Get Updates
Get notified of breaking news, exclusive insights, and must-see stories!

Yashwant Sardeshpande: ರಂಗ ಕಲಾವಿದ ಯಶವಂತ ಸರದೇಶಪಾಂಡೆ ನಿಧನ, ಸಚಿವರಿಂದ ಸಂತಾಪ

ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕದ ಖ್ಯಾತ ಕನ್ನಡ ರಂಗಭೂಮಿ ಕಲಾವಿದರಾದ ಉತ್ತರ ಕರ್ನಾಟಕದ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ (Yashwant Sardeshpande) ಅವರು ಇಂದು ಸೆಪ್ಟಂಬರ್ 29ರ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಕೇಂದ್ರ ಸಚಿವರು ಸೇರಿದಂತೆ ನಾಡಿನ ಗಣ್ಯರು, ರಂಗಭೂಮಿ ಕಲಾವಿದರು, ಆಪ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನಕ್ಕೆ ಕುಟುಂಬವು ಕಣ್ಣಿರಲ್ಲಿ ಮುಳುಗಿದೆ.

ರಾಜ್ಯದ ರಂಗಭೂಮಿ ಕ್ಷೇತ್ರಕ್ಕೆ ಇಂದು ಆಘಾತವಾಯಿತು. 60 ವರ್ಷದ ಯಶವಂತ ಸರದೇಶಪಾಂಡೆ ಅವರಿಗೆ ಬೆಳಗ್ಗೆ 10 ಗಂಟೆಗೆ ತೀವ್ರ ಹೃದಯಾಘಾತ ಉಂಟಾಗಿ ನಿಧನರಾದರೆಂದು ತಿಳಿದು ಬಂದಿದೆ. ಹೃದಯಾಘಾತ ಸಂಭವಿಸಿದ ತಕ್ಷಣವೇ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕುಟುಂಬಸ್ಥರ ಮೂಲಗಳು ತಿಳಿಸಿವೆ.

Theatre artist Yashwant Sardeshpande Passes Away

ಯಶವಂತ ಸರದೇಶಪಾಂಡೆ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಖ್ಯಾತ ಕನ್ನಡ ರಂಗಭೂಮಿ ನಟ, ರಾಜ್ಯಾದ್ಯಂತ ಅನೇಕ ನಾಟಕಗಳಲ್ಲಿ ನಟಿಸಿ-ನಿರ್ದೇಶಿಸಿ ಅತ್ಯಂತ ಜನಪ್ರೀಯ ನಾಟಕಕಾರರಾಗಿದ್ದ ನಮ್ಮ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ನಿಧನರಾದ ವಿಷಯ ತಿಳಿದು ಅತ್ಯಂತ ದುಃಖವಾಗಿದೆ. ಅವರ 'ಆಲ್ ದಿ ಬೆಸ್ಟ್' ನಾಟಕ ಅಭೂತಪೂರ್ವ ಯಶಸ್ಸು ಕಂಡಿತು. ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಇವರು ಪಾ ತ್ರವಹಿಸುತ್ತಿದ್ದರು ಎಂದು ಸ್ಮರಿಸಿದರು.

ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ವರ್ಗಕ್ಕೆ , ನಾಟಕ ಪ್ರೇಮಿಗಳಿಗೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಅವರು ಕಂಬಿನಿ ಮಿಡಿದಿದ್ದಾರೆ.

ಯಶವಂತ ಸರದೇಶಪಾಂಡೆ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಲ್ಲಿ ಡಿಪ್ಲೋಮಾ ಪದವಿ ಪಡೆದರು. ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯಲ್ಲಿ ಹೆಚ್ಚಿನ ತರಬೇತಿ ಪಡದಿದ್ದರು. ಇಂದು ಅವರ ಅಗಲಿಕೆ ಇಡಿ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ.

ಸಚಿವ ಶಿವರಾಜ್ ತಂಗಡಗಿ ಸಂತಾಪ

ಖ್ಯಾತ ಕಲಾವಿದ ,ರಂಗಕರ್ಮಿ ಯಶವಂತ ಸರದೇಶಪಾಂಡೆ ಅವರ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಶೋಕ.ಕನ್ನಡದ ಖ್ಯಾತ ಕಲಾವಿದ, ರಂಗಕರ್ಮಿ ಯಶವಂತ ಸರದಶಪಾಂಡೆ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ರಂಗಭೂಮಿಯ ಜೊತೆ ಸಿನಿಮಾ ಮತ್ತು ಟಿವಿ ಧಾರವಾಹಿಗಳಲ್ಲಿಯ ನಟನೆಯಿಂದ ಅಪಾರ ಹೆಸರು ಮಾಡಿರುವ ಯಶವಂತ ಸರದೇಶಪಾಂಡೆ ಸಮಕಾಲೀನ ಹಾಸ್ಯ ಕಲಾವಿದರ ಪಾಲಿನಲ್ಲಿ ತಮ್ಮ ವಿಶಿಷ್ಟ ಭಾಷೆ, ,ಆಂಗಿಕ ಅಭಿನಯದಿಂದ ಅಪಾರ ಜನಪ್ರಿಯತೆ ಪಡೆದಿದ್ದರು.

ರಂಗ ವರ್ತುಲ ತಂಡವನ್ನು ಕಟ್ಟಿ, ಆ ಮೂಲಕ ಅಸಂಖ್ಯಾತ ನಾಟಕಗಳನ್ನ ಪ್ರದರ್ಶಿಸಿದ ಯಶವಂತ ಸರದೇಶಪಾಂಡೆ ಅವರ ಆಲ್ ದಿ ಬೆಸ್ಟ್ ನಾಟಕ ದಾಖಲೆಯ ಪ್ರದರ್ಶನಗಳನ್ನ ಕಂಡಿದೆ. ಕಮಲ ಹಾಸನ್ ಅಭಿನಯದ ರಾಮ ಶಾಮ ಭಾಮ ಜನಪ್ರಿಯ ಚಲನಚಿತ್ರದ ಸಂಭಾಷಣಕಾರರಾಗಿ, ಜೊತೆಗೆ ನಟಿಸಿ ,ಅಪಾರ ಜನಪ್ರೀತಿ ಗಳಿಸಿದ್ದರು.

ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಯಶವಂತ ಸರದೇಶಪಾಂಡೆ ಅವರ ಸಾಂಸ್ಕೃತಿಕ ಕೊಡುಗೆಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+