ಕ್ರೈಂ: ಕೂಡ್ಲಿಗಿ ಬಳಿ ಅಪಘಾತ ಜತೆಗೆ ಮತ್ತಷ್ಟು
ಬೆಂಗಳೂರು, ಅ.9: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರುಪಾಪುರ ಬಳಿ ನಡೆದಿದೆ. ಶನಿವಾರ ಮುಂಜಾನೆ 5 ಗಂಟೆಗೆ ಪ್ರಯಾಣಿಕರೆಲ್ಲ ನಿದ್ದೆಗೆ ಜಾರಿದ್ದ ಸಮಯ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ: ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಕೆಲಸ ನಿರ್ವಹಿಸಲು ಅಡ್ಡಿ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ 11/10/2013 ರಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯವರಾದ ಗೋವಿಂದ ಮೆನನ್, ಹೆಚ್.ಸಿ-12,ನಾಗರಾಜ್, ಪಿ.ಸಿ-388 ರವರು ಭೂವಿಜ್ಞಾನ ಮತ್ತು ಗಣಿ ಇಲಾಖೆ ಮತ್ತು ತಹಸೀಲ್ದಾರ್ ರವರ ಜೊತೆಯಲ್ಲಿ ಕೋಲಾರ ತಾಲ್ಲೂಕು, ನಾಗನಾಯಕನಹಳ್ಳಿ ಕೆರೆಯ ಬಳಿ ಅಕ್ರಮ ವಾಗಿ ಮರಳು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ದಾಳಿ ಮಾಡುವ ಸಲುವಾಗಿ ಕರ್ತವ್ಯಕ್ಕೆ ಹೋಗಿದ್ದರು.
ಈ ಸಮಯದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ಯಾಕ್ಟರ್ ಕೆ.ಎ-07, ಟಿ-4188 ಮತ್ತು ಜೆ.ಸಿ.ಬಿ ನಂ-ಕೆ-07, ಎಂ-3153 ವಾಹನಗಳನ್ನು ವಶಪಿಡಿಸಿಕೊಂಡು ಠಾಣೆಗೆ ತೆಗೆದುಕೊಂಡು ಮುದುವಾಡಿ ಸರ್ಕಾರಿ ಶಾಲೆಯ ಬಳಿ ಬರುತ್ತಿದ್ದಾಗ ಟ್ಯಾಕ್ಟರ್ ಮಾಲೀಕ ಹೋಳೂರು ಗ್ರಾಮದ ವಾಸಿ ಲೋಕೇಶ್ ಎದುರುಗೊಂಡಿದ್ದಾರೆ.
ಯಾರೋ ನಿಮಗೆ ಈ ಟ್ಯಾಕ್ಟರಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದು, ಎಂತ ಅವಾಚ್ಯ ಶಬ್ದಗಳಿಂದ ಬೈದು, ಸಮವಸ್ತ್ರದಲ್ಲಿದ್ದ ನಾಗರಾಜ್ ರವರನ್ನು ಎಳೆದಾಡಿ, ಹಲ್ಲೆ ಮಾಡಿ, ಪ್ರಾಣ ಬೆದರಿಕೆ ಹಾಕಿ, ಸರ್ಕಾರಿ ಕೆಲಸವನ್ನು ನಿರ್ವಹಿಸಲು ಅಡ್ಡಿಪಡಿಸಿರುತ್ತಾನೆ. ತುಮಕೂರು, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ ಮುಂತಾದ ಕಡೆಗಳಿಂದ ಬಂದಿರುವ ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ

ತುಮಕೂರು
ಹೊಸಬಡಾವಣೆ ಪೊಲೀಸ್ ಠಾಣಾ UDR ನಂ- 17/2013 U/S 174 Cr.P.C
ಅ.11 ರಂದು ಪಿರ್ಯಾದಿ ಶ್ರೀನಿವಾಸ್ ಬಿನ್ ವೆಂಕೋಬ ರಾವ್(34) ಮಹಾಲಕ್ಷ್ಮಿ ಜ್ಯೂಯಲರ್ಸ್ ಅಂಗಡಿ ಮಾಲೀಕರು, ಎಸ್.ಎಸ್. ಪುರಂ ಮುಖ್ಯ ರಸ್ತೆ, ತುಮಕೂರು ನೀಡಿದ ದೂರಿನ ಸಾರಾಂಶ:
ಬೆಳಗ್ಗೆ 11-30 ಗಂಟೆಗೆ ಅಂಗಡಿ ಹತ್ತಿರ ಬಂದಾಗ ನಮ್ಮ ಅಂಗಡಿ ಕೆಳಗಡೆ ಇರುವ ಮೈಸೂರು ಟಾರ್ಪಾಲಿನ್ ಅಂಗಡಿ ಕೆಳಗೆ ಸಾರ್ವಜನಿಕರು ಗುಂಪಾಗಿ ನೋಡುತ್ತಿದ್ದು ನಾನು ಹತ್ತಿರ ಹೋಗಿ ನೋಡಲಾಗಿ ಸುಮಾರು 25 ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದು ಕಂಡು ಬಂದಿದ್ದು ಆತನ ವಾರಸುದಾರರ ಬಗ್ಗೆ ಅಕ್ಕ ಪಕ್ಕ ಹಾಗೂ ಸಾರ್ವಜನಿಕರನ್ನು ವಿಚಾರಿಸಿದರೂ ಸಹಾ ಯಾರೂ ದೊರೆತಿರುವುದಿಲ್ಲ. ತಾವುಗಳು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಕೋರಿ

ಚಿಕ್ಕಮಗಳೂರು ಕ್ರೈಂ
ಮಲ್ಲಂದೂರು ಪೊಲೀಸ್ ಠಾಣೆ ಮೊ.ಸಂ. 85/2013 - ಕಲಂ: 454 457 380 ಐಪಿಸಿ - ಆವತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡದ ಕಿಟಕಿಯ 02 ರಾಡ್‍ಗಳನ್ನು ಯಾರೋ ಕಳ್ಳರು ಬ್ಲೇಡ್ ನಿಂದ ಕೊಯ್ದು ಕಟ್ ಮಾಡಿ ಕಟ್ಟಡದ ಒಳಗೆ ಕಿಟಕಿ ಮುಖಾಂತರ ಪ್ರವೇಶ ಮಾಡಿ ಆಸ್ಪತ್ರೆಯ ಒಳಗೆ ಅಳವಡಿಸಿದ್ದ 1. ಎಲ್,ಜಿ,ಕಂಪನಿ ಎಲ್‍ಸಿಡಿ ಟಿವಿ, 2. ವಿಗಾರ್ಡ್ ಕಂಪನಿ ಡಿ2ಹೆಚ್ ಸೆಕ್ಟರ್ ಬಾಕ್, ಮತ್ತು 01 ಪಾಲ್ ಮೌಂಟ್ ಪ್ಯಾನ್ (ಎಲೆಕ್ಟ್ರಾನಿಕ್ಸ್ ) ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿಕೊಂಡು ಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳ ಅಂದಾಜು ಬೆಲೆ 33.870/- ರೂ ಆಗಿರುತ್ತೆ.

ಮಣಿಪಾಲ
ಉಡುಪಿ ತಾಲೂಕು ಹೆರ್ಗಾ ಗ್ರಾಮದ ವಿಜಯನಗರ ಕೋಡಿ ಎಂಬಲ್ಲಿ ತಮ್ಮ ವಾಸದ ಮನೆಯ ಕೋಣೆಯಲ್ಲಿ ದಿವಂಗತ ಚಂದು ನಾಯ್ಕ ಅವರ ಮಗ ರಮೇಶ ಎಂಬುವರು ಪಕ್ಕಾಸಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ರಿಕ್ಷಾ ಸೊಸೈಟಿಯಲ್ಲಿ ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬುದಾಗಿ ಶ್ರೀಮತಿ ಸುಶೀಲಬಾಯಿರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಸಂಖ್ಯೆ 54/2013 ಕಲಂ: 174 ಸಿ.ಆರ್ .ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಶಿವಮೊಗ್ಗ ಕ್ರೈಂ
ಪಿರ್ಯಾದಿ ರಾಮಚಂದ್ರ 51 ವರ್ಷ ವಾಸ ಮಿಳಘಟ್ಟ ರವರು ಅಕ್ಕ ಜಿ.ಪಿ.ನಾಗರತ್ನ(54) ಇವರು ಸೌಳಂಗ ರಸ್ತೆ ಚೌಡೇಶ್ವರಿ ದೇವಸ್ಥಾನದಹತ್ತಿರ ನಡೆದು ಕೊಂಡು ಹೋಗುತ್ತಿರುವಾಗ ರಂಗನಾಥ ಕೆ.ಎ 06 ಜಿ580 ರ 108 ರ ಅಂಬ್ಯುಲೆನ್ಸ್ ಚಾಲ ತನ್ನ ವಾಹನವನ್ನು ಆತಿ ವೇಗೆ ಹಾಗೂ ಅಜಾಗರುಕತೆಯಿಂದ ಚಲಿಸಿ ಡಿಕ್ಕಿ ಹೊಡೆಸಿದ ಪರಿಣಾಮ ಜಿ.ಪಿ.ನಾಗರತ್ನ ಇವರು ಕಳಗೆ ಬಿದ್ದ ರಕ್ತ ಗಾಯವಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ.

ದಾವಣಗೆರೆ ಕ್ರೈಂ
ಬಿಳಿಚೋಡು ಪೊಲೀಸ್ ಠಾಣೆ ಗುನ್ನೆ ನಂ: 147/2013, ಕಲಂ: ಹುಡುಗ ಕಾಣೆ.
ಪಿರ್ಯಾದಿ ಬಸವರಾಜ ತಮ್ಮ ಅಕ್ಕನಾದ ಭಾಗ್ಯಮ್ಮ, ಹಾಗು ಮಾವನಾದ ಅಂಜಿನಪ್ಪ ಇವರು ಪಿರ್ಯಾದಿಯ ಮನೆಯಲ್ಲಿಯೇ ಮಾಗಡಿ ಗ್ರಾಮದಲ್ಲಿ ವಾಸವಾಗಿದ್ದು, ಪಿರ್ಯಾದಿಯ ಅಕ್ಕನಾದ ಭಾಗ್ಯಮ್ಮಳು ಕು: ಶಿವು, 15ವರ್ಷ ಇವನಿಗೆ ದನಗಳಿಗೆ ಹುಲ್ಲು ತರಲಿಲ್ಲ ಅಂತ ಆಗಾಗ ಬೈದಾಡುತ್ತಿದ್ದಳು.
ಪಿರ್ಯಾದಿ ಅಳಿಯ ಹೊಲಕ್ಕೆ ಹುಲ್ಲು ತರಲೆಂದು ಹೋದವನು ವಾಪಾಸ್ ರಾತ್ರಿಯಾದರೂ ಮನೆ ಬಾರದೇ ಇದ್ದು, ಶಿವು ಪತ್ತೆ ಮಾಡಲು ಗ್ರಾಮದ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಶಿವು ಸ್ನೇಹಿತರು ಹಾಗು ಸಂಬಂಧಿಕರ ಊರುಗಳಲ್ಲಿ ಹೋಗಿ ಹುಡುಕಾಡಿದರೂ ಪತ್ತೆಯಾಗದೇ ಇರುವ ಕಾರಣ ದೂರು ನೀಡಿದ್ದು,
ಶಿವು ಕಾಣೆಯಾದ ಬಗ್ಗೆ ಜಗಳೂರು ಪಟ್ಟಣದ ಶ್ರೀಗುರುದರ್ಶಿನಿ ಹೋಟೆಲ್ ಕೆಲಸಗಾರ ಪ್ರಕಾಶ ಮೇಲೆ ಗುಮಾನಿ ಇರುತ್ತದೆ

ರಾಮನಗರ ಜಿಲ್ಲೆ
ದಿನಾಂಕ 11-10-2013 ರಂದು ಬೆಳಿಗ್ಗೆ 10-45 ಗಂಟೆಗೆ ಬಿಡದಿ ಪೊಲಿಸ್ ಠಾಣಾ ಸರಹದ್ದಿನ ಶೇಷಗಿರಿಹಳ್ಳಿ ಬಳಿ ಬೆಂಗಳೂರು - ಮೈಸೂರು ರಸ್ತೆ ಎಸ್.ವಿ.ಕಾಂಕ್ರೀಟ್ ಮಿಕ್ಸ್ ಫ್ಯಾಕ್ಟರಿ ಮುಂಭಾಗ ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ನಂ. ಕೆಎ-10-ಎಫ್-0099 ರ ಕೆಎಸ್‍ಆರ್‍ಟಿಸಿ ಬಸ್ ಅನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೇವಲಿಂಗಯ್ಯನಪಾಳ್ಯದ ವಾಸಿ ಅರ್ಜುನ್, 36ವರ್ಷ ಎಂಬವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆತನು ಸ್ಥಳದಲ್ಲೇ ಮೃತಪಟ್ಟು, ನಂತರ ಬಸ್ ರಸ್ತೆಯ ಮದ್ಯ ಭಾಗದ ಡಿವೈಡರ್‍ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದು ಬಸ್ಸಿನಲ್ಲಿದ್ದ 2-3 ಜನರಿಗೆ ಗಾಯವಾಗಿದ್ದು, ಈ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತೆ.












Click it and Unblock the Notifications