Tirupati: ತಿಮ್ಮಪ್ಪನ ದರ್ಶನಕ್ಕೆ ತಿರುಪತಿ, ಪ್ರವಾಸಕ್ಕೆ ಮುರುಡೇಶ್ವರಕ್ಕೆ ತೆರಳಲಿರುವ ಪ್ರಯಾಣಿಕರೇ ಗಮನಿಸಿ
ಬೆಂಗಳೂರು, ಮಾರ್ಚ್ 06: ತಿರುಪತಿ, ಮುರುಡೇಶ್ವರ ಸ್ಥಳಗಳಿಗೆ ತೆರಳಲಿರುವ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಮತ್ತು ದಕ್ಷಿಣ ಮಧ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ತಿಮ್ಮಪ್ಪನ ದರ್ಶನಕ್ಕೆ ತೆರಳಲಿರುವ ಭಕ್ತಾದಿಗಳಿಗೆ ತಿರುಪತಿ ನಿಲ್ದಾಣದಲ್ಲಿ ರೈಲು ನಿಲುಗಡೆಯಿಲ್ಲ ಎಂದು ರೈಲ್ವೆ ಇಲಾಕೆ ಸೂಚನೆ ಹೊರಡಿಸಿದೆ. ಹಾಗೆಯೇ ಮುರುಡೇಶ್ವರಕ್ಕೆ ತೆರಳುವವರಿಗೂ ಪ್ರಮುಖ ಸೂಚನೆ ನೀಡಿದೆ.
ಮಾರ್ಚ್ 7 ರಂದು ಮುರುಡೇಶ್ವರ ಮತ್ತು ಸೇನಾಪುರ ಭಾಗದ ನಡುವೆ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ ಕೆಲ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ಕೊಂಕಣ ರೈಲ್ವೆಯು ಸೂಚಿಸಿದೆ. ಮಾರ್ಚ್ 6 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16585 ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಮುರುಡೇಶ್ವರ ಎಕ್ಸ್ ಪ್ರೆಸ್ ರೈಲು ಕುಂದಾಪುರ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಕುಂದಾಪುರ ಮತ್ತು ಮುರುಡೇಶ್ವರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ಮಾರ್ಚ್ 7 ರಂದು ರೈಲು ಸಂಖ್ಯೆ 16586 ಮುರುಡೇಶ್ವರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಕುಂದಾಪುರ ನಿಲ್ದಾಣದಿಂದ ತನ್ನ ನಿಗದಿತ ಸಮಯಕ್ಕೆ ಪ್ರಾರಂಭವಾಗಲಿದೆ. ಮುರುಡೇಶ್ವರ ಮತ್ತು ಕುಂದಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ತಿರುಪತಿ ನಿಲ್ದಾಣದಲ್ಲಿ ನಿಲ್ಲಲ್ಲ ರೈಲು!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವವರಿಗೆ ರೈಲ್ವೆ ಇಲಾಖೆ ಪ್ರಮುಖ ಮಾಹಿತಿ ನೀಡಿದೆ. ರೈಲಿನಲ್ಲಿ ತಿರುಪತಿಗೆ ತೆರಳುವವರು ತಿರುಪತಿ ನಿಲ್ದಾಣದಲ್ಲಿ ರೈಲು ನಿಲುಗಡೆಯಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ನಿಮಿತ್ತ ಈ ಕೆಳಗಿನ ರೈಲುಗಳ ಮಾರ್ಗ ಬದಲಾವಣೆ ಮಾಡಲು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
1. ಮಾರ್ಚ್ 11 ಮತ್ತು 18, 2024 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12890 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಟಾಟಾನಗರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕಟ್ಟಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ.

2. ಮಾರ್ಚ್ 12, 14, 19, ಮತ್ತು 21, 2024 ರಂದು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 12836 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ಹಟಿಯಾ ದ್ವಿಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕಟ್ನಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಹೀಗಾಗಿ ಮಾರ್ಚ್ 11 ರಿಂದ ಸುಮಾರು ಹತ್ತು ದಿನಗಳವರಗೆ ಅಂದರೆ ಮಾರ್ಚ್ 21ರ ವರೆಗೆ ತಿರುಪತಿ ರೈಲು ನಿಲ್ದಾನದಲ್ಲಿ ರೈಲು ನಿಲುಗಡೆಯಾಗುವುದಿಲ್ಲ. ಹೀಗಾಗಿ ಭಕ್ತರು ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಿದೆ. ತಿರುಪತಿಗೆ ಸಮೀಪದಲ್ಲಿರುವ ರೇಣಿಗುಂಟ ರೈಲು ನಿಲ್ದಾಣದಲ್ಲಿ ಇಳಿಯಬಹುದು.
ತಿರುಪತಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್!
ಇನ್ನು, ಬೆಂಗಳೂರಿನಿಂದ ತಿರುಪತಿಗೆ ತೆರಳುವವರು ವಂದೇ ಭಾರತ್ ಎಕ್ಸ್‌ಪ್ರೆಸ್ ಬೇಡಿಕೆಯಿಟ್ಟ ಕಾರಣಕ್ಕೆ ಒಂದು ವಾರದೊಳಗೆ ಬೆಂಗಳೂರು ಮತ್ತು ರೇಣಿಗುಂಟಾ ನಡುವೆ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಓಡಿಸಲು ರೈಲ್ವೆ ಮಂಡಳಿ ಚಿಂತಿಸಿದೆ. ರೇಣಿಗುಂಟಾ ರೈಲು ನಿಲ್ದಾಣ ತಿರುಪತಿ ದೇವಾಲಕ್ಕೆ ಸಮೀಪದಲ್ಲಿರುವ ಕಾರಣ ಭಕ್ತಾಧಿಗಳಿಗೆ ಹೆಚ್ಚು ಪ್ರಯೋಜನವಾಗಲಿದೆ.












Click it and Unblock the Notifications