Politics Astrology: ವೈಜ್ಞಾನಿಕ ಭವಿಷ್ಯ: ರಾಜ್ಯದಲ್ಲಿ ಬಿಜೆಪಿಗೆ ಬಹುಮತ, ಅಧಿಕಾರ ಫಿಕ್ಸ್
ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಪ್ರಕ್ರಿಯೆ ಮೇ 10ರಂದು ಬುಧವಾರ ಶಾಂತಿಯುತವಾಗಿ ಪೂರ್ಣಗೊಂಡಿದೆ. 224 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಶನಿವಾರ ಅಂದರೆ ಮೇ 13ರಂದು ಫಲಿತಾಂಶ ಹೊರಬೀಳಲಿದ್ದು ಅದಾಗಲೇ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡು ಭಾರೀ ಕುತೂಹಲವನ್ನು ಮೂಡಿಸಿವೆ. ಇದರ ನಡುವೆ ವೈಜ್ಞಾನಿಕ ಭವಿಷ್ಯವೊಂದು ಈ ಬಾರಿ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರುವವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿದೆ.
ಹೌದು... ಈ ಬಾರಿ ರಾಜ್ಯ ರಾಜಕೀಯ ವಲಯದ ಲೆಕ್ಕಾಚಾರಗಳು ಏನಾಗುತ್ತವೆ ಎನ್ನುವ ಕುತೂಹಲ ಮೂಡಿದೆ. ಈ ಬಗ್ಗೆ ಹಲವಾರು ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದಾರೆ. ಇತ್ತೀಚೆಗೆ ವೈಜ್ಞಾನಿಕ ಜ್ಯೋತಿಷ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 2023ನೇ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ? ಎಂದು ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ. ಆ ಪಕ್ಷ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ವೈಜ್ಞಾನಿಕ ಜ್ಯೋತಿಷ್ಯದ ಪ್ರಕಾರ, ಒಂದು ಪಕ್ಷ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಬಹುಮತದಿಂದ ಗೆಲ್ಲುತ್ತದೆ. ಆ ಪಕ್ಷ ಯಾವುದು ಇಲ್ಲಿದೆ ನೋಡಿ ಅದಕ್ಕೆ ಉತ್ತರ-ವೈಜ್ಞಾನಿಕ ಭವಿಷ್ಯ ಹೇಳುವ ಪ್ರಕಾರ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜೊತೆಗೆ 2023ರ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯುವುದು ಫಿಕ್ಸ್ ಎಂದು ಹೇಳಲಾಗುತ್ತದೆ. ಈ ಭವಿಷ್ಯ ನಿಜವಾಗುತ್ತಾ ಕಾದು ನೋಡಬೇಕಿದೆ.
ಈ ಹಿಂದೆ ಮೈಲಾರಲಿಂಗೇಶ್ವರ ಕ್ಷೇತ್ರದ ಗೊರವಯ್ಯ ಅವರು ಮುಂದಿನ ರಾಜಕೀಯ ಭವಿಷ್ಯ ನುಡಿದಿದ್ದರು. ಮುಂದಿನ ಸಿಎಂ ಯಾರಾಗಲಿದ್ದಾರೆಂದು ಗೊರವಯ್ಯ ಹೇಳಿದ್ದರು. ಹೆಚ್‌ಡಿ ಕುಮಾರಸ್ವಾಮಿ ಬಗ್ಗೆ ಗೊರವಯ್ಯ ರಾಜಕೀಯ ಭವಿಷ್ಯ ನುಡಿಯುವ ಮೂಲಕ ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದರು.
ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆಗೆ ಆಗಮಿಸಿದ ಗೊರವಯ್ಯ, 'ಹೆಚ್‌ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗೇ ಆಗ್ತಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಗೆದ್ದು ಬರ್ತಾರೆ' ಎಂದು ಭವಿಷ್ಯ ನುಡಿದಿದ್ದರು. ಜೊತೆಗೆ ಹೆಚ್‌ಡಿಕೆಗೆ ಮೈಲಾರಲಿಂಗೇಶ್ವರರ ಆಶೀರ್ವಾದ ಸಿಕ್ಕಿದೆ' ಎಂದು ಹೇಳಿದ್ದರು.
ಇತ್ತೀಚೆಗೆ ಟಿಕೆಟ್ ಕೈತಪ್ಪಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ರಘು ಆಚಾರ್ ಸೇರ್ಪಡೆಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ಆರಕ್ಕೆ ಆರು ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ಬೀಳಿಸುತ್ತೇವೆ. ಕಾಂಗ್ರೆಸ್‌ಗೆ ಸೋಲಿನ ಪಾಠ ಕಲಿಸಿಕೊಡುತ್ತೇವೆ ಎಂದು ಶಪತ ಕೂಡ ಆಚಾರ್ ಮಾಡಿದ್ದಾರೆ. ಇದೇ ಪ್ರಯತ್ನದಲ್ಲಿ ಇದ್ದ ರಘು ಆಚಾರ್‌ಗೆ ಸದ್ಯ ಗೊರವಯ್ಯ ನುಡಿದ ಭವಿಷ್ಯದಿಂದ ನೂರಾನೆ ಬಲ ಸಿಕ್ಕಂತಾಗಿದೆ. ಆದರೆ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ. ಯಾರ ಭವಿಷ್ಯ ನಿಜವಾಗಲಿದೆ ಎಂದು ಶನಿವಾರ ಮೇ 13ರಂದೇ ಉತ್ತರ ಸಿಗಲಿದೆ.












Click it and Unblock the Notifications