PST Scam: ಪಿಎಸ್ ಐ ನೇಮಕಾತಿ ಅಕ್ರಮ; ನ್ಯಾಯಾಂಗ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿಗೆ: ಡಾ.ಜಿ ಪರಮೇಶ್ವರ್
ಬೆಂಗಳೂರು, ಜುಲೈ 22: ಬಿಜೆಪಿ ಅವಧಿಯಲ್ಲಿ ನಡೆದ ಹಲವು ಪ್ರಕರಣಗಳ ಪೈಕಿ, ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಬಿಜೆಪಿ ನಾಯಕರು ತೀವ್ರ ವಿರೋಧವನ್ನ ವ್ಯಕ್ತಪಡಿಸಿದ್ದಾರೆ. ಪಿಎಸ್ ಐ ಹಗರಣ ನ್ಯಾಯಾಂಗ ತನಿಖೆಗೆ ವಹಿಸಿದ್ದು,ದ್ಷೇಷದ ರಾಜಕಾರಣ ಎಂದು ಬೊಮ್ಮಾಯಿ ಕಿಡಿಕಾರಿದ್ದಾರೆ.
ಇನ್ನೂ ಈ ಕುರಿತು ಗೃಹ ಸಚಿವ ಡಾ. ಜಿ ಪರಮೇಶ್ವರ ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಿದ್ದೇವೆ. ನ್ಯಾಯಾಂಗ ತನಿಖೆ ಆಗಬೇಕು ಎಂದು ಹಿಂದೆ ನಾವೇ ಹೇಳಿದ್ದೇವು. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಹೇಳಿದರು.

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣವನ್ನು ನ್ಯಾಯಾಂಗ ತನಿಖೆಗೆ ನೀಡಿದ್ದೇವೆ. ನಿವೃತ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರನ್ನು ನೇಮಕ ಮಾಡಲಾಗಿದ್ದು, ಏಕ ಸದಸ್ಯತ್ವ ಸಮಿತಿ ತನಿಖೆ ನಡೆಸಲಿದೆ. ಸತ್ಯಾಸತ್ಯತೆಗಳನ್ನು ಹೊರಗೆ ತರಬೇಕು ಎಂದು ಕೊಟ್ಟಿದ್ದೇವೆ ಎಂದು ತನಿಖೆ ಬೇರೆ ಮಾಡುತ್ತೇವೆ, ನೇಮಕಾತಿಯ ಪ್ರಕ್ರಿಯೆ ಬೇರೆ ಮಾಡುತ್ತೇವೆ ಎಂದು ಹೇಳಿದ ಅವರು, ಈಗಾಗಲೇ ಇನ್ನೊಂದು ನೇಮಕಾತಿ ಆಗಬೇಕು. 400 ಹುದ್ದೆಗಳು ಖಾಲಿ ಇವೆ. ಅವುಗಳನ್ನು ನೇಮಕ ಮಾಡಬೇಕೆಂದರೂ ಈ ಪ್ರಕರಣ ಇತ್ಯರ್ಥ ಆಗಬೇಕು ಎಂದರು.
ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವರಾದ ಪ್ರಿಯಾಂಕಾ ಖರ್ಗೆ ಅವರು,ಅವರ ಇಲಾಖೆ, ನಮ್ಮ ಇಲಾಖೆ ಸಂಬಂಧಿಸಿದಂತೆ ಚರ್ಚೆ ಮಾಡಿದ್ದೇವೆ. ಇಲಾಖೆಗಳ ಮಧ್ಯ ಸಮನ್ವಯ ಇರಬೇಕಲ್ವಾ. ಅದಕ್ಕೆ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಸಿಎಂ ಆಯ್ಕೆ ಮಾಡೋದು ಗೊತ್ತು, ಕೆಳಗೆ ಇಳಿಸೋದು ಗೊತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಹೇಳಿಕೆಗೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿ.ಕೆ.ಹರಿಪ್ರಸಾದ್ ಹಿರಿಯ ನಾಯಕರು. ಅವರು, ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಈ ವಿಚಾರದಲ್ಲಿ ನನಗೆ ಏನೂ ಗೊತ್ತಿಲ್ಲ. ಮುಖ್ಯಮಂತ್ರಿಗಳು ಸಮರ್ಥರಿದ್ದಾರೆ, ಈ ಬಗ್ಗೆ ಅವರೇ ಉತ್ತರಿಸುತ್ತಾರೆ ಎಂದು ಹೇಳಿದರು.
