Siddaramaiah: ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಸಚಿವ ಸಂತೋಷ ಲಾಡ್ ಸ್ಫೋಟಕ ಸ್ಪಷ್ಟನೆ!

ಸಿಎಂ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ಮೈಸೂರಿನ 'ಮುಡಾ' ಸೈಟ್ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂಬ ಆರೋಪ ಕೇಳಿಬಂತು ಈ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದೂ ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಬದಲಾವಣೆ ಮಾಡಬೇಕು ಅನ್ನೋ ಒತ್ತಡ ಕೂಡ ಹೆಚ್ಚಾಗಿದೆ. ಇಂತಹ ಸಮಯದಲ್ಲೇ, ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಸಚಿವ ಸಂತೋಷ ಲಾಡ್ ಸ್ಫೋಟಕ ಸ್ಪಷ್ಟನೆ ನೀಡಿದ್ದಾರೆ!

ಕರ್ನಾಟಕದ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಜೋರಾಗಿದ್ದು, ಕರ್ನಾಟಕ ಸರ್ಕಾರದ ಮೇಲೆ ಇದು ದೊಡ್ಡ ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಬಣ ಹಾಗೂ ಸಿಎಂ‌ ಸಿದ್ದರಾಮಯ್ಯ ಬಣ ಅಂತಾ ಕರ್ನಾಟಕ ಕಾಂಗ್ರೆಸ್ ಒಡೆದು ಹೋಗಿದೆ ಅಂತಾ ಬಿಜೆಪಿ & ಜೆಡಿಎಸ್ ನಾಯಕರು ಆರೋಪ ಮಾಡ್ತಿದ್ದರು.

Siddaramaiah Resignation Rumours And Discover What Santosh Lad Said About It

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಈಗ ಕೆಳಗೆ ಇಳಿಸುವುದು ಗ್ಯಾರಂಟಿ ಎಂಬ ಸುದ್ದಿ ಕೂಡ ಹಬ್ಬಿತ್ತು. ಆದ್ರೆ ಈಗ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಸಚಿವ ಸಂತೋಷ ಲಾಡ್ ಸ್ಫೋಟಕ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ರೆ ಈಗ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸುವ ಬಗ್ಗೆ, ಸಚಿವರು ಹೇಳಿದ್ದೇನು? ಮುಂದೆ ಓದಿ.

ಸಿಎಂ ಬದಲಾವಣೆ ಈಗ ಅಪ್ರಸ್ತುತ!

ಹೌದು, ಡಿಕೆಶಿ ಹಾಗೂ ಸಿಎಂ‌ ಬಣ ರಾಜಕೀಯ ಅಂತಾ ಎಂತಹದ್ದೂ ಇಲ್ಲ. ಈಗಾಗಲೇ ಸಿಎಂ ಹಾಗೂ ಡಿಸಿಎಂ‌ ಸ್ಪಷ್ಟೀಕರಣ ನೀಡಿದ್ದಾರೆ. ಸಿಎಂ ಬದಲಾವಣೆ ಈಗ ಅಪ್ರಸ್ತುತ ಎಂದು ಸಚಿವ ಸಂತೋಷ ಲಾಡ್ ಅವರು ತುಂಬಾ ಖಡಕ್ ಆಗಿ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಬದಲಾವಣೆ ವದಂತಿಗಳ ಕುರಿತು ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ಅದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಚಿವ ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತಾ ಹೇಳಿದರು, ಈ ಮೂಲಕ ಎಲ್ಲಾ ಸರಿ ಹೋಗಿದೆ ಎಂಬ ಮುನ್ಸೂಚನೆ ನೀಡಿದಂತೆ ಆಗಿದೆ.

ಉಳುವವನೇ ಭೂಮಿ ಒಡೆಯ ಯೋಜನೆ...

ಹಾಗೇ ವಕ್ಫ್ ಬಗ್ಗೆ ಕೂಡ ಸಚಿವ ಸಂತೋಷ ಲಾಡ್ ಅವರು ಸ್ಪಷ್ಟನೆ ನೀಡಿದರು. ಬಡವರಿಗೆ ಭೂಮಿ ಕೊಟ್ಟಿದ್ದು ಕಾಂಗ್ರೆಸ್ ಆಡಳಿತ. ಉಳುವವನೇ ಭೂಮಿ ಒಡೆಯ ಯೋಜನೆಯನ್ನ ಜಾರಿ ಮಾಡಿದ್ದೇ ಕಾಂಗ್ರೇಸ್, ಆದರೆ ಬಿಜೆಪಿ ಆಗ ಶ್ರೀಮಂತರ ಪರವಾಗಿ ನಿಂತು ಈ ಯೋಜನೆಯನ್ನ ವಿರೋಧ ಮಾಡಿತ್ತು ಅಂತ ಗಂಭೀರ ಆರೋಪ ಮಾಡಿದ್ರು. ಹೀಗಿದ್ದಾಗ ವಕ್ಫ್ ವಿಚಾರ ಮುಂದೆ ಇಟ್ಟುಕೊಂಡು ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡಿದರು. ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+