ಕೈಗಾರಿಕಾ ನಿವೇಶನ ಪಡೆದು ಹಣ ಪಾವತಿಸದವರಿಗೆ ಸರ್ಕಾರ ಖಡಕ್ ಎಚ್ಚರಿಕೆ

ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕದಲ್ಲಿ ಕೈಗಾರಿಕಾ ನಿವೇಶನಗಳನ್ನು ಪಡೆದು ಹಣ ಪಾವತಿಸದೇ ಇರುವವರ ವಿರುದ್ಧ ಸರ್ಕಾರ ಗರಂ ಆಗಿದೆ. ಕೆಲವು ಹಣ ಪಾವತಿಸಿಲ್ಲ, ಇನ್ನೂ ಕೆಲವರು ಶೇ. 30ರಷ್ಟು ಮಾತ್ರವೇ ಹಣ ಕಟ್ಟಿದ್ದಾರೆ. ಹೀಗಾಗಿ ಹಣ ಪಾವತಿಸದವರನ್ನು ಪತ್ತೆ ಮಾಡಿ ಕೂಡಲೇ ಮುಟ್ಟುಗೋಲು ಹಾಕಬೇಕು ಎಂದು ಕೈಗಾರಿ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಕೆ ನೀಡಿದರು.

ಬೃಹತ್ ಕೈಗಾರಿಕಾ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅನೇಕ ಉದ್ದಿಮೆಗಳು ಮತ್ತು ನಿಯಮಿತಗಳ ಜತೆ ರಾಜ್ಯ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ಮಂಗಳವಾರ ಪೂರ್ತಿ ಸಭೆ ನಡೆಸಿ ಚರ್ಚಿಸಿದರು. ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು. ಈ ಪೈಕಿ ಕೈಗಾರಿಕಾ ನಿವೇಶನಗಳನ್ನು ಪಡೆದು ಸುಮ್ಮನಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು, ಆಯುಕ್ತರು ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದಿಷ್ಟ ಹೊಣೆಗಾರಿಕೆಗಳನ್ನು ವಹಿಸಿ, ಅವೆಲ್ಲವನ್ನೂ ಕ್ಷಿಪ್ರ ಗತಿಯಲ್ಲಿ ಮಾಡುವಂತೆ ನಿಗದಿತ ಕಾಲಮಿತಿಗಳನ್ನೂ ವಿಧಿಸಿದರು.

state-govt-will-take-legal-action

15 ದಿನಕ್ಕೊಮ್ಮೆ ಸಚವರಿಂದ ಪ್ರಗತಿ ಪರಿಶೀಲನೆ

ಕರ್ನಾಟಕ ಸರ್ಕಾರ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ಭಾರೀ ಕೈಗಾರಿಕಾ ಇಲಾಖೆಯಲ್ಲಿ ರಚನಾತ್ಮಕವಾಗಿ ಅಭಿವೃದ್ಧಿಗಳನ್ನು ಏನೇನು ಮಾಡಬೇಕು ಎಂಬ ಬಗ್ಗೆ ಯೋಚಿಸಿದ್ದೇವು. ಅದೆಲ್ಲವುಗಳನ್ನು ಈಗ ನೀಡಿದ ಗಡುವಿನೊಳಗೆ ಅನುಷ್ಠಾನಕ್ಕೆ ತರುವಂತೆ ಸಚಿವರು ಸೂಚಿಸಿದರು. ಜೊತೆಗೆ ಇನ್ನುಮುಂದೆ ಪ್ರತೀ 15 ದಿನಗಳಿಗೊಮ್ಮೆ ನಾನೇ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ 100 ಹಳೇ ಕೈಗಾರಿಕಾ ಬಡಾವಣೆಗಳು ಇವೆ. ಅವುಗಳಲ್ಲಿನ ಮೂಲ ಸೌಲಭ್ಯಗಳನ್ನು ಸುಧಾರಿಸಲು ನಿರ್ಧರಿಸಿದ್ದೇವೆ. ಆ ಬಡಾವಣೆಗಳಿಗೆ ಏನು ಬೇಕು ಎಂಬುದರ ಬಗ್ಗೆ 15 ದಿನಗಳಲ್ಲಿ ಸಮಗ್ರ ಪಟ್ಟಿ ಸಲ್ಲಿಸುವಂತೆ ಅವರು ತಿಳಿಸಿದರು.

