Rain Alert: ಮಳೆ.. ಮಳೆ.. ಮುಂದಿನ 48 ಗಂಟೆ ಅಬ್ಬರಿಸಲಿದೆ ಮಳೆ! ಯಾವ ಯಾವ ಜಿಲ್ಲೆಗಳಲ್ಲಿ?

ಮುಂಗಾರು ಮಳೆ 2024ರ ಆರ್ಭಟವು, ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. ಈ ಸಮಯದಲ್ಲೇ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಬಂದಿತ್ತು. ಕರ್ನಾಟಕದ ಹಲವು ಜಿಲ್ಲೆಗಳಿಗೆ ವರುಣ ದೇವನ ಸಿಂಚನ ಹೆಚ್ಚೇ ಆಗಿತ್ತು. ಹೀಗಿದ್ದಾಗ ಮತ್ತೆ ಮಳೆಯ ಅಬ್ಬರದ ಮುನ್ಸೂಚನೆ ಸಿಕ್ಕಿದ್ದು, ಯಾವೆಲ್ಲಾ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆ? ಹವಾಮಾನ ಇಲಾಖೆ ಯಾವೆಲ್ಲಾ ಪ್ರದೇಶಗಳಿಗೆ ಈ ಸಮಯದಲ್ಲಿ ಮಳೆ ಮುನ್ನೆಚ್ಚರಿಕೆ ನೀಡಿದೆ? ಬನ್ನಿ ತಿಳಿಯೋಣ.

ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಉತ್ತಮವಾಗಿ ಮಳೆ ಬಿದ್ದಿದ್ದು, ರೈತರು ಫುಲ್ ಖುಷಿಯಾಗಿ ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಹಾಗೇ ಕರ್ನಾಟಕದಲ್ಲಿ ಈ ಬಾರಿ ಎಲ್ಲಾ ದೊಡ್ಡ ದೊಡ್ಡ ಡ್ಯಾಂಗಳು ತುಂಬಿವೆ. ಜೊತೆಗೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಆಗುವಷ್ಟು ಮಳೆ ಬಿದ್ದಿದೆ. ಹೀಗಿದ್ದರೂ ವರುಣ ದೇವ ಸೈಲೆಂಟ್ ಆಗುತ್ತಿಲ್ಲ, ಬದಲಾಗಿ ಮತ್ತೆ ವೈಲೆಂಟ್ ಆಗಿದ್ದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಈ ಪೈಕಿ ಯಾವ ಭಾಗದಲ್ಲಿ ಹೆಚ್ಚಿನ ಮಳೆ ಆಗಲಿದೆ? ಮುಂದೆ ಓದಿ.

Rain Alert Given To Karnataka And Bengaluru From 02 September Of 2024

ಮಳೆ.. ಮಳೆ.. ಮುಂಗಾರು ಮಳೆ!

ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಪ್ರಕಾರ ಮುಂದಿನ 2 ದಿನಗಳ ಕಾಲ ಅಂದ್ರೆ 48 ಗಂಟೆ ಕಾಲ ಭರ್ಜರಿ ಮಳೆ ಬೀಳಲಿದೆಯಂತೆ. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ಉತ್ತರ ಕರ್ನಾಟಕದ ಕಲಬುರಗಿ, ಬೀದರ್, ಬಾಗಲಕೋಟೆ, ಬೆಳಗಾವಿ, ಗದಗ ಸುತ್ತಮುತ್ತ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಹಾಗೇ ರಾಯಚೂರು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿ ಇರಲಿದ್ದು, ಮುನ್ನೆಚ್ಚರಿಕೆ ವಹಿಸಲಾಗಿದೆ. ಹೀಗಿದ್ದಾಗ ಮುಂಗಾರು ಮಳೆ ಆರ್ಭಟ ಕಡಿಮೆ ಆಗಲಿ ದೇವರೇ ಅಂತಾ ಜನರು ಬೇಡುವ ಪರಿಸ್ಥಿತಿ ಬಂದಿದೆ. ಹೀಗೆ ಭಾರಿ ಮಳೆಯ ನಡುವೆ ಕರ್ನಾಟಕದ ನದಿಗಳು ಮತ್ತೆ ಉಕ್ಕಿ ಹರಿಯುತ್ತಿವೆ. ಕೆರೆಗಳು ತುಂಬಿ & ಡ್ಯಾಂಗಳ ನೀರು ಹೊರಗೆ ಹರಿಯುತ್ತಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಈ ಬಾರಿ ನೀರಿನ ಸಮಸ್ಯೆ ಇರುವುದಿಲ್ಲ ಎಂಬ ನೆಮ್ಮದಿ ಸಿಕ್ಕಂತಾಗಿದೆ.

ಮುಂದಿನ 3 ದಿನ ಮಳೆ!

ಕರ್ನಾಟಕದ ಮಲೆನಾಡು & ಕರಾವಳಿ ಜಿಲ್ಲೆಗಳಲ್ಲಿ ಕೂಡ ಮುಂದಿನ 3 ದಿನ ಅಂದ್ರೆ 72 ಗಂಟೆ ಕಾಲ ಭರ್ಜರಿ ಮುಂಗಾರು ಮಳೆ ಬೀಳಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮತ್ತೆ ಮಳೆರಾಯ ಆರ್ಭಟಿಸುವುದು ಪಕ್ಕಾ ಎನ್ನಲಾಗಿದೆ. ಇದರ ಜೊತೆ ಮಲೆನಾಡು ಭಾಗದಲ್ಲೂ ಮಳೆ ಆರ್ಭಟ ಮುಂದುವರಿಯಲಿದೆ. ಹೀಗೆ ಮತ್ತೆ ಭೂಕುಸಿತ ಹಾಗು ಗುಡ್ಡ ಕುಸಿತದ ಆತಂಕ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲು ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+