ಜೋಶಿಯವರೇ, ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ?

ಬೆಂಗಳೂರು, ಸೆಪ್ಟೆಂಬರ್‌ 16: ದಲಿತರ, ಒಕ್ಕಲಿಗರ ಹಾಗೂ ಮಹಿಳೆಯರ ಘನತೆಗೆ ಚ್ಯುತಿ ತರುವಂತಹ ಅನಾಗರಿಕ ಮಾತುಗಳನ್ನಾಡಿದ ಬಿಜೆಪಿ ಶಾಸಕ ಮುನಿರತ್ನರನ್ನು ಬಂಧಿಸಿದ್ದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ತುಂಬಾ ಸಂಕಟ ತಂದಿದೆ ಪಾಪ ಎಂದು ರಾಜ್ಯ ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಕುರಿತು ರಾಜ್ಯ ಕಾಂಗ್ರೆಸ್‌, ಜೋಶಿಯವರೇ, ಮುನಿರತ್ನರನ್ನು ಬಂಧಿಸದೆ ಕೈಗೆ ಲಾಲಿಪಾಪ್ ಕೊಟ್ಟು ಮುದ್ದಾಡಬೇಕಿತ್ತೇ? ಮುನಿರತ್ನ ಪರಾರಿಯಾಗಲು ಅವಕಾಶ ಮಾಡಿಕೊಡಬೇಕಿತ್ತೆ. ಮುನಿರತ್ನ ಆಡಿದ ಮಾತುಗಳಿಗೆ ಬಿಜೆಪಿಯ ಸಹಮತವಿದೆಯೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

The Congress questioned whether the BJP agreed with Munirathna s words

ಸಂಘದ ಜೋಶಿಯವರಿಗೆ ದಲಿತರಿಗೆ, ಮಹಿಳೆಯರಿಗೆ ಮಾಡುವ ನಿಂದನೆಗಳು ಖುಷಿ ಕೊಡುತ್ತವೆಯೇ? ಮನುಸ್ಮೃತಿಯ ಅಜೆಂಡಾವನ್ನು ಪಾಲಿಸಿರುವುದಕ್ಕೆ ಹೆಮ್ಮೆ ಇದೆಯೇ? ಅಂಬೇಡ್ಕರ್ ಫೋಟೋ ತೆಗೆಸಿ ಶೋಷಿತರ ಬಗೆಗಿನ ಅಸಹನೆಯನ್ನು ಕಾರಿಕೊಂಡಿದ್ದ ಜೋಶಿಯವರಿಗೆ ದಲಿತ ನಿಂದಕ ಮುನಿರತ್ನರನ್ನು ಬಂಧಿಸಿದ್ದು ನೋವು ತಂದಿದ್ದರಲ್ಲಿ ಆಶ್ಚರ್ಯವಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ತಿಳಿಸಿದೆ.

ಕಾಂಗ್ರೆಸ್‌ ತಿರುಗೇಟು ಕೊಟ್ಟ ಬಿಜೆಪಿ

ಕಾಂಗ್ರೆಸ್ ಪಕ್ಷ ದಲಿತರ ಪರ ಎಂಬ ಮಾತು ಕೇಳಿವುದೇ ಅಭಾಸ ಎನಿಸುತ್ತದೆ. ದಲಿತ ವರ್ಗದ ಪರ ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಅಂತಹ ಒಲವಿದೆಯೇ?? ಈ ದೇಶಕ್ಕೆ ಸಂವಿಧಾನವನ್ನು ರಚಿಸಿ ಸಮಾನತೆಯ ಮಂತ್ರವನ್ನು ಸಾರಿದ ಮಹಾನಾಯಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಹೇಗೆ ನೆಡೆಸಿಕೊಂಡಿತು ಎಂಬುದು ಈ ದೇಶ ಇನ್ನು ಮರೆತಿಲ್ಲ. ಎರಡೆರಡು ಸಾವತ್ರಿಕ ಚುನಾವಣೆಗಳಲ್ಲಿ ಅವರನ್ನು ಕಾಂಗ್ರೆಸನವರೇ ಸೋಲಿಸಿ ಅವಮಾನ ಮಾಡಿದ್ದು, ಅವರ ದೇಹಾಂತ್ಯವಾದ ಮೇಲೆ ಆ ವ್ಯಕ್ತಿಗೆ ಸಿಗಬೇಕಾದ ಕನಿಷ್ಠ ಗೌರವನ್ನು ನೀಡಲು ಕೇಂದ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದ್ದು ಮರೆಯಲು ಸಾಧ್ಯವೇ??

ಇನ್ನು ಬಾಬು ಜಗಜೀವನ್ ರಾಮ್, ಸೀತಾರಾಮ್ ಕೇಸರಿಯಂತಹ ಅದ್ಭುತ ನಾಯಕರನ್ನು ಕಡೆಗಣಿಸಿದ್ದು ಯಾವ ಕಾರಣಕ್ಕೆ?? ನಿಮ್ಮ ಬಳಿ ಉತ್ತರ ಎದೆಯೆ?? ಅಷ್ಟೇ ಯಾಕೆ ನಿಮ್ಮ ಪಕ್ಷದವರೇ ದಲಿತ ಸಮುದಾಯದ ನಾಯಕರಾದ ಶ್ರೀ ಅಖಂಡ ಶ್ರೀನಿವಾಸ್ ಅವರ ಮನೆಗೆ ನಿಮ್ಮ ಬ್ರದರ್ಸ್ ಬೆಂಕಿ ಹಚ್ಚಿ ಕೋಟ್ಯಂತರ ರೂಪಾಯಿ ಅಸ್ತಿ ನಷ್ಟವಾದಾಗ, ಅಲ್ಲೂ ತುಷ್ಟಿಕಾರಣದ ನೀಚ ಬುದ್ದಿಯನ್ನು ಬಿಡದೆ ಅವರು ಅಮಾಯಕರು ಎಂದಿದ್ದು ನಾವು ಮರೆತಿಲ್ಲ ಎಂದು ಬಿಜೆಪಿ ಹೇಳಿದೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮತಾಂಧರ ಉಪಟಳ. ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರದಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ನೋಡಿದರೆ ಕರುನಾಡಿನಲ್ಲಿ ಮತಾಂಧರ ಮಾತಾಂಧತೆಯನ್ನು ಪ್ರಶ್ನಿಸಬೇಕಾದ ಸರ್ಕಾರ ಕಣ್ಣು, ಕಿವಿ, ಬಾಯಿ ಮುಚ್ಚಿ ಕುಳಿತಂತಿದೆ..ಸಿದ್ದರಾಮಯ್ಯ ಸರ್ಕಾರ ಓಲೈಕೆಗಾಗಿ ತಮ್ಮ ಬ್ರದರ್ಸ್‌ಗಳ ಬೆನ್ನಿಗೆ ನಿಂತಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+