ಕಾರು ಪಲ್ಟಿ: ರಂಗಭೂಮಿ ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ ನಿಧನ, ಸಿಎಂ ಬೊಮ್ಮಾಯಿ ಸಂತಾಪ
ಬೆಂಗಳೂರು, ಏಪ್ರಿಲ್ 01: ರಸ್ತೆ ಅಫಘಾತದಿಂದಾಗಿ ರಂಗ ಕಲಾವಿದರಾದ ಮತ್ತು ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿದ್ದ ಬೆಳಗಲ್ಲು ವೀರಣ್ಣ ಅವರು (91) ಭಾನುವಾರ ನೀಧರಾದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಸಮೀಪ ಅವರು ಚಲಿಸುತ್ತಿದ್ದ ಕಾರು ಚಾಲನೆ ತಪ್ಪಿ ಪಲ್ಟಿಯಾಗಿ ಉರಳಿ ಬಿದ್ದು ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಅವರು ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಬೆಳಗಲ್ಲು ವೀರಣ್ಣನವರ ಪುತ್ರ ಹನುಮಂತಪ್ಪ ಅವರಿಗೂ ಗಾಯಗಳಾಗಿವೆ. ಅವರಿಗೆ ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡ ಚಳ್ಳಕೆರೆ ವ್ಯಾಪ್ತಿಯ ತಳಕು ಪೊಲೀಸ್ ಠಾಣಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ವೀಸ್ ಮಾಡಿಸಲಾಗಿದ್ದ ಕಾರಿನಲ್ಲಿ ಅವರು ಭಾನುವಾರ ಬೆಳಗ್ಗೆ ಬಳ್ಳಾರಿಯಿಂದ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಕಾರಿನ ಹಿಂದಿನ ವೀಲ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಚಳ್ಳಕೆರೆ ಸಮೀಪ ಪರಿಶೀಲನೆ ಮಾಡಿಸಿದರಾಯಿತು ಎಂದು ಸಾಗಿದ್ದೆವು. ಹಿರೇಹಳ್ಳಿ ಬಳಿ ಏಕಾಏಕಿ ಕಾರ್ ವ್ಹೀಲ್ ಎಕ್ಸಲ್ ಕಳಚಿದ್ದರಿಂದ ಕೂಡಲೇ ಕಾರು ಪಲ್ಟಿ ಆಗಿ ಈ ಅವಘಡ ಸಂಭಸಿತು ಎಂದು ಗಾಯಾಳು ಹಾಗೂ ವೀರಣ್ಣನವರ ಪತ್ರ ಹನಹಮಂತಪ್ಪ ಪೊಲೀಸರಿಗೆ ತಿಳಿಸಿದ್ದಾರೆ.
ಮೃತರು ಗಣಿ ನಾಡು ಬಳ್ಳಾರಿ ಜಿಲ್ಲೆ ಮೂಲದವರಾಗಿದ್ದು, ತೊಗಲು ಗೊಂಬೆ ಆಟ ಕಲೆಯ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದರು. ನಾಡೋಜ ಬೆಳಗಲ್ಲು ವೀರಣ್ಣ ಈ ಕಲೆಯನ್ನು ವಿದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದರು. ಈಕಲಾ ಪ್ರಸಾರಕ್ಕೆಂದು ಅವರು ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳವನ್ನು ಕಟ್ಟಿದ್ದರು.

ಬೆಳಗಲ್ಲು ವೀರಣ್ಣನವರು ನಮ್ಮ ನಾಡಿನ ಜಾನಪದ ಸಂಸ್ಕೃತಿಯನ್ನು, ತೊಗಲು ಗೊಂಬೆಯಾದ ಕಲೆಯನ್ನು ಅಮೆರಿಕ ಸೇರಿದಂತೆ ದೇಶದ ವಿವಿಧಡೆ ಪ್ರದರ್ಶಿಸಿದ್ದರು. ಸಪ್ತಸಾಗರ ದಾಟಿ ನಮ್ಮ ಕಲೆಯನ್ನು ತೋರ್ಪಡಿಸಿದ ಅಪರೂಪದ ಕಲಾವಿದರಲ್ಲಿ ಇವರು ಪ್ರಮುಖರು. ಅವರ ಈ ಸಾಧನೆಗೆ ಬಳ್ಳಾರಿ ಮೂಲದ ಬೆಳಗಲ್ಲು ವೀರಣ್ಣ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಅವರ ನಿಧನ ಸುದ್ದಿಗೆ ಮುಖ್ಯಮಂತ್ರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ವೀರಣ್ಣನವರ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ
ಬೆಳಗಲ್ಲು ವೀರಣ್ಣನವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ರಂಗ ಕಲಾವಿದರು, ಗೊಂಬ ಕಲಾತಂಡದ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತೊಗಲು ಗೊಂಬೆಯಾಟ ಎಂಬ ಜಾನಪದ ಕಲೆಗೆ ಹೊಸ ಸ್ಪರ್ಶ ನೀಡಿ, ಹೊಸ ವೈಭವವನ್ನು ಸೃಷ್ಟಿಸಿದ ಖ್ಯಾತ ರಂಗಭೂಮಿ ಮತ್ತು ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣನವರು ರಸ್ತೆ ಅಪಘಾತಕ್ಕೀಡಾಗಿ ಇಹಲೋಕ ತ್ಯಜಿಸಿದರು ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ. ನಿಧನದ ದುಃಖ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications