ್ವಕವಾಗಿ ಮೇಲಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡತಕ್ಕದ್ದಲ್ಲ.

ಉದಾರಹಣೆ: (ಕಾಲ್ಪನಿಕ ಸನ್ನಿವೇಶ) ಮೇಲ್ಕಂಡ ಉದಾಹರಣೆಯಲ್ಲಿ ಉಪ ನಿರ್ದೇಶಕರು, ಯಾದಗಿರಿ ರವರು ತಮ್ಮ ಹಂತದಲ್ಲಿ ಕ್ರಮವಹಿಸದೆ, ಅಪರ ಆಯುಕ್ತರಿಗೆ ದೂರನ್ನು ವರ್ಗಾಯಿಸಿದರೆ ಅದು ತಪ್ಪಾಗುತ್ತದೆ. ಕೇತ್ರ ಶಿಕ್ಷಣಾಧಿಕಾರಿಗಳಿಂದ ಅವಶ್ಯಕವಿದ್ದಲ್ಲಿ ಕೇವಲ ವರದಿಯನ್ನಷ್ಟೇ ಪಡೆದು, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಶಿಸ್ತು ಪ್ರಾಧಿಕಾರಿಯಾದ ಉಪ ನಿರ್ದೇಶಕರೇ ತಮ್ಮ ಹಂತದಲ್ಲಿ ಕ್ರಮವಹಿಸಬೇಕು. ಅಥವಾ ಸಂಬಂಧಿಸಿದ ಶಿಸ್ತು ಪ್ರಾಧಿಕಾರಿಗೆ ದೂರನ್ನು ತಲುಪಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+