ನೀರಲ್ಲಿ ಮುಳುಗುತ್ತಿದ್ದರೂ ಸೆಲ್ಫಿಯಲ್ಲೇ ಬ್ಯುಸಿಯಾದ ಸ್ನೇಹಿತರು!

ರಾಮನಗರ, ಸೆಪ್ಟೆಂಬರ್ 25: ಕಾಲೇಜು ವತಿಯಿಂದ ಎನ್‍ಸಿಸಿ ಕ್ಯಾಂಪ್ ಗೆ ತೆರಳಿದ್ದ ವೇಳೆ ವಿದ್ಯಾರ್ಥಿಯೊಬ್ಬ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರ ಕನಕಪುರ ತಾಲೂಕಿನ ರಾವುಗೋಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿನ ವಿಶ್ವಾಸ್ ಮೃತ ಪಟ್ಟಿರುವ ವಿದ್ಯಾರ್ಥಿ. ಕಾಲೇಜು ವತಿಯಿಂದ ಎನ್‍ಸಿಸಿ ಕ್ಯಾಂಪ್ ಗೆ 25 ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿತ್ತು.

Selfie craze kills a student in Ramanagara district

ಈ ವೇಳೆ ಈಜುವ ಸಲುವಾಗಿ ವಿಶ್ವಾಸ್ ಹಾಗೂ ಆತನ ಸ್ನೇಹಿತರು ರಾವುಗೋಡ್ಲು ಬಳಿ ಕಲ್ಯಾಣಿಗೆ ಇಳಿದಿದ್ದರು. ಈ ವೇಳೆ ಸ್ನೇಹಿತರ ಜತೆ ಸೇಲ್ಫಿ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ವಿಶ್ವಾಸ್ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ನಡುವೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೋಜಿನಲ್ಲಿದ್ದ ಸ್ನೇಹಿತರು ವಿಶ್ವಾಸ್ ಮುಳುಗುತ್ತಿರುವುದನ್ನ ಗಮನಿಸಲಿಲ್ಲ. ಹೀಗಾಗಿ ವಿಶ್ವಾಸ್ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕಾಲೇಜು ಆಡಳಿತ ಮಂಡಳಿಯ ಬೇವಾಬ್ದಾರಿಯಿಂದ ಈ ದುರ್ಘಟನೆ ನಡೆದಿದ್ದು, ನ್ಯಾಯ ಒದಗಿಸುವಂತೆ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+