Ration Delayed: ದಿನವಿಡೀ ಕಾದುನಿಂತರೂ ಸಿಗದ ರೇಷನ್, ಪಡಿತರ ವಿತರಣೆ ಕುಂಟುತ್ತಿರುವುದೇಕೆ?
ಬೆಂಗಳೂರು, ಅಕ್ಟೋಬರ್ 25: ರಾಜ್ಯದಲ್ಲಿ ದೀಪಾವಳಿ ಸಂಭ್ರಮ ಕಳೆಗಟ್ಟುತ್ತಿದ್ದು, ಆಚರಣೆಗೆ ದಿನಗಣನೆ ಶುರುವಾಗಿದೆ. ಮತ್ತೊಂದೆಡೆ ವ್ಯಾಪಕ ಮಳೆ ಸುರಿಯಲಾರಂಭಿಸಿದೆ. ಮಳೆ ಮಧ್ಯೆ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಪಡಿತರ ಕಾರ್ಡುದಾರರು ಆಹಾರ ಧ್ಯಾನಗಳು ಸಿಗದೇ, ದಿನವಿಡೀ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಂತು ಬರಿಗೈನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದಾರೆ. ಹಬ್ಬದ ವೇಳೆ ರೇಷನ್ ಸಿಗದೇ ಬಡವರು ಕಂಗಾಲಾಗಿದ್ದಾರೆ.
ಹೌದು, ಪ್ರತಿ ತಿಂಗಳು 10 ರಿಂದ 15ನೇ ತಾರೀಖಿನೊಳಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ರೇಷನ್ ಸಿಗುತ್ತಿತ್ತು. ಆದರೆ ಈ ಬಾರಿ ಸರ್ವರ್ ಸಮಸ್ಯೆಯಿಂದಾಗಿ ಹಬ್ಬದ ಸಂದರ್ಭದಲ್ಲಿಯೇ ಪಡಿತರ ಸಿಗದೇ ಜನಸಾಮಾನ್ಯರು ನರಳುವಂತಾಗಿದೆ. ಇದಕ್ಕೆ ರೇಷನ್ ವಿತರಣೆಯ ತಂತ್ರಾಂಶದಲ್ಲಿ ಕಂಡು ಬಂದ ತಾಂತ್ರಿಕ ಲೋಪದೋಷವೇ (ಸರ್ವರ್ ಸಮಸ್ಯೆ) ಕಾರಣವೆಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ತಿಂಗಳ ಎರಡನೇ ವಾರ ಸಿಗುತ್ತಿದ್ದ ರೇಷನ್ ಈ ಬಾರಿ ನಾಲ್ಕನೇ ವಾರವಾದರೂ/ತಿಂಗಳು ಕಳೆದೂ ಸಿಗುತ್ತಿಲ್ಲ. ಮೂಲಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಕೇವಲ ಶೇಕಡಾ 5-10ರಷ್ಟು ಮಾತ್ರವೇ ಪಡಿತರ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗಿದೆ.
ಬೇಗ ಬೇಗ ವಿತರಣೆಗೆ ಆಗುತ್ತಿರುವ ಸಮಸ್ಯೆ ಏನು?
ರಾಜ್ಯ ಸರ್ಕಾರದ ಸುಮಾರು 30 ಇಲಾಖೆಗಳು ಆಡಳಿತ ದೃಷ್ಟಿಯಿಂದ ಒಂದೇ ವೆಬ್‌ಸೈಟ್ ಅನ್ನು ಬಳಕೆ ಮಾಡುತ್ತಿದ್ದವು. ಇದರಿಂದ ಉಂಟಾಗುತ್ತಿದ್ದ ಸಮಸ್ಯೆ ಕಾರಣದಿಂದ 'ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ'ಯು ತನ್ನದೇ ಆದ ಪ್ರತ್ಯೇಕ ತಂತ್ರಾಂಶ ತೆರೆದಿತ್ತು. ಅದರಿಂದ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿತ್ತು. ಈ ಮೊದಲು ಒಟಿಪಿ ವ್ಯವಸ್ಥೆ ಇತ್ತು. ಅದನ್ನು ಕೈ ಬಿಟ್ಟು, ಸರ್ವರ್ ಮುಖೇನ್ ಬೆರಳು ಗುರುತು ಪಡೆದು ಚೀಟಿ ನೀಡಿ ಧಾನ್ಯ ವಿತರಣೆ ಮಾಡಲಾಗುತ್ತಿದೆ.