ನೂರಾರು ಎಕರೆ ಹಸ್ತಾಂತರ ಪ್ರಕ್ರಿಯೆಗೆ ಗಡುವು

ಮೈಸೂರು ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕ್ರಮವಾಗಿ 118 ಮತ್ತು 270 ಎಕರೆ ಭೂಮಿ ಇನ್ನೂ ಕಂದಾಯ ಇಲಾಖೆಯ ಅಧೀನದಲ್ಲೇ ಇದ್ದು, ಇದು ಕೆಐಎಡಿಬಿಗೆ ಹಸ್ತಾಂತರವಾಗಬೇಕು. ಈ ಹಸ್ತಾಂತರ ಪ್ರಕ್ರಿಯೆಗಳು ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದರು.

state-govt-will-take-legal-action

ಕೈಗಾರಿಕಾ ಬಡಾವಣೆಗಳಲ್ಲಿ ಇರುವ CA ನಿವೇಶನಗಳನ್ನು ಆದ್ಯತೆಯ ಮೇಲೆ ಆರ್ ಆಂಡ್ ಡಿ ಕೇಂದ್ರಗಳಿಗೆ ಕೊಡಬೇಕು. ಇದರ ಬಗ್ಗೆ ಎರಡು ವಾರಗಳಲ್ಲಿ ತೀರ್ಮಾನ ಮಾಡಬೇಕು. ಇಲ್ಲಿನ ಬಿಡಿ ನಿವೇಶನಗಳನ್ನು ಮಾರುಕಟ್ಟೆ ಮೌಲ್ಯವನ್ನು ಮೂಲ ಬೆಲೆಯಾಗಿ ತೆಗೆದುಕೊಂಡು ಹರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

MSIL ಮತ್ತು KSDLಗೆ ಹೊಸ ರೂಪ

ನೂತನ ಕೈಗಾರಿಕಾ ಲೇಔಟ್ ಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಡಿಮ್ಯಾಂಡ್ ಸರ್ವೇ ಮಾಡಬೇಕು. ಅಲ್ಲದೆ MSIL ಮತ್ತು KSDL ಎರಡಕ್ಕೂ ಸಂಪೂರ್ಣ ಹೊಸ ರೂಪ ನೀಡಬೇಕು. KSDL ಇನ್ನು ಮುಂದೆ ಎಲ್ಲ ವರ್ಗಗಳಿಗೂ ಸಿಗುವಂತೆ ಲಿಕ್ವಿಡ್ ಸೋಪ್ ಕೂಡ ತಯಾರಿಸಬೇಕು.

ಕರ್ನಾಟಕದಲ್ಲಿ ರಫ್ತಿಗೆ ಉತ್ತೇಜನ‌ ನೀಡುವ ಸಂಬಂದ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಿದೆ. ಮುಂದಿನ ಮೂರು ತಿಂಗಳಲ್ಲಿ ಈ ಕೈಗಾರಿಕಾ ನೀತಿ ಬಗ್ಗೆ ಸಮಾಲೋಚನೆ ಮಾಡಿ ನೀತಿ ಹೊಸ‌ ನೀತಿ ರೂಪಿಸಬೇಕು ಎಂದು ಗಡುವು ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

KIADBಗೆ 800 ಕೋಟಿ ರೂ. ಪಾವತಿ ಬಾಕಿ

ಪರಿಶಿಷ್ಟ ಪಂಗಡ ಮತ್ತು ಜಾತಿಯ ಉದ್ಯಮಗಳಿಗೆ ಸರ್ಕಾರವು ಶೇಕಡಾ 75ರಷ್ಟು ರಿಯಾಯಿತಿ ದರದಲ್ಲಿ ಜಮೀನು ಕೊಡುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯ ಕೈಗಾರಿಕೆ ಅಭಿವೃದ್ಧಿ ಮಂಡಳಿಗೆ (KIADB) 800 ಕೋಟಿ ರೂ. ಹಣ ಸರ್ಕಾರದಿಂದ ಬರುವುದು ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು.

ಪರಿಶಿಷ್ಠ ಜಾತಿ-ಪಂಗಡದ ಸಮುದಾಯಗಳಲ್ಲಿ ಸಮುದಾಯಗಳಲ್ಲಿ ಪ್ರಭಾವಿಗಳಷ್ಟೇ ಕೈಗಾರಿಕಾ ನಿವೇಶನ ಪಡೆಯುತ್ತಿದ್ದಾರೆ. ಈ ನಿವೇಶನಗಳು ಇದು ಉದ್ಯಮಶೀಲ ಬಡವರಿಗೂ ಸಿಗುವಂತೆ ಆಗಬೇಕು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಮಹೇಶ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ್, ಕೆಎಸ್ಡಿಎಲ್ ಎಂಡಿ ಪ್ರಶಾಂತ್, ಕೆಎಂಸಿಎ ಎಂಡಿ ಸಿದ್ದಲಿಂಗಯ್ಯ ಪೂಜಾರ್ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+