ಬಿ ಕೆ ಹರಿಪ್ರಸಾದ್ ಪರ ಅಖಾಡಕ್ಕಿಳಿದ ಸ್ವಾಮೀಜಿ ಪ್ರಣವಾನಂದ
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನ ಹೊರ ಹಾಕಿರುವ ಬಿ ಕೆ ಹರಿಪ್ರಸಾದ್, ನನಗೆ ಸಿಎಂ ಮಾಡುವುದು ನನಗೆ ಗೊತ್ತಿದೆ. ಅವರನ್ನು ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ. ಇನ್ನೂ ಬಿ ಕೆ ಹರಿಪ್ರಸಾದ್ ಪರ ಪ್ರಣವಾನಂದ ಸ್ವಾಮೀಜಿ ಅಖಾಡಕ್ಕಿಳಿದಿದ್ದು, ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನಮ್ಮ ಸಮುದಾಯವನ್ನು ತುಳಿಯುತ್ತಿದ್ದಾರೆ. 45 ವರ್ಷ ರಾಜಕೀಯ ಅನುಭವ ಇರುವ ವ್ಯಕ್ತಿ ಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಇದರ ವಿರುದ್ದ ರಾಷ್ಟ್ರದ್ಯಂತ ಹೋರಾಟ ಮಾಡುತ್ತೇವೆ. ಸಮುದಾಯಕ್ಕೆ ನ್ಯಾಯ ಕೊಡಬೇಕು. ಹೈ ಕಮಾಂಡ್ ನಾಯಕರು ಇದನ್ನು ಗಮನಿಸಬೇಕು.ಈ ಸರ್ಕಾರ ಯಾರೋ ಇಬ್ಬರಿಂದ ಅಧಿಕಾರಕ್ಕೆ ಬಂದಿಲ್ಲ ಅನ್ನೋದನ್ನೂ ಕಾಂಗ್ರೆಸ್ ನೆನಪಿಟ್ಟುಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಅಹರ್ತೆ ಇದ್ದ ಹರಿಪ್ರಸಾದ್ ರನ್ನು ಮುಖ್ಯಮಂತ್ರಿ ಆಗುವ ವೇಳೆ ಪ್ರಮುಖ ಐದು ಷರತ್ತು ಇಟ್ಟು ಅವರನ್ನು ಕ್ಯಾಬಿನೆಟ್ ಗೆ ತೆಗೆದುಕೊಳ್ಳದೆ ದೂರ ಇಟ್ಟವರು ಇದನ್ನು ಗಮನಿಸಬೇಕು. ಹೊರಗಿನಿಂದ ಬಂದವರಿಂದಲೇ ಕಾಂಗ್ರೆಸ್ ಹಾಗೂ ಮೂಲ ಕಾಂಗ್ರೆಸ್ ಮೇಲೆ ದೌರ್ಜನ್ಯವಾಗುತ್ತಿದೆ. ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ಗಮನಿಬೇಕು. ಬಿ.ಕೆ ಹರಿಪಸ್ರಾದ್ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ.
ರಾಜ್ಯದಲ್ಲಿ ಸರ್ಕಾರ ಬರಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹಾಗೂ ಹರಿಪಸ್ರಾದ್ ಪ್ರಮುಖರು. ಪರಿಷತ್ ನ ವಿರೋಧ ಪಕ್ಷದ ನಾಯಕರಾಗಿದ್ದರು, ಆದರೆ ಹರಿಪಸ್ರಾದ್ ಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ವಿಷಯವನ್ನ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ, ಅವರು ಬೇರೆ ಪಕ್ಷದಿಂದ ಹಾರಿ ಬಂದವರಲ್ಲ. ಕಾಂಗ್ರೆಸ್ ಪಕ್ಷದಲ್ಲೇ ಹಲವು ದಶಕಗಳಿಂದ ಕೆಲಸ ಮಾಡುತ್ತಿರುವವರು. ಜನಾರ್ಧನ ಪೂಜಾರಿ, ಹೆಚ್.ಜಿ ರಾಮುಲು, ಜಾಲಪ್ಪರನ್ನ ಮುಗಿಸಿದರು, ಈಗ ಹರಿಪಸ್ರಾದ್ ಧ್ವನಿ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು.












Click it and Unblock the Notifications