ಗ್ಯಾರಂಟಿಗಾಗಿ ಜೂನ್​ 1 ರಿಂದ ಹೋರಾಟ ಮಾಡುತ್ತೇವೆ ಎಂದ ಪ್ರತಾಪ್‌ ಸಿಂಹ ಗೆ ತಿರುಗೇಟು ಕೊಟ್ಟ ರಾಮಲಿಂಗರೆಡ್ಡಿ

ಬೆಂಗಳೂರು, ಮೇ 26: ಗ್ಯಾರಂಟಿಗಳ ಯೋಜನೆಗಳಿಗೆ ಷರತ್ತುಗಳು ಇಲ್ಲದೆ ಗ್ಯಾರಂಟಿಗಳನ್ನು ಜಾರಿಮಾಡಬೇಕು. ಒಂದು ವೇಳೆ ಷರತ್ತು ವಿಧಿಸಿದರೆ ಜೂನ್​ 1ರಿಂದ ಹೋರಾಟ ಮಾಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ನೂತನ ಸಚಿವ ರಾಮಲಿಂಗರೆಡ್ಡಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರತಾಪ್‌ ಸಿಂಹ ಯಾವ ಪ್ರತಿಭಟನೆ ಮಾಡುವುದು ಬೇಕಿಲ್ಲ. ಎಲ್ಲ ಬೇಡಿಕೆ ಈಡೇರಿಸುತ್ತೇವೆ ಎಂದು ತಿರುಗೇಟು ನೀಡಿದ್ದ ಅವರು, ನಮ್ಮ ಸರ್ಕಾರ ಬಂದು ಒಂದು ವಾರ ಆಗಿದೆ. ನಾವು ಎಲ್ಲ ಬೇಡಿಕೆ ಈಡೇರಿಸುತ್ತೇವೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ 600 ಭರವಸೆ ನೀಡಿತ್ತು ಇದರಲ್ಲಿ 60 ಅಷ್ಟೇ ಈಡೇರಿಸಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಹೇಳಿದ್ರು. ಎಲ್ಲರ ಖಾತೆಗೂ ಹಣ ಹಾಕಿದ್ರಾ ಎಂದು ಸಂಸದ ಪ್ರತಾಪ್‌ ಸಿಂಹ ಅವರಿಗೆ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

Ramalinga reddy

ಬಿಜೆಪಿಯಲ್ಲಿನ ಮಾತುಗಾರರು ಈ ವರ್ಷ ಎಲ್ಲ ಮನೆ ಸೇರಿದ್ದಾರೆ. ಸಿಟಿ ರವಿ, ಡಾ. ಕೆ. ಸುಧಾಕರ್, ಪಿ ರಾಜೀವ್ ಹಾಗೂ ರೇಣುಕಾಚಾರ್ಯ ಎಲ್ಲರೂ ಮನೆ ಸೇರಿದ್ದಾರೆ ಎಂದು ಕಿಡಿಕಾರಿದರು.

ಇನ್ನೂ ಈ ಹಿಂದೆ ಇಂದಿರಾ ಕ್ಯಾಂಟೀನ್ ಆರಂಭ ಮಾಡಿದ್ದೆ ಕಾಂಗ್ರೆಸ್ ಸರ್ಕಾರ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಕ್ಯಾಂಟೀನ್ ಆರಂಭ ಮಾಡಲಾಗಿದೆ. ಬಿಜೆಪಿ ಸರ್ಕಾರ ಬಂದ ನಂತರ ಹಣ ನೀಡದೇ ಮುಚ್ಚಿ ಹೋಗಿತ್ತು. ಪ್ಲಾನ್ ಮಾಡಿ ಕ್ಯಾಂಟೀನ್ ಕ್ಲೋಸ್ ಮಾಡಿದ್ರು. ಈ ವಿಚಾರವಾಗಿ ನಾವು ಹಲವು ಬಾರೀ ಹೋರಾಟ ಮಾಡಿದ್ದೇವೆ, ಬಿಜೆಪಿಪ ಸರ್ಕಾರದ ನಿರ್ಲಕ್ಷ್ಯದಿಂದ ಮುಚ್ಚಿ ಹೋಗಿತ್ತು ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿರಿಕಾರಿದರು.

ಇಂದಿರಾ ಕ್ಯಾಂಟೀನ್ ಹೆಸರು ಬಿಜೆಪಿ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಇಂದಿರಾಗಾಂಧಿ ಹೆಸರು ಅಂದ್ರೆ ಅವರಿಗೆ ಯಾಕಿಷ್ಟು ಬೇಸರ ಗೊತ್ತಿಲ್ಲ. ಬೆಂಗಳೂರಿಗೆ ಬೇರೆ ಬೇರೆ ಊರಿಂದ ಜನರು ಬರ್ತಾರೆ. ಬೆಂಗಳೂರಿಗರಿಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಆಗಲಿ ಅಂತಾ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆ ಇತ್ತು ಈಗ ಅದನ್ನ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸರ್ಕಾರ ಮುಂದೆ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಯನ್ನ ನೇಮಕ ಮಾಡಿದ್ರೆ ಒಳ್ಳೆಯದು. ಸ್ವಚ್ಚತೆ ಕಾಪಾಡಲು, ಊಟ ನಿರ್ವಹಣೆ, ಟೋಕನ್ನ ಎಲ್ಲವನ್ನೂ ನಿರ್ವಹಣೆಗೆ ಅಧಿಕಾರಿಯ ನೇಮಕವಾದ್ರೆ ಉತ್ತಮ. ಕ್ವಾಲಿಟಿ, ಕ್ವಾಂಟಿಟಿ ಚೆನ್ನಾಗಿ ಮಾಡುತ್ತೆವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+