ಇತ್ತೀಚೆಗೆ ಈ ಸರ್ವರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ವಾರಗಳಾದರೂ ಆ ಸಮಸ್ಯೆಗೆ ಮುಕ್ತ ಸಿಕ್ಕಿಲ್ಲ. ಇತ್ತ ದೀಪಾವಳಿ ಹತ್ತಿರ ಬರುತ್ತಿದ್ದಂತೆ ಮನೆಗೆ ಬೇಕಾದ ಅಕ್ಕಿ, ಗೋಧಿ, ಸಕ್ಕರೆ, ಜೋಳ, ರಾಗಿ, ಅಡುಗೆ ಎಣ್ಣೆ ತರಲು ನ್ಯಾಯಬೆಲೆ ಅಂಗಡಿ ಹೋದವರು ಮಳೆಯಲ್ಲಿಯೇ ಗಂಟೆಗಟ್ಟಲೇ ನಿಂತರು ರೇಷನ್ ಸಿಗುತ್ತಿಲ್ಲ. ಸರ್ವರ್ ಸಮಸ್ಯೆ ನಾಳೆ ಬನ್ನಿ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ.
ಹೊಸ ತಂತ್ರಾಂಶದಲ್ಲಿ ಮಾತ್ರವಲ್ಲದೇ, ಹೊಸ ಲಾಗಿನ್‌ನಲ್ಲೂ ಸಮಸ್ಯೆ ಆಗುತ್ತಿದೆ. ಲಾಗಿನ್ ಆಗಿ ರೇಷನ್ ವಿತರಿಸಲು ಸಿಬ್ಬಂದ ಹೆಣಗಾಡುವ ಪರಿಸ್ಥಿತಿ ಸದ್ಯಕ್ಕೆ ನಿರ್ಮಾಣವಾಗಿದೆ.
ದೀಪಾವಳಿಗೆ ಕಾರ್ಡುದಾರರಿಗೆ ಸಿಗುತ್ತಾ ರೇಷನ್?
ಈ ಸಮಸ್ಯೆ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಚಾಮರಾಜನಗರ, ಹಾವೇರಿ, ಬಳ್ಳಾರಿ ಹೀಗೆ ಅನೇಕ ಕಡೆಗಳಲ್ಲಿ ಉಂಟಾಗಿದೆ. ಅಲ್ಲಿನ ಜನರಿಗೆ ದೀಪಾವಳಿಗೆ ರೇಷನ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಈ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ರಾಜಧಾನಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ನಿಧಾನಗತಿಯಲ್ಲಿ ರೇಷನ್ ವಿತರಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೂಡಲೇ ಸರ್ಕಾರ ನ್ಯಾಯಬೆಲೆ ಅಂಗಡಿ ತಂತ್ರಾಂಶ ಸರಿಪಡಿಸಿಕೊಂಡು ವಾರಗಳಿಂದಲೂ ಕಾಯುತ್ತಿರುವ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆ ಧವಸ ಧಾನ್ಯಗಳನ್ನು ನೀಡುವಂತೆ ರಾಜ್ಯ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಲಕ್ಷಾಂತರ ಅನರ್ಹ ರೇಷನ್ ಕಾರ್ಡ್ ಪತ್ತೆ
ರಾಜ್ಯದಲ್ಲಿ ಕಡು ಬಡವರಿಗೆ, ಮಧ್ಯಮ ವರ್ಗದವರಿಗೆ ಸರ್ಕಾರದ ಮಾನದಂಡಗಳ ಆಧಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ BPL, APL, AAP ಪಡಿತರ ಚೀಟಿ ನೀಡುತ್ತದೆ. ಇವುಗಳನ್ನು ಪಡೆಯುವವರಿಗೆ ವಾರ್ಷಿಕ ಇಂತಿಷ್ಟು ಆದಾಯ ಇರಬೇಕು, ಕಾರು, ಸ್ವಂತಹ ಸೈಟು, ಮನೆಗೆ ಸಂಬಂಧಿಸಿದ ಒಂದಷ್ಟು ನಿಯಮಗಳಿವೆ. ಇದೆಲ್ಲ ನಿಯಮ ಮೀರಿ, ನಕಲಿ ದಾಖಲಾತಿಗಳ ಮೂಲಕ ರೇಷನ್ ಕಾರ್ಡ್ ಪಡೆದಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದ ಇಲಾಖೆ ಅಧಿಕಾರಿಗಳು ಒಟ್ಟು 13 ಲಕ್ಷಕ್ಕೂ ಅಧಿಕ ಅನರ್ಹ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications