Priyank Kharge: 'ವಕ್ಫ್ ಹಗರಣ ಮುಚ್ಚಿ ಹಾಕಲು ವಿಜಯೇಂದ್ರ ಅನ್ವರ್ ಮಣಪ್ಪಾಡಿಗೆ 150 ಕೋಟಿ ಹಣದ ಆಮಿಷ ಒಡ್ಡಿದೇಕೆ?'
ಬೆಂಗಳೂರು, ಡಿಸೆಂಬರ್ 14: ಬಿಜೆಪಿಯ ವಕ್ತಾರ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರರವರು ಬೃಹತ್ ವಕ್ಫ್ ಹಗರಣದ ಬಗ್ಗೆ ನನಗೆ ಹಣದ ಆಮಿಷ ಒಡ್ಡಿ ವಕ್ಫ್ ವರದಿಯನ್ನು ಮುಚ್ಚಿಹಾಕಲು ಲಂಚ ನೀಡಲು ಪ್ರಯತ್ನಿಸಿದರು ಎಂದು ಮಣಪ್ಪಾಡಿ ಹೇಳಿದ್ದಾರೆ.

ಮಾಣಿಪ್ಪಾಡಿ ಅವರು ಮಾಜಿ ಮುಖಖ್ಯಮಂತ್ರಿ ಮತ್ತು ಅವರ ಪುತ್ರನ ಭ್ರಷ್ಟಾಚಾರದ ಬಗೆಗಿನ ದೂರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದ ಜೆ.ಪಿ ನಡ್ದಾ ಅವರಿಗೆ ಸಲ್ಲಿಸಿ, ಇದು "ಸಬ್ಕಾ ಸಾಥ್, ಸಬ್ಕಾ ವಿಕಾಸ್" ಎಂಬ ಪ್ರಧಾನಮಂತ್ರಿಯ ದೃಷ್ಟಿಕೋನವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷರು ತಮ್ಮದೇ ಪಕ್ಷದ ವ್ಯಕ್ತಿಗೆ ಲಂಚ ನೀಡಲು ಪ್ರಯತ್ನಿಸಿದ್ದೇಕೆ? ವಕ್ಫ್ ವರದಿಯನ್ನು ಮುಚ್ಚಿಹಾಕಲು ವಿಜಯೇಂದ್ರರಿಗೆ ಅಷ್ಟೊಂದು ಆಸಕ್ತಿ ಏಕೆ? ಮಾಣಿಪ್ಪಾಡಿಯವರು ಬೈದಾಗ ಓಡಿ ಹೋದದ್ದೇಕೆ? ವಕ್ಫ್ ಅಧ್ಯಕ್ಷರಿಗೆ 150 ಕೋಟಿ ಲಂಚ ನೀಡಲು ಪ್ರಯತ್ನಿಸಿದ್ದರ ಬಗ್ಗೆ ಪ್ರಧಾನಿ ಏಕೆ ಮೌನವಾಗಿದ್ದಾರೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರ ಮೇಲೆ ಮಾಣಿಪ್ಪಾಡಿಯವರು ಮಾಡಿದ್ದ ಆರೋಪಗಳು ಸುಳ್ಳಾಗಿದ್ದರೆ, ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ? ರಾಜ್ಯಾಧ್ಯಕ್ಷರು ಈ ಆರೋಪಗಳನ್ನು ಏಕೆ ನಿರಾಕರಿಸಲಿಲ್ಲ? ತಮ್ಮ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದಾಗ ಬಿಜೆಪಿ ಪಕ್ಷ ಏಕೆ ಮೌನವಾಗಿತ್ತು? ವಕ್ಫ್ ವಿಷಯಗಳ ಬಗ್ಗೆ ಕಾಂಗ್ರೆಸ್ ಅನ್ನು ಪ್ರಶ್ನಿಸುವ ಮೊದಲು, ಬಿಜೆಪಿ ಮತ್ತು ಅದರ ಅಧ್ಯಕ್ಷರು ಶ್ರೀ ಮಾಣಿಪ್ಪಾಡಿಯವರ ಆರೋಪಗಳ ಬಗೆಗಿನ ಸ್ಪಷ್ಟನೆಯನ್ನು ತಮ್ಮ ಪಕ್ಷದವರಿಗೆ ಮತ್ತು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.












Click it and Unblock the Notifications