BREAKING : ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಕಾರು ಅಪಘಾತ
ತುಮಕೂರು : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಅಪಘಾತಕ್ಕೆ ಈಡಾಗಿದೆ. ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ತಮ್ಮ ಹೊಸ ಸಿನಿಮಾ ವಿಷ್ಣುಪ್ರಿಯ ಸಿನಿಮಾ ಪ್ರಚಾರಕ್ಕಾಗಿ ದಾವಣಗೆರೆಗೆ ತೆರಳುತ್ತಿರುವ ವೇಳೆ ಶಿರಾ ಬಳಿ ಅವರ ಬಿಎಂಡಬ್ಲು ಕಾರು ಅಪಘಾತಕ್ಕೆ ಈಡಾಗಿದೆ.
ಈ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಹಾಗೂ ನಟ ಶ್ರೆಯಸ್ ಅವರ ಐಶಾರಾಮಿ ಕಾರಿನ ಒಂದು ಭಾಗಕ್ಕೆ ತೀವ್ರ ಏಟಾಗಿದ್ದು ಮಿರರ್ ಮುರಿದು, ಸಾಕಷ್ಟು ಡೆಂಟ್ ಆಗಿದೆ. ಅಪಘಾತ ಆದ ಕೂಡಲೇ ಸ್ಥಳೀಯ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರಿನ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಶ್ರೆಯಸ್ ಮಂಜು, ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೇ ದೂರು ಸಹ ದಾಖಲಿದ್ದಾರೆ. ಈ ಅಪಘಾತದಲ್ಲಿ ಶ್ರೆಯಸ್ ಮಂಜುಗೆ ಯಾವುದೇ ಗಾಯಗಳಾಗಿಲ್ಲ.

ಈ ಕಾರು ಆಕ್ಸಿಡೆಂಟ್‌ನಿಂದ ನಟ ಶ್ರೇಯಸ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಓವರ್ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಇದ್ದ ಕಾರಿಗೆ ಗುದ್ದಿಕೊಂಡ ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿನಿಮಾ ಪ್ರಮೋಶನ್‌ಗೆ ಹೋಗುತ್ತಿದ್ದ ನಟ ಶ್ರೇಯಸ್ ಈ ಒಂದು ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಅಪಘಾತದಲ್ಲಿ ಜೊತೆಯಲ್ಲಿರುವವರು ಶಾಕ್ ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications