ಕ್ರೈಂ ರೌಂಡಪ್: ಹೆದ್ದಾರಿ ಅಪಘಾತಗಳ ಸರಣಿ
ಬೆಂಗಳೂರು, ಅ.21: ಮಂಗಳೂರಿನ ಬಿ. ಸಿ. ರೋಡ್ ಸಮೀಪ ಸೋಮವಾರ ಬೆಳಗ್ಗೆ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ ವ್ಯಾಗನ್ ಆರ್ ಕಾರು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನ ನಡೆದಿದೆ.
ಬಂಟ್ವಾಳ ಸಮೀಪದ ಕಲ್ಲಡ್ಕದಲ್ಲಿ ಬಸ್ಸು ಹಾಗೂ ವ್ಯಾಗನ್ ಆರ್ ಕಾರು ಪರಸ್ಪರ ಢಿಕ್ಕಿಯಾಗುವ ಮೂಲಕ ಈ ಸಂಭವಿಸಿರುವ ಈ ಅಪಘಾತದಲ್ಲಿ ಮೃತಪಟ್ಟವರು ಬೆಳ್ತಂಗಡಿ ಸಮೀಪದ ಕರಾಯಾ ಎಂಬಲ್ಲಿನ ನಿವಾಸಿಗಳೆಂದು ತಿಳಿದು ಬಂದಿದೆ.
ಬೆಳ್ತಂಗಡಿ: ಇಲ್ಲಿಗೆ ಸಮೀಪದ ಲಾೖಲ ಸೇತುವೆ ಬಳಿ ಭಾನುವಾರ ಅಪರಾಹ್ನ ಮಿನಿ ಬಸ್ (ಟೆಂಪೋ) ಹಾಗೂ ರಿಕ್ಷಾ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಟೆಂಪೋದಲ್ಲಿದ್ದವರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ವೀಕ್ಷಿಸಿ ಉಜಿರೆ ಕಡೆಯಿಂದ ಚಿಕ್ಕಮಗಳೂರಿಗೆ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದಲ್ಲಿ ಸುಮಾರು ಒಂದು ಗಂಟೆಗಳ ಕಾಲ ರಸ್ತೆ ತಡೆ ಉಂಟಾಯಿತು. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಬಂದು ರಸ್ತೆ ತೆರವುಗೊಳಿಸಿದರು
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ಕೋಲಾರ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ಚಿಕ್ಕಮಗಳೂರು ಕ್ರೈಂ
ತರೀಕೆರೆ ಪೊಲೀಸ್ ಠಾಣೆ ಯು ಸಂ. 26/2013 - ಕಲಂ: 174 ಸಿಆರ್ ಪಿಸಿ
ತರೀಕೆರೆ ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿ ಜನರು ಗುಂಪು ಗುಂಪಾಗಿ ಇರುವುದನ್ನು ಕಂಡು ಹೋಗಿ ನೋಡಿದಾಗ ಶವವಿರುವುದು ಕಂಡುಬಂದಿದ್ದರಿಂದ ಸದರಿ ಶವದ ಕುತ್ತಿಗೆ ಹಾಗೂ ಮುಖವನ್ನು ಯಾವುದೋ ಪ್ರಾಣಿಗಳು ತಿಂದಿರುವುದು ಹಾಗೂ ಸ್ಥಳದಲ್ಲಿ ಹೆಂಗಸಿನ ಹಲ್ಲುಗಳು ದವಡೆ ಮೂಳೆ ಬಿದ್ದಿರುತ್ತೆ.

ಉಡುಪಿ
ಗಂಗೊಳ್ಳಿ:ದಿನಾಂಕ 20/10/2013 ರಂದು ಮಧ್ಯಾಹ್ನ 15:00 ಗಂಟೆಗೆ ಪಿರ್ಯಾದಿದಾರ ಲೋಕೇಶ್ ಪೂಜಾರಿ (30) ತಂದೆ:ಬಾಬು ಪೂಜಾರಿ, ವಾಸ:ಕುಸುಮ ನಿಲಯ, ಕುಂಬಾರ ಮಕ್ಕಿ ಹೊಸಾಡು ಗ್ರಾಮರವರು ಮನೆಗೆ ಹೋದಾಗ ಮನೆಯ ಹತ್ತಿರದ ಸೌಪರ್ಣಿಕ ನದಿಯ ಬದಿಯಲ್ಲಿ ಒಂದು ಮೃತ ದೇಹ ತೇಲಿ ಬಂದಿರುವ ವಿಷಯ ತಿಳಿದು ಹತ್ತಿರ ಹೋಗಿ ನೋಡಲಾಗಿ ಅಪರಿಚಿತ ಗಂಡಸು, ಪ್ರಾಯ:50 ರಿಂದ 55 ವರ್ಷ, ತೆಳ್ಳನೆ ಶರೀರವಾಗಿದ್ದು, ಎಲ್ಲಿಯೋ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮುಳುಗಿ ಆಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟು ನದಿ ನೀರಿನಲ್ಲಿ ತೇಲಿ ಬಂದಿದ್ದು, ಈ ಬಗ್ಗೆ ಲೋಕೇಶ್ ಪೂಜಾರಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 19/2013 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶಿವಮೊಗ್ಗ ಕ್ರೈಂ
ತುಂಗಾನಗರ ಠಾಣೆ ಶಿವಮೊಗ್ಗ: ಅಪಘಾತ ಪ್ರಕರಣ
ಮಾಚೇನಹಳ್ಳಿ ಐ.ಟಿ. ಪಾರ್ಕ ಹತ್ತಿರ ಹೇಮಂತ್ ಅತ್ತಿಗುಂದ ಗ್ರಾಮ ಭದ್ರಾವತಿ ತಾಲ್ಲೋಕ್ ಇವರು ಮತ್ತು ತಿಮ್ಮಪ್ಪ ಎಂಬುವರು ರಸ್ತೆ ದಾಟುತ್ತಿರುವಾಗ ಆರೋಪಿಯು ತನ್ನ ವಾಹನ ಕೆ.ಎ.15 ಜೆ 3300 ಬೈಕ್‍ನ್ನು ಅಜಾಗೂರುಕತೆಯಿಂದ ವಾಹನ ಚಲಿಸಿ ಡಿಕ್ಕಿಹೊಡೆಸಿದ ಪರಿಣಾಮ ತಿಮ್ಮಪ್ಪ ಎಂಬುವರು ಮೃತಪಟ್ಟಿರುತ್ತಾನೆ.

