ಅನುಕಂಪದ ಆಧಾರದ ಮೇಲೆ ನೇಮಕಾತಿ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು, ಅಕ್ಟೋಬರ್‌ 11: ದಿವಂಗತ ಡಾ. ದಿಲೀಪ್ ಆರ್, ಐಪಿಎಸ್ ಇವರ ಮಗಳಾದ ಕು|| ಅದಿತಿ ಡಿ, ಇವರಿಗೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕರ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.

ಈ ಕುರಿತು ಕಾನೂನು ಸಚಿವರಾದ ಹೆಚ್‌ ಕೆ ಪಾಟೀಲ್‌ ಅವರು ಮಾತನಾಡಿ,ಮೃಣಾಲ್ ಶುಗರ್ಸ್ ಲಿ., ಪುಡಕಲಕಟ್ಟಿ, ಧಾರವಾಡ ತಾಲ್ಲೂಕು, ಧಾರವಾಡ ಜಿಲ್ಲೆ ಈ ಸಕ್ಕರೆ ಕಾರ್ಖಾನೆಯಿಂದ 7.50 ಕಿ.ಮೀ ತ್ರಿಜ್ಯಾಕಾರದಲ್ಲಿರುವ ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ನಿ., ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ ಇವರಿಂದ ಹಿಂಪಡೆಯುವುದು ಮತ್ತು ಮರುಹಂಚಿಕೆ ಮಾಡುವುದು ಸಮಂಜಸವಾಗಿರುತ್ತದೆ ಎಂದು ಪರಿಗಣಿಸಿ ಧಾರವಾಡ ಜಿಲ್ಲೆಯ 19 ಗ್ರಾಮಗಳನ್ನು ಕಬ್ಬು ಖರೀದಿಗಾಗಿ ಮರು ಹಂಚಿಕೆ ಮಾಡಿದೆ.

Recruitment on Compassionate Basis Decision in Cabinet meeting

19 ಗ್ರಾಮಗಳನ್ನು ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಹಿಂಪಡೆದು ಮೆ|| ಮೃಣಾಲ್ ಶುಗರ್ಸಗೆ ಮೀಸಲು ಕ್ಷೇತ್ರವನ್ನಾಗಿ ಹಂಚಿಕೆ ಮಾಡಲಾಗಿದೆ. ಪುಡಕಲಕಟ್ಟೆ, ಉಪ್ಪಿನ ಬೆಟಗೇರಿ, ಹನುಮನಾಳ, ಕಲ್ಲೆ, ಕಬ್ಬೇನೂರ, ಕರಡಿಗುಡ್ಡ, ತಿಮ್ಮಾಪೂರ, ಮರೇವಾಡ, ಅಮ್ಮಿನಭಾವಿ, ಹಾರೋಬೆಳವಡಿ, ಕಲ್ಲೂರ, ಲೋಕೂರ, ಶಿಬಾರಗಟ್ಟಿ, ಯಾದವಾಡ, ಮುಳಮುತ್ತಲ, ಮಂಗಳಗಟ್ಟಿ, ಲಕಮಾಪೂರ, ದಾಸನಕೊಪ್ಪ ಮತ್ತು ಕುರುಬಗಟ್ಟೆ ಒಟ್ಟು 11 ಗ್ರಾಮಗಳನ್ನು ಈ ಸಕ್ಕರೆ ಕಾರ್ಖಾನೆಗೆ ಸೇರ್ಪಡೆ ಮಾಡಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ರವರು ತಿಳಿಸಿದರು.

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಮೊಕದ್ದಮೆಗಳನ್ನು ಅಭಿಯೋಜನೆಯಿಂದ ಹಿಂಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಸಚಿವ ಸಂಪುಟದ ಉಪಸಮಿತಿ ದಿನಾಂಕ: 14.09.2023 ದಿನಾಂಕ: 28.12.2023 ಮತ್ತು ದಿನಾಂಕ: 05.09.2024 ರಂದು ನಡೆದ ಸಭೆಗಳಲ್ಲಿ ಅಭಿಯೋಜನೆಯಿಂದ ಹಿಂಪಡೆಯಲು ಶಿಫಾರಸ್ಸು ಮಾಡಿರುವ ಪ್ರಕರಣಗಳಲ್ಲಿ ಈ ಪ್ರಕರಣಗಳನ್ನು ಪುನರ್ ಪರಿಶೀಲಿಸಲು ಉಪ ಸಮಿತಿಗೆ ಕೋರಲಾಗಿತ್ತು.

