ಶಾಕಿಂಗ್! ಕರ್ನಾಟಕದ ಪ್ರಮುಖ ಡ್ಯಾಂ ಗೇಟ್‌ನಲ್ಲಿ ಈ ಸಮಸ್ಯೆ: ಭಾರೀ ಆತಂಕ !
ಕರ್ನಾಟಕದ ಮತ್ತೊಂದು ಡ್ಯಾಂನಲ್ಲಿ ಸಮಸ್ಯೆ ಎದುರಾಗಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದು ಸಾಕಷ್ಟು ನೀರು ವ್ಯರ್ಥವಾಗಿತ್ತು. ಇದೀಗ ರಾಜ್ಯದ ಮತ್ತೊಂದು ಡ್ಯಾಂನ ಬ್ಯಾರೇಜ್‌ನಲ್ಲೂ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿಂದೆ ಡ್ಯಾಮ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆಗೆ ರಾಜ್ಯದ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯ ಸರ್ಕಾರವು ಡ್ಯಾಂಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎನ್ನುವ ಆರೋಪವೂ ಇದೆ.
ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದ್ದ ಡ್ಯಾಂನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿತ್ತು. ಇದೀಗ ಅಂತಹದ್ದೇ ಒಂದು ಸಮಸ್ಯೆ ಬೆಳಗಾವಿಯಲ್ಲೂ ಆಗಿದೆ. ಬೆಳಗಾವಿಯ ಹಿಪ್ಪರಗಿ ಬ್ಯಾರೇಜ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಅವಳಿ ತಾಲ್ಲೂಕಿನ ಜೀವನಾಡಿ ಕೃಷ್ಣ ನದಿಗೆ ಅಡ್ಡಲಾಗಿ ಹಿಪ್ಪರಗಿ ಬ್ಯಾರೇಜ್ ಇದೆ. ಆದರೆ, ಈಗ ಗೇಟ್ ಮುಚ್ಚುವ ಸಂದರ್ಭದಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡಿದೆ.

ಈ ತಾಂತ್ರಿಕ ದೋಷದಿಂದ ಬ್ಯಾರೇಜ್‌ನಿಂದ ಬರೋಬ್ಬರಿ 6000 ಕ್ಯೂಸೆಕ್ ನೀರು ಹೊರಹರಿವು ಹೊಂದಿದೆ. ಕಳೆದ ಎರಡು ದಿನಗಳಿಂದ ಗೇಟ್‌ನಲ್ಲಿ ತಾಂತ್ರಿಕ ದೋಷ ದೋಷ ಕಾಣಿಸಿಕೊಂಡಿದೆ. ಇಲ್ಲಿನ ಬ್ಯಾರೇಜ್‌ನಲ್ಲಿ ಒಟ್ಟು 6 ಟಿಎಂಸಿ ನೀರು ಸಂಗ್ರಹವಾಗುವ ಸಾಮರ್ಥ್ಯ ಇದೆ. ಇಲ್ಲಿನ 7ನೇ ಗೇಟಿನಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.
ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ: ಬೆಳಗಾವಿಯ ಚಿಕ್ಕೋಡಿ ಹಿಪ್ಪರಗಿ ಬ್ಯಾರೇಜ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ತುಂಗಾಭದ್ರಾ ಜಲಾಶಯದಲ್ಲಿ ಸಮಸ್ಯೆ: ಈಚೆಗೆ ಕೊಪ್ಪಳದ ತುಂಗಾಭದ್ರಾ ಜಲಾಶಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಲವು ಸರ್ಕಸ್‌ಗಳ ನಂತರ ಈ ಸಮಸ್ಯೆ ಪರಿಹಾರವಾಗಿತ್ತು. ಧಾರಾಕಾರ ಮಳೆಯಿಂದಾಗಿ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದಿತ್ತು. ಇದರಿಂದಾಗಿ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿ ಸಂಕಷ್ಟವಾಗಿತ್ತು. ಆಂಧ್ರ ಪ್ರದೇಶ ಹಾಗೂ ಬೆಂಗಳೂರಿನಿಂದ ತಜ್ಞರ ತಂಡ ಕ್ರೆಸ್ಟ್ ಗೇಟ್ ದುರಸ್ತಿ ಕಾರ್ಯವನ್ನು ನಡೆಸಿತ್ತು.
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ನಲ್ಲಿ ತುಂಗಭದ್ರಾ ನದಿಗೆ ಅಡ್ಡವಾಗಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಈಚೆಗೆ ಡ್ಯಾಂನ ಕ್ರೆಸ್ಟ್ ಗೇಟ್ 19ರ ಚೈನ್ ಲಿಂಕ್ ಮುರಿದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿತ್ತು. ಧಾರಾಕಾರ ಮಳೆ ಹಾಗೂ ನಿರ್ವಹಣೆ ಸಮಸ್ಯೆಯಿಂದ ಈ ದೋಷ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿತ್ತು. ಗೇಟ್ ಮುರಿದ ಪರಿಣಾಮ ಒಂದೇ ಗೇಟ್ ಮೇಲೆ ಒತ್ತಡ ಹೆಚ್ಚಾಗಿತ್ತು. ಈ ರೀತಿ ಗೇಟ್ ಮುರಿದಿದ್ದರಿಂದ ಡ್ಯಾಂನ ಹೊರ ಹರಿವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಡ್ಯಾಂನ ಹೊರ ಹರಿವು 70ನಿಂದ 1 ಲಕ್ಷ ಕ್ಯುಸೆಕ್‌ಗೆ ಹೆಚ್ಚಳವಾಗಿತ್ತು. ಇದೀಗ ಬೆಳಗಾವಿಯಲ್ಲೂ ಸಮಸ್ಯೆ ಆಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications