ಇದೇ ಮೊದಲ ಬಾರಿಗೆ ಕೇರಳ, ತಮಿಳುನಾಡು, ಕರ್ನಾಟಕ ಗಡಿಯಲ್ಲಿ ಆನೆ ಗಣತಿ
ಬೆಂಗಳೂರು, ಮೇ 19: ಇದೇ ಮೊದಲ ಬಾರಿಗೆ ಕರ್ನಾಟಕದ ಜೊತೆ ಗಡಿ ಹಂಚಿಕೊಂಡಿರುವ 4 ರಾಜ್ಯಗಳಲ್ಲಿ ಆನೆಗಳ ವಿಶೇಷ ಗಣತಿ ನಡೆಯಲಿದೆ. ಪ್ರತಿ 5 ವರ್ಷಗಳಿಗೊಮ್ಮೆ ಆನೆಗಳ ಗಣತಿ ನಡೆಯುತ್ತಿದೆ. ಆದರೆ ಮೊದಲ ಬಾರಿಗೆ ರಾಜ್ಯದ ಗಡಿ ಭಾಗದಲ್ಲಿ ಮಾತ್ರ ಆನೆಗಳ ಗಣತಿ ನಡೆಯುತ್ತಿದೆ.
ಮೇ 23 ರಿಂದ 25ರ ತನಕ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿಗಳಲ್ಲಿ ವಿಶೇಷವಾಗಿ ಆನೆಗಳ ಗಣತಿಯನ್ನು ನಡೆಸಲಾಗುತ್ತಿದೆ, ಗಣತಿಗಾಗಿ ಅರಣ್ಯ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಆನೆ ಮತ್ತು ಮಾನವ ಸಂಘರ್ಷ ತಡೆಯಲು, ವಿವಿಧ ಯೋಜನೆ ರೂಪಿಸಲು ಅನುಕೂಲವಾಗುವಂತೆ ಆನೆಗಳ ಗಣತಿ ನಡೆಸಲಾಗುತ್ತಿದೆ. ಮಾರ್ಚ್ 2024ರಲ್ಲಿ ನಡೆದ ಅಂತರರಾಜ್ಯ ಅರಣ್ಯಾಧಿಕಾರಿಗಳ ಸಭೆಯಲ್ಲಿ ಗಡಿಭಾಗದಲ್ಲಿ ಮಾತ್ರ ಆನೆಗಳ ಗಣತಿ ನಡೆಸಲು ತೀರ್ಮಾನಿಸಲಾಗಿತ್ತು.
ಬಂಡೀಪುರದಲ್ಲಿ ಸಭೆ: ಮಾರ್ಚ್‌ನಲ್ಲಿ ಬಂಡೀಪುರದಲ್ಲಿ ನಡೆದ ಸಭೆಯಲ್ಲಿ ಆನೆಗಳ ಗಣತಿ ಕುರಿತು ಚರ್ಚೆಯಾಗಿತ್ತು. ಕರ್ನಾಟಕದಲ್ಲಿ ರೇಡಿಯೋ ಕಾಲರ್ ಅಳವಡಿಕೆ ಮಾಡಿದ್ದ ಆನೆ ವಯನಾಡಿನಲ್ಲಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿತ್ತು. ಹಾಸನದಲ್ಲಿ ಹಿಡಿದಿ ರೇಡಿಯೋ ಕಾಲರ್ ಹಾಕಿದ್ದ ಆನೆ ವಯನಾಡಿಗೆ ಹೋದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿತ್ತು.
ಆನೆಗಳ ವಲಸೆ ತಡೆಯುವುದು, ಆನೆ-ಮಾನವ ಸಂಘರ್ಷ ತಪ್ಪಿಸಲು ಕ್ರಮಗಳನ್ನು ಕೈಗೊಳ್ಳಲು ಅಂತರರಾಜ್ಯ ಗಡಿಯಲ್ಲಿ ಆನೆಗಳ ವಿಶೇಷ ಗಣತಿ ಮಾಡಲು ಒಮ್ಮತದ ಅಭಿಪ್ರಾಯ ವ್ಯಕ್ತವಾಗಿತ್ತು. ಈಗಾಗಲೇ ಆನೆಗಳ ಹಾವಳಿ ತಪ್ಪಿಸಲು 5 ಹಂತದ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಗಿದೆ. ಇದರ ಮೊದಲ ಹಂತವಾಗಿ ಆನೆಗಳ ಸಂಖ್ಯೆನ್ನು ಲೆಕ್ಕಹಾಕಲಾಗುತ್ತಿದೆ.