ಅನುಬಂಧ-1 ರಲ್ಲಿ 43, ಅನುಬಂಧ-2 ರಲ್ಲಿ 15 ಮತ್ತು ಅನುಬಂಧ-3 ರಲ್ಲಿ 02 ಪ್ರಕರಣಗಳನ್ನು ಹಿಂಪಡೆಯಲು ಮಾನ್ಯ ಉಚ್ಛ ನ್ಯಾಯಾಲಯದ ಅನುಮತಿ ಪಡೆಯುವ ಸಂಬAಧ ಕ್ರಮವಹಿಸಲು ಮಂಡಿಸಲಾಗಿತ್ತು ಎಂದು ಕಾನೂನು ಸಚಿವರಾದ ಹೆಚ್‌ ಕೆ ಪಾಟೀಲ್‌ ವಿವರಿಸಿದರು.

ಬೆಂಗಳೂರಿನ ಓಕಳಿಪುರಂನಲ್ಲಿ ರೇಷ್ಮೆ ಇಲಾಖೆಗೆ ಸೇರಿದ 4.25 ಎಕರೆ ಜಮೀನಿನಲ್ಲಿ ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ಇವರಿಂದ ಸಂಪೂರ್ಣ ಬಂಡವಾಳ ಹೂಡಿಕೆಯೊಂದಿಗೆ ರೂ.527.50 ಕೋಟಿಗಳ ಅಂದಾಜು ಮೊತ್ತದಲ್ಲಿ "ರೇಷ್ಮೆ ಭವನ" ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಷ್ಟ್ರೀಯ ರೇಷ್ಮೆ ಕೃಷಿ ನೀತಿಯಡಿ ಕೇಂದ್ರ ರೇಷ್ಮೆ ಮಂಡಳಿ ಮತ್ತು ರಾಜ್ಯ ರೇಷ್ಮೆ ಇಲಾಖೆಯ ಪರಸ್ಪರ ಒಪ್ಪಂದದೊAದಿಗೆ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಕೇಂದ್ರ ರೇಷ್ಮೆ ಮಂಡಳಿಯು ಭರಿಸಿದ್ದು, ಈ ಕಟ್ಟಡದಲ್ಲಿ ಎರಡೂ ಕಾರ್ಯಾಲಯಗಳು ಇರುತ್ತವೆ. ಹಾಲಿ ಇರುವ ಕಟ್ಟಡವನ್ನು ಕೆಡವಿ ನೂತನ ರೇಷ್ಮೆ ಭವನವನ್ನು ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ ವತಿಯಿಂದ ಸಂಪೂರ್ಣ ವೆಚ್ಚಭರಿಸಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ೭೬೪೬೫.೨೬ ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಾಣ ಮಾಡಲಾಗುವುದು.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯನ್ನು ರೂ.200.00 ಕೋಟಿಗಳ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಪ್ರಸ್ತುತ ಇರುವ ಮಾರುಕಟ್ಟೆ ವಿಸ್ತೀರ್ಣ 5.00 ಎಕರೆ ವಿಸ್ತೀರ್ಣದಲ್ಲಿದ್ದು, ಹೈಟೆಕ್ ಮಾರುಕಟ್ಟೆ ಮಾಡಲು ಅಸಾಧ್ಯ. ಪ್ರತಿನಿತ್ಯ 1500 ರಿಂದ 2000 ಜನ ವಹಿವಾಟಿನಲ್ಲಿ ಭಾಗವಹಿಸುತ್ತಿ ರುವುದರಿಂದ ಹೆಚ್ಚಿನ ಜನಸಂದಣಿಯಿಂದಾಗಿ ಸುಗಮ ವಹಿವಾಟಿಗೆ ಧಕ್ಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+