ಉತ್ತರ ಕರ್ನಾಟಕಕ್ಕೆ ಗುಡ್‌ನ್ಯೂಸ್: 112 ನಗರ ಬಸ್‌ಗಳಿಗೆ ಚಾಲನೆ, 400 ಹೊಸ ಬಸ್‌ಗಳ ಸೇರ್ಪಡೆ ಶೀಘ್ರ
ವಿಜಯಪುರ: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ವಿದ್ಯುತ್ ಚಾಲಿತ್ ಬಸ್‌ಗಳ ಖರೀದಿ ಸೇರಿದಂತೆ ಹೊಸ ಬಸ್‌ಗಳನ್ನು ಸಾರಿಗೆ ಸಂಸ್ಥೆಗಳಿಗೆ ಸೇರ್ಪಡೆಗೊಳಿಸುವ ಉಪಕ್ರಮ ಜಾರಿಯಲ್ಲಿದೆ. ಅದರ ಭಾಗವಾಗಿ 112 ನೂತನ ನಗರ ಸಾರಿಗೆ ಬಸ್ ವಾಹನಗಳ ಕಾರ್ಯಾಚರಣೆಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ ಚಾಲನೆ ನೀಡಿದರು. ಇದರೊಂದಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ಪ್ರಯಾಣಿಕರಿಗೂ ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 112 ನಗರ ಸಾರಿಗೆ ವಾಹನಗಳಿಗೆ ಸಚಿವರು ಹಸಿರು ನಿಶಾನೆ ತೋರಿಸಿದರು. ಒಟ್ಟು ನೂತನ ನಗರ ಸಾರಿಗೆ ಬಸ್ ಗಳನ್ನು ನಗರ ಭೂ ಸಾರಿಗೆ ನಿರ್ದೇಶನಾಲಯ, (Directorate of Urban Land Transport (DULT)) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಯೋಜನೆ ಯಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಈ ವಾಹನಗಳನ್ನು ವಿಜಯಪುರ ವಿಭಾಗಕ್ಕೆ 27, ವಿಜಯನಗರಕ್ಕೆ 25, ಕಲಬುರಗಿಗೆ 25, ರಾಯಚೂರಿಗೆ 18, ಬಳ್ಳಾರಿಗೆ 10, ಬೀದರಕ್ಕೆ 04 ಮತ್ತು ಯಾದಗಿರಿಗೆ 03 ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ವಿಜಯಪುರಕ್ಕೆ ಮತ್ತೆ 30, ಕೆಕೆಆರ್‌ಟಿಸಿಗೆ 400 ಹೊಸ ಬಸ್‌ಗಳು
ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿರುವ 30 ಬಸ್ ಗಳನ್ನು ಅವಶ್ಯವಿರುವ ವಿಭಾಗ/ಘಟಕಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ತೀರ್ಮಾನಿಸಿ ನಿಯೋಜಿಸಬೇಕೆಂದು ಅವರು ನಿರ್ದೇಶನ ನೀಡಿದರು.
ವಿಜಯಪುರದ ಹೊಸ ಬಸ್‌ಗಳ ಸೇವೆ ಚಾಲನೆ ನೀಡಿದ ರಾಮಲಿಂಗಾ ರೆಡ್ಡಿ ಅವರು, ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆಗೆ 400 ಹೊಸ ಬಸ್ಸುಗಳನ್ನು ಸೇರ್ಪಡೆ ಗೊಳಿಸಲು ಈಗಾಗಲೇ ಸರ್ಕಾರ ಕಾರ್ಯಾದೇಶ ನೀಡಿದೆ. ಆದಷ್ಟು ಶೀಘ್ರವೇ ಹೊಸ ಬಸ್‌ಗಳು ಈ ಭಾಗದ ಜನರ ಸೇವೆಗೆ ನಿಯೋಜನೆಗೊಳ್ಳಲಿವೆ ಎಂದರು. ವಿಜಯಪುರಕ್ಕೆ ಹೊಸ ಬಸ್‌ಗಳ ಸೇರ್ಪಡೆ ಹರ್ಷ ತಂದಿದೆ ಎಂದು ಕಾರ್ಯಕ್ರಮದಲ್ಲಿದ್ದ ಕೈಗಾರಿಕೆ ಸಚಿವ ಮತ್ತು ವಿಜಯಪುರ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿದರು.