2022-23ರಲ್ಲಿ ನಡೆದ ಆನೆಗಳ ಗಣತಿಯಲ್ಲಿ ದಕ್ಷಿಣದ ರಾಜ್ಯದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿತ್ತು. ರಾಜ್ಯದಲ್ಲಿ 6395 ಆನೆಗಳಿದ್ದವು. 2017ರ ಬಳಿಕ ರಾಜ್ಯದಲ್ಲಿ ಆನೆಗಳ ಸಂಖ್ಯೆ 346 ಏರಿಕೆಯಾಗಿದೆ ಎಂದು 2023ರ ಆಗಸ್ಟ್‌ನಲ್ಲಿ ಪ್ರಕಟವಾದ ಏಷ್ಯಾನ್ ಎಲಿಫೆಂಟ್ ಪಾಪ್ಯುಲೇಷನ್ ಮಧ್ಯಂತರ ಸಮೀಕ್ಷಾ ವರದಿ ಹೇಳಿತ್ತು.
ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಗಡಿಗಳಲ್ಲಿ ಮಾತ್ರ ಈ ವಿಶೇಷ ಆನೆಗಳ ಗಣತಿ ನಡೆಯಲಿದೆ. ಮೇ 23ರಂದು ಆನೆಗಳ ಸಂಖ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಟ್ರಾನ್ಸಿಟ್ ಮಾದರಿಯಲ್ಲಿ ಮೇ 24ರಂದು ಗಣತಿ ನಡೆಯಲಿದೆ. ಮೇ 25ರಂದು ವಾಟರ್ ಹೋಲ್ ಕೌಂಟ್ ಮೂಲಕ ಗಣತಿ ನಡೆಯಲಿದೆ.
ರೆಡಿಯೋ ಕಾಲರ್ ಹಾಕಿರುವ ಆನೆಗಳನ್ನು ಸುಲಭವಾಗಿ ಗುರುತಿಸಲಾಗುತ್ತದೆ. ಕಾಡಾನೆಗಳನ್ನು ಮಾತ್ರ ಗಣತಿ ಮಾಡಲಾಗುತ್ತದೆ. ಪ್ರತಿ ಐದು ವರ್ಷಕ್ಕೊಮ್ಮೆ ದೇಶಾದ್ಯಂತ ಆನೆಗಳ ಗಣತಿ ನಡೆಯುತ್ತದೆ. ಈಗ ವಿಶೇಷವಾಗಿ ಗಡಿ ಭಾಗದಲ್ಲಿ ಮಾತ್ರ ಗಣತಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕೋಲಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಕಾವೇರಿ ವನ್ಯಜೀವಿ ತಾಣ, ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ ರಾಷ್ಟ್ರೀಯ ಉದ್ಯಾನ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಕೊಡಗು-ಕೇರಳ ರಾಜ್ಯ ಗಡಿಯಲ್ಲಿ ಗಣತಿ ನಡೆಯಲಿದೆ.
ಕರ್ನಾಟಕದಲ್ಲಿ ಕಾಡಾನೆಗಳನ್ನು ಹಿಡಿದು ರೆಡಿಯೋ ಕಾಲರ್ ಆಳವಡಿಕೆ ಮಾಡುವ ಕಾರ್ಯಾಚರಣೆ ಆಗಾಗ ನಡೆಯುತ್ತದೆ. ಕೊಡಗು ಜಿಲ್ಲೆ ವಿರಾಜಪೇಟೆ ವಿಭಾಗದ ತಿತಿಮತಿ ವಲಯದ ವ್ಯಾಪ್ತಿಗೆ ಒಳಪಡುವ ಬಾಡಗ ಬಾಣಂಗಾಲ ಗ್ರಾಮದ ಎಲಿಕಲ್ ಎಸ್ಟೇಟ್‍ಗೆ (ಬಿಬಿಟಿಸಿ) ಒಳಪಡುವ ಬಾಡಗ ಬಾಣಂಗಾಲ ಕಾಫಿ ಎಸ್ಟೇಟ್ ಹಾಗೂ ಸುತ್ತಮುತ್ತಲಿನ ತೋಟಗಳಲ್ಲಿ ಇರುವ 3 ಕಾಡಾನೆಗಳನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಇತ್ತೀಚೆಗೆ ನಡೆದಿತ್ತು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು












Click it and Unblock the Notifications