ಉಪಲೋಕಾಯುಕ್ತರೇ ಹೇಳ್ತಿದ್ದಾರೆ ಹಂಪ್ ಕಾನೂನುಬಾಹಿರ

speed-breakers-menace-in-karnataka-rectify-illegal-humps-upa-lokayukta
ಬೆಂಗಳೂರು, ಜ.28: ಬೆಂಗಳೂರರು ಜನರ ದೈನಂದಿನ ಬದುಕಿನಲ್ಲಿ ರೋಡ್ ಹಂಪ್ ಎಂಬ ಯಮದೂತನ ದರ್ಶನ ನಿತ್ಯನೂತನ. ಸ್ಪೀಡ್ ಬ್ರೇಕರ್ ಅಥವಾ ರೋಡ್ ಹಂಪ್ ಎಂದು ಇಂಗ್ಲಿಷಿನಲ್ಲಿ ಅಪ್ಯಾಯತೆಯಿಂದ ಕರೆಯಿಸಿಕೊಳ್ಳುವ ಈ ರಸ್ತೆಯ ಉಬ್ಬುತಗ್ಗುಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಮುಖ್ಯವಾಗಿ ಇದು ಅತ್ಯಂತ ಅವೈಜ್ಞಾನಿಕ. ರೋಡ್ ಹಂಪ್ ಹಾಕುವಾಗ ಅದರ ಅಗತ್ಯ ಎಷ್ಟಿದೆ/ ಹೇಗಿದೆ? ಅದನ್ನು ಯಾವ ಮಾದರಿಯಲ್ಲಿ ಹಾಕಬೇಕು ಎಂಬುದರ ಬಗ್ಗೆ ಕನಿಷ್ಠ ಅಧ್ಯಯನವನ್ನೂ ನಡೆಸದೆ ಅವುಗಳನ್ನು ಹಾಕಲಾಗುತ್ತದೆ ಎಂಬುದು ಪುರಾತನ ದೂರು. ಇದು ವಾಸ್ತವವೂ ಹೌದು.

ಈ ಬಾರಿ ಉಪ ಲೋಕಾಯುಕ್ತ ಜಸ್ಟೀಸ್ ಸುಭಾಷ್ ಬಿ ಆದಿ ಅವರೇ ಈ ಬಗ್ಗೆ ಮಾತನಾಡಿದ್ದು, ತಕ್ಷಣ ಇಂತಹ ಸ್ಪೀಡ್ ಬ್ರೇಕರ್ ಗಳನ್ನು ತೆಗೆಸಿ ಹಾಕಿ ಎಂದು ನೇರವಾಗಿ ಸರಕಾರಕ್ಕೆ ಬರೆದಿದ್ದಾರೆ.

ನಿತ್ಯ ಜನಜೀವನಕ್ಕೆ ತೊಡರುಗಾಲು ಹಾಕುತ್ತಿರುವ ಸ್ಪೀಡ್ ಬ್ರೇಕರ್ಸ್ ಅವೈಜ್ಞಾನಿಕ ಮತ್ತು ಕಾನೂನುಬಾಹಿರ. ಇದರಿಂದ ಅನೇಕ ಮಂದಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದು ಒಂದು ಬೆಂಗಳೂರಿನ ಕಥೆಯಲ್ಲ. ರಾಜ್ಯದ ತುಂಬೆಲ್ಲಾ ಇವು ಮನೆ ಮಾಡಿವೆ ಎಂದಿರುವ ಜಸ್ಟೀಸ್ ಸುಭಾಷ್ ಆದಿ ತಮ್ಮದೇ ಅನುಭವವನ್ನು ದೃಷ್ಟಾಂತವಾಗಿ ನೀಡಿದ್ದಾರೆ.

ಮೊನ್ನೆ ಮೈಸೂರಿಗೆ ಹೊರಟಿದ್ದೆ. ಅದಕ್ಕೂ ಮುನ್ನ ಗುಲ್ಬರ್ಗಾ ಮತ್ತಿತರ ನಗರಗಳ ಕಡೆ ಹೋಗಿದ್ದೆ. ಅಲ್ಲೂ ಇದೇ ಸ್ಪೀಡ್ ಬ್ರೇಕರ್ಸ್ ರಾಮಾಯಣ. ಅಂತಾಷ್ಟ್ರೀಯ ಮಟ್ಟದ ವಾನಹಗಳೂ ಇಂತಹ speed breakerಗಳನ್ನು ಹಾದುಹೋಗಲು ಶಕ್ತವಾಗಿಲ್ಲ ಎಂದು ಜಸ್ಟೀಸ್ ಸುಭಾಷ್ ಆದಿ ಹೇಳಿದ್ದಾರೆ.

ಹಿರಿಯ ನಾಗರಿಕರು, ಮಕ್ಕಳು ಮತ್ತು ಗರ್ಭಿಣಿಯರು ಇದರಿಂದ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಇದರ ಬಗ್ಗೆ ಜನ ನೇರವಾಗಿ ಲೋಕಾಯುಕ್ತ ಕಚೇರಿಗೆ ದೂರು ನೀಡುತ್ತಿದ್ದಾರೆ. ಹಾಗಾಗಿ ಇನ್ಮುಂದಾದರೂ ಸೂಕ್ತ ಸ್ಪೀಡ್ ಬ್ರೇಕರ್ ಅಥವಾ ರೋಡ್ ಹಂಪುಗಳನ್ನು ಅಳವಡಿಸುವಂತೆ ಸೂಚಿಸಿ ರಾಜ್ಯ ಸರಕಾರಕ್ಕೆ ಪತ್ರ ಬರೆಯುವುದಾಗಿ ಜಸ್ಟೀಸ್ ಸುಭಾಷ್ ಬಿ ಆದಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+