ಕಲ್ಯಾಣ ಕರ್ನಾಟಕಕ್ಕೆ ಎಸಿ, 225 ಇವಿ ಬಸ್
ಕಲ್ಯಾಣ ಕರ್ನಾಟಕ ಭಾಗಕ್ಕೆ 56 ಪ್ರತಿಷ್ಠಿತ ವಾಹನಗಳ ಸೇರ್ಪಡೆ ಮಾಡಲು ಆದೇಶಿಸಲಾಗಿದೆ. ಅದರಲ್ಲಿ, 20 ಎಸಿ ಸ್ಲೀಪರ್, 20 ನಾನ್ ಎಸಿ ಸ್ಲೀಪರ್ ಮತ್ತು 16 ಎಸಿ ಸೀಟರ್ ವಾಹನಗಳಾಗಿರುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಹೊಸದಾಗಿ 225 ವಿದ್ಯುತ್ ಚಾಲಿತ ವಾಹನಗಳನ್ನು ಸೇರಿಸಲಾಗುತ್ತಿದೆ. ಅದರಲ್ಲಿ ಕಲಬುರ್ಗಿ ಜಿಲ್ಲೆಗೆ 100, ವಿಜಯಪುರ ಜಿಲ್ಲೆಗೆ 75 ಮತ್ತು 50 ಬಸ್ಸುಗಳನ್ನು ಬಳ್ಳಾರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಾರಿಗೆ ಕ್ರಾಂತಿಗೆ ಸಾಕ್ಷಿಯಾದ ವಿಜಯಪುರ: ಎಂಬಿ ಪಾಟೀಲ್
ವಿಜಯಪುರ ನಗರ ಸಾರಿಗೆಗೆ ಇಂದು ಅತ್ಯಂತ ಮಹತ್ವದ ದಿನ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವತಿಯಿಂದ ವಿಜಯಪುರ ನಗರಕ್ಕೆ 25ಕ್ಕೂ ಹೆಚ್ಚು ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರೊಂದಿಗೆ ಹಸಿರು ನಿಶಾನೆ ತೋರಲಾಯಿತು. ಇಂದು ಒಟ್ಟಾರೆಯಾಗಿ ಕೆಕೆಆರ್‌ಟಿಸಿ ಗೆ 100ಕ್ಕೂ ಹೆಚ್ಚು ಬಸ್ ಗಳು ಸೇರ್ಪಡೆಯಾಗಿರುವುದು ಸಂತಸದ ವಿಷಯ.
ಕಳೆದ 4 ವರ್ಷಗಳಿಂದ ನೂತನ ಬಸ್ ಗಳ ಸೇರ್ಪಡೆ ಆಗದೇ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿತ್ತು. ಇದೀಗ ಒಟ್ಟಿಗೇ ಕೆಕೆಆರ್‌ಟಿಸಿ ವೃಂದಕ್ಕೆ 100ಕ್ಕೂ ಹೆಚ್ಚು ಬಸ್ ಗಳು ಸೇರ್ಪಡೆಯಾಗಿರುವುದು ಜನರ ಸಾರಿಗೆ ವ್ಯವಸ್ಥೆ ಸುಧಾರಿಸಲಿದೆ. ಇದರಲ್ಲಿ ವಿಜಯಪುರ ನಗರಕ್ಕೆ 25 ಬಸ್ ಗಳು ಬಳಕೆಯಾಗಲಿದ್ದು, ನಗರ ಸಾರಿಗೆ ಮತ್ತಷ್ಟು ಸುಲಭವಾಗಿದೆ ಎಂದು ಹೇಳಿದರು.












Click it and Unblock the Notifications