ಕೋಲಾರ
ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಾಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಕ್ಯಾಲನೂರು ಗ್ರಾಮದ ಗೇಟ್ ಬಳಿ ಸಂಭವಿಸಿರುತ್ತದೆ.
ತಾವರೆಕೆರೆ ಗ್ರಾಮದ ವಾಸಿ ಬಸವರಾಜ್ ರವರು ಕೆಎ-07, ಯು-8448 ದ್ವಿಚಕ್ರ ವಾಹನದಲ್ಲಿ ದೊಡ್ಡಬಳ್ಳಾಪುರದಿಂದ ತಮ್ಮ ಗ್ರಾಮಕ್ಕೆ ಹೋಗಲು ಬರುತ್ತಿದ್ದು. ಈ ಸಮಯದಲ್ಲಿ ಕೋಲಾರ ಕಡೆಯಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ-07, ಎಫ್-1462 ವಾಹನವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಬಸವರಾಜ್ ರವರಿಗೆ ತೀವ್ರತರವಾದ ಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ.

ಗುಲ್ಬರ್ಗಾ
ಕಬ್ಬಿಣದ ರಾಡ್ ಸಾಗಿಸುತ್ತಿದ್ದ ಲಾರಿಯ ಟೈರ್ ಸಿಡಿದು, ಲಾರಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಲ್ಬರ್ಗ-ಜೇವರ್ಗಿ ಹೆದ್ದಾರಿಯಲ್ಲಿ ನಡೆದಿದೆ. ಫರಹತಾಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಲಾರಿಯಲ್ಲಿ ಸಿಲುಕಿರುವ ಒಂದು ಶವವನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಲಾರಿ ಮಹಾರಾಷ್ಟ್ರದ ನೋಂದಣಿಯದ್ದಾಗಿದೆ.

ಚಿತ್ರದುರ್ಗ : ಕಾರು ಡಿಕ್ಕಿ, ಬಾಲಕಿ ಸಾವು
ಚಳ್ಳಕೆರೆ, ಅಕ್ಟೋಬರ್. 20 :: ತನ್ನ ಅಣ್ಣನೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ನಂ: ಕೆಎ-16/ಎಂ-4913 ನೇ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಬಾಲಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ಬಳಿ ಇರುವ ಮೂಖಬಸಪ್ಪ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಗ್ರಾಮದ ನಿರ್ಮಲ (15) ಎಂಬ ಬಾಲಕಿ ತನ್ನ ಅಣ್ಣ ತಿಪ್ಪೇಶನೊಂದಿಗೆ ತಳಕು ಸಂತೆಗೆ ಹೋಗಿ ವಾಪಸ್ ಆಟೋದಲ್ಲಿ ಬಂದು ಕೋಡಿಹಳ್ಳಿ ಗೇಟ್ ಬಳಿ ಇಳಿದುಕೊಂಡು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡ ನಿರ್ಮಲಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾಳೆ ಎಂದು ದೂರು ಇದ್ದ ಮೇರೆಗೆ ತಳಕು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.

ದಾವಣಗೆರೆ ಕ್ರೈಂ
ವಿದ್ಯಾನಗರ ಪೊಲೀಸ್ ಠಾಣೆ ಗುನ್ನೆ ನಂ: 159/2013, ಕಲಂ: 392 ಐ.ಪಿ.ಸಿ. ದಿನಾಂಕ.18.10.2013 ರಂದು ಫಿರ್ಯಾದಿ ಶ್ರೀಮತಿ ಹೆಚ್.ಎಸ್ ರೇಣುಕಾ ಇವರು ಮದ್ಯಾಹ್ನ ತಮ್ಮ ಮನೆಯ ಎದುರ ಮನೆಯವರಾದ ಮಹೇಶ್ವರಪ್ಪ ರವರ ಮಗಳ ನಿಶ್ಚಿತಾರ್ಥ ಸಮಾರಂಭಕ್ಕಾಗಿ ವಿದ್ಯಾನಗರ ಮುಖ್ಯರಸ್ತೆಯಲ್ಲಿ ಈಶ್ವರ ಪಾರ್ವತಿ ದೇವಸ್ಥಾನಕ್ಕೆ ಹೋಗಿ ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸ್ಸು ಮನೆಗೆ ಬರಲು ಮದ್ಯಾಹ್ನ ಸುಮಾರು 3:00ಗಂಟೆ ಸಮಯದಲ್ಲಿ ವಿನಾಯಕ ಬಡಾಣೆಯ 1ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಯಾರೋ ಇಬ್ಬರು ವ್ಯಕ್ತಿಗಳು ಯಾವುದೋ ಒಂದು ಮೋಟಾರ್ ಸೈಕಲ್ನಲ್ಲಿ ಎದರುಗಡೆಯಿಂದ ಬಂದು ಮೋಟಾರ್ ಸೈಕಲ್ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಕೆಳಗೆ ಇಳಿದು ಏಕಾಏಕಿ ಪಿರ್ಯಾದಿದಾರರ ಕೊರಳಿಗೆ ಕೈಹಾಕಿ ಕೊರಳಲ್ಲಿದ್ದ ಸುಮಾರು 50 ಗ್ರಾಂ ತೂಕದ ಎರಡು ಎಳೆಯ ತ್ರಿರಿಂಗ ಮಾಡೆಲ್ ಬಂಗಾರದ ಮಾಂಗಲ್ಯ ಸರದಲ್ಲಿ ಸುಮಾರು 15 ಗ್ರಾಂ ತೂಕದ ಬೆಲೆ ಸುಮಾರು 40,000/- ರೂ ಬೆಲೆಬಾಳುವ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ, ಉಳಿದ ಸುಮಾರು 35 ಗ್ರಾಂ ತೂಕದ ಕಟ್ಟಾದ ಬಂಗಾರದ ಮಾಂಗಲ್ಯ ಸರ ತಮ್ಮಲ್ಲಿ ಉಳಿದಿರುತ್ತದೆ.
ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂತಾ ನೀಡಿದ ದೂರಿನ ಮೇರಗೆ ಮೇಲ್ಕಂಡಂತೆ ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ತುಮಕೂರು ಜಿಲ್ಲೆ
ತಿಪಟೂರು ನಗರ ಪೊಲೀಸ್ ಠಾಣಾ ಮೊ.ನಂ- 182/2013. U/S ಕಲಂ-.323,504,506 ರೆ/ವಿ 34 ಐ.ಪಿ.ಸಿ. & 3 (1) & (10) S C & S T. P A. Act 1989.
ದಿನಾಂಕ: 20/10/2013 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿ ಮಂಜುನಾಥ್ ಬಿನ್ ರಾಜಣ್ಣ ಮಾರನಗೆರೆ ತಿಪಟೂರು ನಗರ ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಅಂಶವೇನೆಂದರೆ, ದಿನಾಂಕ: 19/10/2013 ರಂದು ಸಂಜೆ ಸುಮಾರು 04-00 ರಿಂದ 05-00 ಗಂಟೆಯಲ್ಲಿ ನಮ್ಮ ಊರಿನ ಪ್ಲೇಗಿನಮ್ಮ ತೋಪಿನಲ್ಲಿ ದೇವಿಯ ಮೂಲ ಸ್ಥಾನದ ಬೇವಿನ ಮರಕ್ಕೆ ಪೂಜೆ ಮಾಡಿಕೊಂಡು ಮರದ ಹತ್ತಿರ ಕುಳಿತಿದ್ದಾಗ, ಮಾರನಗೆರೆಯ ಕೌಟ್ ಶಿವಣ್ಣನ ಮಗನಾದ ಮಂಜುನಾಥ ಮತ್ತು ನಿಂಗಣ್ಣಯ್ಯನ ಮಗನಾದ ಬೋರೇಗೌಡ ಇಬ್ಬರು ನನ್ನ ಹತ್ತಿರ ಬಂದು ಸೂಳೆ ಮಗನೆ, ಬೋಳಿ ಮಗನೆ, ಎಂತ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಇಲ್ಲಿಯವರೆಗೆ ಬಿಟ್ಟಿದ್ದೇ ತಪ್ಪು ಎಂತ ಕೈಯಿಂದ ಹೊಡೆದು, ಕೊರಚ ಜನಾಂಗದವರಾದ ನನ್ನನ್ನು ಜಾತಿ ನಿಂದನೆ ಮಾಡಿ, ಸಾಯಿಸಿ ಬಿಡುತ್ತೇವೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಆದ್ದರಿಂದ ಮೇಲ್ಕಂಡರವರುಗಳ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ












Click it and Unblock the Notifications