Kumbh Mela 2025: ಮೈಸೂರಿನಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ನಿಲ್ದಾಣಗಳು
ಹುಬ್ಬಳ್ಳಿ, ಫೆಬ್ರವರಿ 14: ದಕ್ಷಿಣ ಭಾರತ ಕುಂಭಮೇಳವೆಂದೇ ಪ್ರಸಿದ್ಧಿ ಪಡೆದ ರಾಜ್ಯದ ಮೈಸೂರು ಜಿಲ್ಲೆ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ' ಕುಂಭಮೇಳ 2025' ನಡೆಯುತ್ತಿದೆ. ಭಕ್ತರು ಸಾರಗೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು ಮತ್ತು ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಯಾವ ರೈಲು, ಸಂಖ್ಯೆ, ವೇಳಾಪಟ್ಟಿ ಮತ್ತು ನಿಲ್ದಾಣಗಳ ಮಾಹಿತಿ ಇಲ್ಲಿದೆ.
ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು (ಸಂಖ್ಯೆ 06219) ಫೆಬ್ರವರಿ 20 ರಂದು (ಗುರುವಾರ) ಮೈಸೂರಿನಿಂದ ರಾತ್ರಿ 9:40 ಗಂಟೆಗೆ ಹೊರಟು, ಫೆಬ್ರವರಿ 23, 2025 ರಂದು (ಭಾನುವಾರ) ಬೆಳಗ್ಗೆ 9:30 ಗಂಟೆಗೆ ತುಂಡ್ಲಾ ನಿಲ್ದಾಣ ತಲುಪಲಿದೆ.

ಪುನಃ ಇದೇ ರೈಲು (06220) ಫೆ. 24 ರಂದು (ಸೋಮವಾರ) ತುಂಡ್ಲಾ ನಿಲ್ದಾಣದಿಂದ ಬೆಳಗ್ಗೆ 11:30 ಗಂಟೆಗೆ ಹೊರಟು, ಬುಧವಾರ (ಫೆ.26, 2025) ರಾತ್ರಿ 10 ಗಂಟೆಗೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲು ನಿಲುಗಡೆಯ ನಿಲ್ದಾಣಗಳು
ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು ಎರಡೂ ಮಾರ್ಗಗಳಲ್ಲಿ ಮಂಡ್ಯ, ರಾಮನಗರಂ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಗೋಕಾಕ್ ರೋಡ್, ಘಟಪ್ರಭಾ,ರಾಯಬಾಗ, ಕುಡಚಿ, ಮೀರಜ್, ಪುಣೆ, ದೌಂಡ್ ಕಾರ್ಡ್ ಲೈನ್, ಮನ್ಮಾಡ್, ಭೂಸಾವಲ್, ಇಟಾರ್ಸಿ, ಪಿಪಾರಿಯಾ, ನರಸಿಂಗ್ಪುರ, ಜಬಲ್ಪುರ್, ಕಟ್ನಿ, ಮೈಹಾರ್, ಸತ್ನಾ, ಮಾಣಿಕ್ಪುರ್, ಪ್ರಯಾಗರಾಜ್, ಫತೇಪುರ್, ಗೋವಿಂದಪುರಿ, ಇಟಾವಾ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.
ಈ ವಿಶೇಷ ಎಕ್ಸ್ ಪ್ರೆಸ್ ರೈಲಿನಲ್ಲಿ 03 ಎಸಿ ಟು ಟೈರ್, 03 ಎಸಿ ತ್ರಿ ಟೈರ್, 08 ಜನರಲ್ ಸ್ಲೀಪರ್, 02 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 02 ಎಸ್ಎಲ್ಆರ್ / ಡಿ ಬೋಗಿಗಳು ಸೇರಿದಂತೆ 18 ಬೋಗಿಗಳು ಇರಲಿವೆ.
ಈ ರೈಲುಗಳ ಪ್ರತಿ ನಿಲ್ದಾಣದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಪ್ರಯಾಣಿಕರು ಅಧಿಕೃತ ಭಾರತೀಯ ರೈಲ್ವೆ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ದಕ್ಷಿಣ ಭಾರತ ಕುಂಭಮೇಳವೆಂದೇ ಪ್ರಸಿದ್ಧಿ ಈ ಕುಂಭಮೇಳವು ಫೆಬ್ರವರಿ 10ರಿಂದ ಆರಂಭವಾಗಿ ಮೂರು ದಿನಗಳ ಕಾಲ ನಡೆಯಿತು. ಗುರುವಾರ ಪೂರ್ಣಗೊಂಡಿದ್ದು, ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಅವರೆಲ್ಲ ಮರಳಿ ತೆರಳಲು ಈ ಅನುಕೂಲ ಒದಗಿಸಲು ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಆರಂಭಿಸಿದೆ.












Click it and Unblock the Notifications